ಚಿಕ್ಕಮಗಳೂರು: ದೇಶದ ಯುವಜನರ ಭವಿಷ್ಯ ಕಲ್ಪನೆ ಹಾಗೂ ಭರವಸೆಗಳನ್ನು ಮನಗಂಡು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ದೇಶದ ಭವಿಷ್ಯವನ್ನು ರೂಪಿಸಿದ ಮಹಾನ್ ನಾಯಕ. ಉಳುವವರಿಗೆ ಭೂಮಿ ಕೊಡಿಸುವ ಮಹಾನ್ ಸಾಧನೆಯನ್ನು ಮಾಡಿದ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ನಮಗೆಲ್ಲ ಮಾದರಿಯಾಗಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಶಾಸಕಿ ಎ.ವಿ.ಗಾಯತ್ರಿ ಶಾಂತೇಗೌಡ ಹೇಳಿದರು.
ಅವರು ಮಂಗಳವಾರ ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಮಾತನಾಡಿದರು.
ಈ ಮಹಾನ್ ನಾಯಕರು ಜನಪರವಾದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವುಗಳು ಇಂದು ಶಾಶ್ವತವಾಗಿ ನೆಲೆಯೂರಿವೆ. ರಾಜೀವ್ ಗಾಂಧಿ ಹಾಗೂ ಡಿ.ದೇವರಾಜ ಅರಸು ಜನ್ಮ ದಿನವಾದ ಇಂದು ಅವರುಗಳು ರಾಜ್ಯ ಮತ್ತು ದೇಶಕ್ಕಾಗಿ ಕೊಟ್ಟಿರುವ ಕೊಡುಗೆಯನ್ನು ನೆನಪು ಮಾಡಿಕೊಳ್ಳಬೇಕು ಮತ್ತು ಆ ದಾರಿಯಲ್ಲಿ ನಡೆಯೋಣ ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ರಾಜೀವ್ ಗಾಂಧಿಯವರ ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಮೀಸಲಾತಿಗಳಿಂದ ಬಹುತೇಕರಿಗೆ ಅಧಿಕಾರ ದೊರೆಯುವಂತಾಗಿದೆ ಎಂದರು.
ತಾಂತ್ರಿಕ ಜಗತ್ತಿನಲ್ಲಿ ಪ್ರಪಂಚಕ್ಕೆ ಸವಾಲ್ ಎಂಬಂತೆ ನಮ್ಮ ದೇಶವನ್ನು ರೂಪಿಸಿದ ರಾಜೀವ್ ಗಾಂಧಿ ಅವರನ್ನು ಈ ದೇಶದ ಜನ ಮರೆಯಬಾರದು. ಹಾಗೇಯೇ ದೇವರಾಜ ಅರಸು ಕೂಡ ಜನಪರವಾದ ದಿಟ್ಟ ಆಡಳಿತವನ್ನು ನೀಡುವ ಜೊತೆಗೆ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ದ ಮಹಾನ್ ನಾಯಕರುಗಳು ಎಂದು ಬಣ್ಣಿಸಿದರು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಹಾಗೂ ವಕೀಲರಾದ ಡಿ.ಸಿ.ಪುಟ್ಟೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜೀವ್ ಗಾಂಧಿಯವರು ನವ ಭಾರತದ ಬಗ್ಗೆ ರಚನಾತ್ಮಕ ದೂರದೃಷ್ಟಿ ಹೊಂದಿದ್ದರು. ಅವರ ಆಡಳಿತಾವಧಿಯಲ್ಲಿ ತೆಗೆದುಕೊಂಡ ಕ್ರಾಂತಿಕಾರಿ ನಿಲುವುಗಳು ಇಂದಿನ ಡಿಜಿಟಲ್ ಯುಗಕ್ಕೆ ಭದ್ರ ಬುನಾದಿ ಹಾಕಿವೆ ಎಂದು ಹೇಳಿದರು.
ಅಪ್ರತಿಮ ರಾಜಕಾರಣಿ ಭೂಸುಧಾರಣೆ ಕಾಯ್ದೆಯ ಮೂಲಕ ಸಂಚಲನ ಮೂಡಿಸಿದ ಧೀಮಂತ ನಾಯಕ ಡಿ.ದೇವರಾಜ್ ಅರಸ್ ಹಾಗೂ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಪ್ರತಿಪಾದಿಸಿದ ಸಾಮಾಜಿಕ. ಧಾರ್ಮಿಕ, ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರು ಎಂದು ತಿಳಿಸಿದರು.
ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ಕುಮಾರ್, ನಗರಸಭಾ ಸದಸ್ಯ ಪರಮೇಶ್ ರಾಜ್ ಅರಸ್, ಮುಖಂಡರಾದ ಎನ್.ಡಿ.ಚಂದ್ರಪ್ಪ, ಶಿವರಾಂ ಅವರುಗಳು ಮಹಾನ್ ನಾಯಕರುಗಳ ಸಾಧನೆ ಬಗ್ಗೆ ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ಎಸ್.ಸಿ ಘಟಕದ ಜಿಲ್ಲಾಧ್ಯಕ್ಷ ಮಲ್ಲೇಶ್, ಸೇವಾದಳ ಅಧ್ಯಕ್ಷ ಬಸವರಾಜು, ನಗರ ಆಶ್ರಯ ಸಮಿತಿ ಸದಸ್ಯ ಪ್ರಸಾದ್ ಅಮಿನ್, ಯಶೋಧಮ್ಮ, ನಗರಸಭಾ ನಾಮಿನಿ ಸದಸ್ಯ ಪ್ರಕಾಶ್ ರೈ, ಸಿಡಿಎ ಸದಸ್ಯ ಶೃದೀಪ್, ಕಿಸಾನ್ ಘಟಕದ ಅಧ್ಯಕ್ಷ ಭರತ್, ತಾಲ್ಲೂಕು ಕೆಡಿಪಿ ಸದಸ್ಯ ಲಕ್ಯಾ ಸಂತೋಷ್, ಮುಖಂಡರಾದ ನಾಗಭೂಷಣ್, ನಾಗೇಶ್, ಜಯರಾಜ್ ಅರಸ್, ನೇತ್ರಾವತಿ, ಕುಸುಮ, ಕಾವ್ಯ ಸಂತೋಷ್, ಜೇಮ್ಸ್ ಡಿಸೋಜಾ, ಅನ್ಸರ್, ಸೋಮಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Rajiv Gandhi Celebration at District Congress Office