ಶೃಂಗೇರಿ: ಜನನ ಮತ್ತು ಮರಣದ ನಡುವಿನ ಜೀವನವನ್ನು ರೂಡಿಸಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ. ನಾವು ಮಾಡುವ ಉದ್ಯೋಗವನ್ನು ನಾವೇ ಕಂಡುಕೊಂಡು ಅದರಲ್ಲಿ ಸುಖ, ಸಂತೋಷವನ್ನು ಪಡೆದುಕೊಳ್ಳಬೇಕು ಎಂದು ಕರ್ಣಾಟಕ ಬ್ಯಾಂಕ್ ನಿವೃತ್ತ ಉದ್ಯೋಗಿ ಯಡಗೆರೆ ಬಾಲಚಂದ್ರರಾವ್ ಹೇಳಿದರು.
ರಾಜಾನಗರದಲ್ಲಿರುವ ಶ್ರೀ ವಿದ್ಯಾಭಾರತೀ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಶಿವಳ್ಳಿ ಬ್ರಾಹ್ಮಣ ಬ್ರಾಹ್ಮಣ ಮಹಾಸಭಾ ಸರ್ವ ಸದಸ್ಯರ ಸಭಾದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಆರ್ಥಿಕ ವ್ಯವಹಾರ ನಡೆಸುವಾಗ ಅತ್ಯಂತ ಜಾಗೂರೂಕತೆಯಿಂದ ಇರಬೇಕಿದ್ದು, ಆಧುನಿಕ ತಂತ್ರಜ್ಞಾನ ದುರುಪಯೋಗ ಪಡಿಸಿಕೊಂಡು ಹಣ ಲಪಾಟಾಯಿಸುವ ದೊಡ್ಡ ಜಾಲವೇ ಇದೆ.
ಬ್ಯಾಂಕಿನ ಜೊತೆ ವ್ಯವಹರಿಸುವಾಗ ನೀವೇ ಸ್ವತಃ ಬ್ಯಾಂಕಿಗೆ ತೆರಳಿ ವ್ಯವಹರಿಸಬೇಕು. ಬ್ಯಾಂಕ್ ವ್ಯವಹಾರದಲ್ಲಿ ಮಧ್ಯವರ್ತಿಗಳು ಇರುವುದಿಲ್ಲ. ಅನಾಮಿಕ ಕರೆಗೆ ಒಟಿಪಿ ಹೇಳುವುದು, ಖಾಸಗಿ ದಾಖಲೆಯನ್ನು ಹೇಳುವುದರಿಂದ ಅಪಾಯವಿದೆ ಎಂದರು.
ತೀರ್ಥಹಳ್ಳಿ ಸಂಸ್ಕೃತ ಪ್ರಾಧ್ಯಾಪಕ ಹೆಗದ್ದೆ ಸುಧೀರ್ ಮಾತನಾಡಿ,ನಮ್ಮ ಧರ್ಮಾಚರಣೆಯಲ್ಲಿ ನಾವು ಅಸಡ್ಡೆ ತೋರಬಾರದು. ನಮ್ಮ ಪೂರ್ವಿಕರು ನಡೆದಂತೆ ಪ್ರತಿ ದಿನವೂ ಬ್ರಾಹ್ಮಣರು ಮಾಡಲೇಬೇಕಾದ ಧಾರ್ಮಿಕ ಕಾರ್ಯಕ್ರಮ ನಡೆಸಬೇಕು ಎಂದರು.ಕೇಂದ್ರ ಕರ್ಣಾಟಕ ಬ್ಯಾಂಕ್ ನಿವೃತ್ತ ಉದ್ಯೋಗಿ ಯಡಗೆರೆ ಬಾಲಚಂದ್ರ, ಶತಾಯುಷಿ ಕೆಲವಳ್ಳಿ ಸುಬ್ರಮಣ್ಯಭಟ್, ಡಾ.ಗಣೇಶ್ ಪ್ರಸಾದ್, ಕರ್ಣಾಟಕ ಬ್ಯಾಂಕ್ ನಿವೃತ್ತ ಉದ್ಯೋಗಿ ಬಾಲಗಂಗಾಧರ್, ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಇಂಚರರನ್ನು ಸನ್ಮಾನಿಸಲಾಯಿತು.
ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜಿ.ಎಂ.ಸತೀಶ್ ಕಾರ್ಯಕ್ರಮ ಉದ್ಘಾಟಿಸಿದರು. ಮಹಾಸಭಾದ ಅಧ್ಯಕ್ಷ ಗೋಚವಳ್ಳಿ ರಾಮಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು.
ನಿಕಟ ಪೂರ್ವ ಅಧ್ಯಕ್ಷ ಮಾನಗಾರು ತ್ಯಾಗರಾಜ್, ಕಾರ್ಯದರ್ಶಿ ಬೆಟ್ಟಗೆರೆ ಮುರುಳಿಕೃಷ್ಣ, ನಾಗಮಣಿ ಮುರುಳಿಕೃಷ್ಣ, ಧಾರ್ಮಿಕ ಸಲಹೆಗಾರ ಮುರುಳಿಕೃಷ್ಣಭಟ್, ಶೃಂಗೇರಿ ಸುಬ್ಬಣ್ಣ, ರಾಮಕೃಷ್ಣರಾವ್ ಇದ್ದರು.
Shivalli Brahmin Brahmin Mahasabha All Members Meeting