ಚಿಕ್ಕಮಗಳೂರು: ಗೌರಿ-ಗಣೇಶ ಹಬ್ಬದ ಅಂಗವಾಗಿ ನಗರದ ಆಜಾದ್ ಪಾರ್ಕ್ ಗಣಪತಿ ಪೆಂಡಾಲಿನಲ್ಲಿ ೨೧ ದಿನಗಳ ಕಾಲ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಈ ಭವ್ಯ ಮಂಟಪದಲ್ಲಿ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ಯಶಸ್ವಿಯಾಗಿ ವಿಜೃಂಭಣೆಯಿಂದ ಜರುಗಲಿವೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಅವರು ಇಂದು ನಗರದ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ (ಆಜಾದ್ ಪಾರ್ಕ್) ಗಣಪತಿ ಪೆಂಡಾಲ್ಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಶ್ರೀಯವರನ್ನು ಪ್ರತಿಷ್ಠಾಪಿಸಿ ೨೧ ದಿನಗಳ ಕಾಲ ಆರ್ಕೆಸ್ಟ್ರಾ, ಭಜನೆ, ಭರತನಾಟ್ಯ, ಹರಿಕಥೆ, ನಾಟಕ ಮುಂತಾದ ವಿವಿಧ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಿ ಕೊನೆಯ ದಿನ ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ಸಾಗಿ ಬಸವನಹಳ್ಳಿ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದರು.
ಜಿಲ್ಲೆಯ ಜನರಿಗೆ, ರೈತರಿಗೆ ಒಳ್ಳೆಯ ಮಳೆ, ಬೆಳೆ, ಬೆಲೆ ಚೆನ್ನಾಗಿ ನೀಡಲಿ ಎಂದು ಗಣಪತಿಯಲ್ಲಿ ಪ್ರಾರ್ಥಿಸಿದ ಅವರು ನಗರದ ಜನತೆಗೆ ಆರೋಗ್ಯ, ಐಶ್ವರ್ಯವನ್ನು ಕರುಣಿಸಲಿ ಎಂದು ಹೇಳಿದರು.
ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಗಣೇಶೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ನಗರದ ಆಜಾದ್ ಪಾರ್ಕ್ನಲ್ಲಿ ನಡೆಯುತ್ತಿದ್ದ ಗಣೇಶೋತ್ಸವದಲ್ಲಿ ಹಿಂದೆ ಅತೀ ಹೆಚ್ಚು ಜನರು ಭಾಗವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದ್ದವು ಎಂದು ಹೇಳಿದರು.
ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಕೆಲ ವರ್ಷಗಳಿಂದ ನಡೆಯುತ್ತಿರುವ ಗಣೇಶೋತ್ಸವವು ಚೆನ್ನಾಗಿ ನಡೆಯುತ್ತಿದ್ದು, ನಾಗರೀಕರು ಪರಿಸರ ಗಣಪತಿಯನ್ನು ಬಳಸುವ ಮೂಲಕ ಪರಿಸರವನ್ನು ಕಾಪಾಡಲಿ ಎಂದು ಮನವಿ ಮಾಡಿದರು.ವಿನಾಯಕ ಎಲ್ಲರಿಗೂ ಆರೋಗ್ಯವನ್ನು ಕರುಣಿಸಲಿ ಎಂದು ಇದೇ ಸಂದರ್ಭದಲ್ಲಿ ಪ್ರಾರ್ಥಿಸಿದರು.
ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ಗಣಪತಿ ಸೇವಾ ಸಮಿತಿಯೊಂದಿಗೆ ನಗರಸಭೆ ಕೈಜೋಡಿಸಿ ಅಗತ್ಯವಾಗಿ ಬೇಕಾಗಿರುವ ಎಲ್ಲಾ ಮೂಲ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.
ಈ ಭಾರಿಯ ಗಣೇಶೋತ್ಸವ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಹಕರಿಸುವುದಾಗಿ ತಿಳಿಸಿದ ಅವರು ರಸಮಂಜರಿ, ಜಾನಪದ ಕಲಾ ತಂಡಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ರಂಜಿ ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಸದಸ್ಯೆ ರೂಪಕುಮಾರ್, ಅಧ್ಯಕ್ಷ ಸಿ.ಎಸ್.ಕುಬೇರ, ಕಾರ್ಯದರ್ಶಿ ಸಿ.ಆರ್.ಕೇಶವಮೂರ್ತಿ, ಖಜಾಂಚಿ ಹೆಚ್.ಕೆ.ಮಂಜುನಾಥ್, ಉಪಾಧ್ಯಕ್ಷರುಗಳಾದ ಎಲ್.ವಿ.ಕೃಷ್ಣಮೂರ್ತಿ ಸಿ.ಕೆ.ವಿಶ್ವನಾಥ್, ಸಿ.ಎಂ.ವೇಣುಗೋಪಾಲ್, ಎಂ.ಎಸ್.ಉಮೇಶ್ ಕುಮಾರ್, ಹೆಚ್.ವೈ.ಮೋಹನ್ ಕುಮಾರ್, ಸಿ.ಇ.ಚೇತನ್, ಶ್ರೀನಿವಾಸ್ ಹೊಸಮನೆ, ಕಾರ್ಯದರ್ಶಿಗಳಾದ ಡಿ.ಎಸ್.ಹೊನ್ನಪ್ಪ ಶೆಟ್ಟಿ, ಎಂ.ಕೆ.ಸಚಿನ್, ಗಂಗಾಧರ.ಸಿ.ಎನ್, ಸಿ.ಬಿ.ಪ್ರಸಾದ್, ಹೆಚ್.ಎನ್.ಉಪಾಶಂಕರ್, ಜಿ.ಸಿ.ಶಿವಶಂಕರ್, ಸಿ.ಎನ್.ಮಂಜುನಾಥ್, ವೆಂಕಟಶೆಟ್ಟಿ, ಸಿ.ಎನ್.ಕಲ್ಲೇಶ್, ಬಿ.ಆರ್.ಮಾಲತೇಶ ರಾವ್, ಕಿರಣ್.ಪಿ, ಸುಜಿತ್.ಸಿ, ಸಿ.ಆರ್.ನಾಗೇಶ್, ದಯಾನಂದ.ಸಿ.ಎಂ, ಕಾನೂನು ಸಲಹೆಗಾರರು ಬಿ.ಆರ್.ಜಗದೀಶ್, ಲೆಕ್ಕ ಪರಿಶೋಧಕರು ಹೆಚ್.ಆರ್.ಮೋಹನ್ ಉಪಸ್ಥಿತರಿದ್ದರು.
Gudali Puja to Azad Park Ganapati Pendal