ಚಿಕ್ಕಮಗಳೂರು: ಮಹಾತ್ಮ ಗಾಂಧಿ ಮತ್ತಿತರರ ಹೋರಾಟ, ತ್ಯಾಗ, ಬಲಿದಾನಗಳಿಂದ ದೇಶ ಸ್ವತಂತ್ರ ಗಳಿಸಿತು ಎಂಬುದು ಅರ್ಧ ಸತ್ಯ. ನಿಜವಾದ ಸತ್ಯ ಏನೆಂದರೆ, ೧೯೪೭ಕ್ಕಿಂತ ಪೂರ್ವದಲ್ಲೇ ವೀರ ಸಾವರ್ಕರ್ ನೇತೃತ್ವದಲ್ಲಿ ಅನೇಕ ಹೋರಾಟಗಾರರು ಧ್ವಜ ಹಾರಿಸುವ ಮೂಲಕ ದೇಶ ಸ್ವತಂತ್ರ ಗಳಿಸಿತ್ತು ಎಂದು ವಿಧಾನ ಪರಿಷತ್ಸದಸ್ಯ ಸಿ.ಟಿ.ರವಿ ತಿಳಿಸಿದರು.
ಅವರು ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿ ಒಗ್ಗಟ್ಟಿನ ಕೊರತೆಯಿಂದ ಪರಕಿಯರು ದಾಳಿ ನಡೆಸಿದ್ದ ಪರಿಣಾಮ ಸ್ವತಂತ್ರ ರಕ್ಷಿಸಿಕೊಳ್ಳಲು ಸಾಧ್ಯವಾಗದೆ ದೇಶ ಮತ್ತೆ ಪರಿಕಿಯರ ಪಾಲಾಗಿತ್ತು ಎಂಬುದು ಪೂರ್ಣ ಸತ್ಯ ಎಂದು ಹೇಳಿದರು.
ನೆರೆ ರಾಷ್ಟ್ರಗಳಾದ ಭೂತನ್, ಬಾಂಗ್ಲಾದೇಶ, ನೇಪಾಳ ದೇಶಗಳಲ್ಲಿ ದೇಶ ಆಸ್ತಿರಗೊಳಿಸುವ ಕೃತ್ಯಗಳು ನಡೆದಿವೆ. ನಮ್ಮ ದೇಶದಲ್ಲಿ ಇಂತಹ ಸಂಚುಗಳನ್ನು ವಿಫಲಗೊಳಿಸಲು ಮತ್ತು ಸಾಮರಸ್ಯ ಕದಡದಂತೆ ನಾವೆಲ್ಲರೂ ಒಗ್ಗಟ್ಟಿನಿಂದ ಜಾಗೃತರಾಗಿರಬೇಕು ಎಂದು ಕರೆ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ನಗರ ಬಿಜೆಪಿ ಮಂಡಲ ಅಧ್ಯಕ್ಷ ಪುಷ್ಪರಾಜ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಡಾ.ನರೇಂದ್ರ, ಬೆಳವಾಡಿ ರವೀಂದ್ರ, ಮುಖಂಡರಾದ ಪ್ರೇಮಕುಮಾರ್, ಕೋಟೆ ರಂಗನಾಥ್, ಸಿ ಎಚ್. ಲೋಕೇಶ್, ಬಿ. ರಾಜಪ್ಪ, ನಾರಾಯನಗೌಡ, ಹಿರೇಮಗಳೂರು ಪುಟ್ಟಸ್ವಾಮಿ, ಕುರುವಂಗಿ ವೆಂಕಟೇಶ್, ಜಸಂತ ಅನಿಲ ಕುಮಾರ್, ಪವಿತ್ರ, ಸಂತೋಷ್ ಕೋಟ್ಯನ್ ಸೇರಿದಂತೆ ವಿವಿಧ ಮೋರ್ಚಗಳ ಅಧ್ಯಕ್ಷರು, ಪದಾಧಿಕಾರಿಗಳು, ನಗರಸಭೆ ಸದಸ್ಯರುಗಳು ಪಾಲ್ಗೊಂಡಿದ್ದರು. ಮುಖಂಡ ಮುಖಂಡ ಬಸವರಾಜ್ ಸ್ವಾಗತಿಸಿ ನಿರೂಪಿಸಿದರು.
Independence day celebration held at district BJP office Panchajanya