ಚಿಕ್ಕಮಗಳೂರು: ಸರ್ಕಾರ ಚಿಟ್ ಫಂಡ್ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ವರ್ಷಗಳೇ ಕಳೆದರೂ ಈ ಕಂಪನಿಗಳಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರರಿಗೆ ಇದುವರೆಗೆ ಹಣ ಮರುಪಾವತಿ ಮಾಡಿಲ್ಲ. ಕೂಡಲೆ ಹೂಡಿಕೆದಾರರಿಗೆ ಹಣ ಮರುಪಾವತಿ ಮಾಡಬೇಕು ಎಂದು ಒತ್ತಾಯಿಸಿ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬದಿಂದ ನಗರ ಆಜಾದ್ ಪಾರ್ಕ್ ವೃತ್ತದಲ್ಲಿ ಭಾನುವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಲಾಗಿದೆ.
2016ರಲ್ಲಿ ಸುಪ್ರೀಂಕೋರ್ಟ್ ಚೀಪ್ ಅಂಡ್ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತರಿಗೆ ಹಣ ನೀಡಬೇಕು ಎಂದು ಆದೇಶ ಮಾಡಿದೆ. ಆಗ ಕೆಲವರಿಗೆ ಅಲ್ಪಸ್ವಲ್ಪ ಹಣ ನೀಡಲಾಯಿತು ಸಂಪೂರ್ಣ ಹಣವನ್ನು ಯಾರಿಗೂ ನೀಡದೆ ವಂಚನೆ ಮಾಡಲಾಗಿದೆ ಎಂದು ಪ್ರತಿಭಟನಕಾರರು ದೂರಿದರು.
2019ರಲ್ಲಿ ಕರ್ನಾಟಕದಲ್ಲಿ ಬಡ್ಸ್ ಆಕ್ಟ್ ಜಾರಿಗೆ ಬಂದಿತು ಯಾವ ಚಿಟ್ಸ್ ಫಂಡ್ ಕಂಪನಿಗಳು ಮೋಸ ಮಾಡಿದ್ದಾರೆಯೋ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಸರ್ಕಾರದಿಂದಲೇ ಸಂತ್ರಸ್ತರಿಗೆ ಹಣ ನೀಡಲು ಉದ್ದೇಶಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಿಂದ ಅರ್ಜಿ ಮತ್ತು ಸೂಕ್ತ ದಾಖಲೆಗಳನ್ನು ಪಡೆದಿದ್ದರು.
ಆದರೆ ಇದುವರೆಗೂ ಯಾರಿಗೂ ಹಣ ಮರುಪಾವತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಕೆ.ಎಂ.ಲೋಕೇಶ್, ಜಯರಾಮ್ ರಾಜ್ ಅರಸ್, ಜಯಶೀಲಾ, ವಿಶ್ವನಾಥ್, ರಮೇಶ್ ಅಜ್ಜಂಪುರ ಮತ್ತಿತರರು ಇದ್ದರು.
Indefinite protest by families of affected depositors