ಚಿಕ್ಕಮಗಳೂರು: ಜಿಲ್ಲಾದ್ಯಂತ ರೈತರು ಸಾಗುವಳಿ ಮಾಡಿರುವ ಒತ್ತುವರಿ ಜಮೀನು ತೆರವು ಮಾಡುತ್ತಿರುವ ಸರಕಾರದ ಕ್ರಮ ಖಂಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟು ಸೆ.೨೫ ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ೨೫ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಸಣ್ಣ ರೈತರು, ಕಾರ್ಮಿಕರು ೩-೫ ಎಕರೆ ಒಳಗೆ ಸರಕಾರಿ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಸಣ್ಣ ಕಾಫಿ ಬೆಳೆಗಾರರು ಕೂಡ ಅಲ್ಪಸ್ವಲ್ಪ ಒತ್ತುವರಿ ಮಾಡಿ ಜೀವನ ಸಾಗಿಸುತ್ತಿದ್ದಾರೆ ಎಂದರು.
ಇವರ ಬದುಕಿಗೆ ಮಾರಕವಾಗುವಂತಹ ರೈತ ವಿರೋಧಿ ನೀತಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನುಸರಿಸುತ್ತಿವೆ. ಬಲವಂತವಾಗಿ ರೈತರ ಜಮೀನಿನಲ್ಲಿ ಕಾಫಿ ಗಿಡಗಳನ್ನು ಕಡಿಯಲಾಗುತ್ತಿದೆ. ಕೇಳಿದರೆ ನ್ಯಾಯಾಲಯದ ಮೇಲೆ ಬೊಟ್ಟು ಮಾಡುತ್ತಾರೆ. ಶಾಸನ ಸಭೆಯಲ್ಲಿ ಕಾನೂನಿಗೆ ತಿದ್ದುಪಡಿ ತರಲು ಇವರಿಗೆ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು. ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ೨೫ ಎಕರೆ ಒಳಗಿನ ಸಾಗುವಳಿ ಭೂಮಿಯನ್ನು ತೆರವು ಮಾಡಬಾರದು ಎಂದು ಆಗ್ರಹಿಸಿದರು.
ಪಕ್ಷದ ರಾಜ್ಯ ಸಮಿತಿ ಸದಸ್ಯ ರೇಣುಕಾರಾಧ್ಯ ಮಾತನಾಡಿ, ನಮ್ಮ ಜಿಲ್ಲೆ ಕೃಷಿಯಿಂದ ಪ್ರವಾಸೋದ್ಯಮದ ಕಡೆಗೆ ಹೊರಳಿದ ನಂತರ ನಮ್ಮ ಪೂರ್ವಜರು ಬೆವರು ಸುರಿಸಿದ್ದ ಭೂಮಿ ಬಂಡವಾಳಶಾಹಿಗಳ ಪಾಲಾಗುತ್ತಿದೆ. ಮಲೆನಾಡಿನಲ್ಲಿ ಭೂಹಗರಣಗಳು ಹೆಚ್ಚಾಗಿವೆ. ಹೋಂಸ್ಟೇ, ರೆಸಾರ್ಟ್ನಿಂದ ಕೃಷಿ ಸಂಸ್ಕೃತಿಯೇ ಹೊರಟುಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಸಹಕಾರ್ಯದರ್ಶಿ ರಮೇಶ್ ಕೆಳಗೂರು ಮಾತನಾಡಿ, ಮೂಡಿಗೆರೆ ಮತ್ತು ಕಳಸ ಭಾಗದಲ್ಲಿ ಸರಕಾರಿ ಭೂಮಿಯನ್ನು ಅಕ್ರಮ ಮಂಜೂರಾತಿ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಕಾರ್ಯದರ್ಶಿ, ಡಿಸಿ ಅವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಕಳಸ ಮತ್ತು ಮೂಡಿಗೆರೆ ತಾಲೂಕಿನಲ್ಲಿ ೬೭೮೫ ಎಕರೆ ಪ್ರದೇಶ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂದು ಗುರುತರ ಆರೋಪ ಮಾಡಿದರು.
ಸಿಪಿಐ ತಾಲೂಕು ಕಾರ್ಯದರ್ಶಿ ಕೆರಮಕ್ಕಿ ರಮೇಶ್ ಮಾತನಾಡಿ, ಸೆ.೨೫ ರ ಚಳವಳಿ ಪೂರ್ವಭಾವಿಯಾಗಿ ಆ.೨೩ ರಿಂದ ಎಲ್ಲಾ ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ. ನಿವೇಶನ ರಹಿತರಿಗೆ ಮೊದಲು ನಿವೇಶನ ನೀಡುವ ಕಾರ್ಯ ಪ್ರಾರಂಭವಾಗಬೇಕು. ಅಗತ್ಯವಿರುವ ಭೂಮಿ ಕಾಯ್ದಿರಿಸಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜಿ.ರಘು, ಅಮಿತಾ ಭಾನು ಮತ್ತಿತರರಿದ್ದರು.
On September 25, there was a massive protest under the auspices of the Communist Party of India