ಚಿಕ್ಕಮಗಳೂರು.: ಇಲ್ಲಿನ ಸಾರ್ವಜನಿಕ ಗಣಪತಿ (ಆಜಾದ್ ಪಾರ್ಕ್) ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಸಿ ಎಸ್ ಕುಬೇರ ಅವಿರೋಧವಾಗಿ ಆಯ್ಕೆಯಾದರು.
ಬೋಳ ರಾಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಗಣಪತಿ ಸೇವಾ ಸಮಿತಿಯ ಕಟ್ಟಡದಲ್ಲಿ ವರಸಿದ್ದಿ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆಯಿತು.
ವರಸಿದ್ಧಿ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಕಳೆದ ಮೂರು ವರ್ಷಗಳಿಂದ ಗಣಪತಿ ಸೇವಾ ಸಮಿತಿ ಸೇವಾ ಕಾರ್ಯವನ್ನು ಮಾಡಿತ್ತು ಹಾಗಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಹೊಸ ಕಮಿಟಿ ಅಸ್ತಿತ್ವಕ್ಕೆ ಬರಲು ಸರ್ವ ಸದಸ್ಯರು ಸೂಚಿಸಿದ ಹಿನ್ನೆಲೆಯಲ್ಲಿ ಗಣಪತಿ ಸೇವಾ ಸಮಿತಿಯಲ್ಲಿ ಈ ಹಿಂದೆ ಹಲವು ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ ಹಿರಿಯ ಸದಸ್ಯರು ಆಗಿರುವ ಸಿ ಎಸ್ ಕುಬೇರ ಅವರ ಹೆಸರನ್ನು ಸದಸ್ಯ ಎಂ.ಎಸ್. ಉಮೇಶ್ ಕುಮಾರ್ ಸೂಚಿಸಿದರು ಇದಕ್ಕೆ ಧ್ವನಿ ಮತದಿಂದ ಉಳಿದ ಎಲ್ಲಾ ಸದಸ್ಯರು ಅನುಮೋದಿಸಿದರು.
ಉಳಿಕೆ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಿಕೊಳ್ಳಲು ನೂತನ ಅಧ್ಯಕ್ಷರಿಗೆ ಜವಾಬ್ದಾರಿ ನೀಡಲಾಯಿತು. ಇದಕ್ಕೂ ಮೊದಲು ಎರಡು ವರ್ಷಗಳ ಲೆಕ್ಕಪತ್ರವನ್ನ ಖಜಾಂಚಿ ಹೆಚ್. ವೈ. ಮೋಹನ್ ಕುಮಾರ್ ಸಭೆಯ ಮುಂದೆ ಮಂಡಿಸಿ ಅನುಮೋದನೆ ಪಡೆದರು.
8,71,259 ರೂಪಾಯಿ ಉಳಿತಾಯ ಮಾಡಿದ್ದು ಸರ್ವ ಸದಸ್ಯರ ಸಮ್ಮತಿಯ ಮೇರೆಗೆ 7 ಲಕ್ಷಗಳನ್ನು ಮುಂದಿನ ಎಂಟು ವರ್ಷಗಳ ಅವಧಿಗೆ ಮಹಿಳಾ ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡಲು ತೀರ್ಮಾನಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಚೇತನ್ ಏಕಾಂತ ರಾಮು ವರದಿ ಮಂಡಿಸಿ ಅನುಮೋದನೆ ಪಡೆದರು. ಮಾಜಿ ಅಧ್ಯಕ್ಷರಾದ ಸಿ.ಆರ್. ಕೇಶವಮೂರ್ತಿ, ಎನ್ ಈಶ್ವರಪ್ಪ ಕೋಟೆ, ವಿರೂಪಾಕ್ಷಪ್ಪ, ಎಂ. ದಿವಾಕರ್, ಸಿ. ಎಸ್. ಏಕಾಂತ ರಾಮು ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸರ್ವ ಸದಸ್ಯರು ಸದಸ್ಯರು ಪಾಲ್ಗೊಂಡಿದ್ದರು.
ಎಲ್ ವಿ ಕೃಷ್ಣಮೂರ್ತಿ ಪ್ರಾರ್ಥನೆ ಮಾಡಿದರು ಸಚಿನ್ ಎಂ ಕೆ ಸ್ವಾಗತಿಸಿದರೆ ಚಿ ಸಿ ಶಿವಶಂಕರ್ ವಂದಿಸಿದರು.
CS Kubera elected as Public Ganpati (Azad Park) Seva Committee President