September 10, 2024
ಕಳವಾಸೆ ಗ್ರಾಮದ ಆನಂದ್

ಕಳವಾಸೆ ಗ್ರಾಮದ ಆನಂದ್

ಚಿಕ್ಕಮಗಳೂರು: ಶೆಡ್ ನಲ್ಲಿದ್ದ ಗನ್ ಮಿಸ್ ಫೈರ್ ಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ ಅರುಣ್ ಎಂಬುವರು ಸಾವನ್ನಪ್ಪಿದ್ದು ಘಟನೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ ಆತ್ಮಹತ್ಯೆ ಅಥವಾ ಮಿಸ್ ಫೈಲ್ ಆಗಿರಬಹುದು ಎಂದು ಶಂಕಿಸಲಾಗಿದೆ

ಮೃತ ದೇಹವನ್ನು ಹಾಸನ ಆಸ್ಪತ್ರೆಗೆ ರಾವಾನಿಸಲಾಗಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ. ನಾಡ ಕೋವಿ ತೆಗೆದಿಡುವಾಗ ಮಿಸ್ ಫೈರ್ ಯಾಗಿ ವ್ಯಕ್ತಿ ಸಾವನ್ನಪ್ಪಿದ್ದು ಮೃತನ ಬಲಗಣ್ಣಿನ ಒಳಗಿನಿಂದ ಗುಂಡು ಹೊರ ಬಂದಿದೆ .

ಚಿಕ್ಕಮಗಳೂರು ತಾಲೂಕಿನ ಕಳವಾಸೆ ಗ್ರಾಮದಲ್ಲಿ ಘಟನೆ ನಡೆದಿದ್ದು ಕಳವಾಸೆ ಗ್ರಾಮದ ಆನಂದ್ ಎಂಬ 47 ವರ್ಷದ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ ಶೆಡ್ ನಲ್ಲಿದ್ದ ಗನ್ ಒಳಗಿಡಲು ಅದನ್ನು ಕ್ಲಿನ್ ಮಾಡೋವಾಗ ಗುಂಡು ಸಿಡಿದಿರಬಹುದು ಎಂದು ಶಂಕಿಸಲಾಗಿದೆ ಆದರೆ ಇದು ಆತ್ಮಹತ್ಯೆಯೋ ಅಥವ ಮಿಸ್ ಫೈರ್ ಅನ್ನೋದು ಸ್ಪಷ್ಟವಾಗಿಲ್ಲ ಪರೀಕ್ಷೆಗಾಗಿ ಮೃತದೇಹ ಹಾಸನದ ಆಸ್ಪತ್ರೆಗೆ ರವಾನಿಸಲಾಗಿದೆ

ಮನೆಯಲ್ಲಿ ಯಾರೂ ಇಲ್ಲದಿರುವಾಗ ಶೆಡ್ ನಲ್ಲಿ ಈ ದುರಂತ ನಡೆದಿದೆ ಮಲ್ಲಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

A gun in a shed misfires-kills a farmer

About Author

Leave a Reply

Your email address will not be published. Required fields are marked *