ಬೀರೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ನಕಲಿಚಿನ್ನ ನೀಡಿದವನ ಬಂಧನ
ಬೀರೂರು: ಅಸಲಿ ಚಿನ್ನ ಎಂದು ನಂಬಿಸಿ, ನಕಲಿ ಚಿನ್ನ ಮಾರಾಟ ಮಾಡುತ್ತಿದ್ದವನನ್ನು ಬೀರೂರು ಪೋಲಿಸರು ಬಂದಿಸಿ ಆತನಿಂದ ೨ಲಕ್ಷ ರೂ ಹಣವನ್ನು ವಶಪಡಿಸಿರುವ ಘಟನೆ ನಡೆದಿದೆ.
ತಮಿಳುನಾಡು ರಾಜ್ಯದ ಮಧುರೈ ನಿವಾಸಿ ವೆಂಕಟೇಶನ್ ಎಂಬುವರಿಗೆ ಕರ್ನಾಟಕದ ರವಿ ಎಂಬಾತನು ಫೋನ್ ಕರೆ ಮಾಡಿ ನಾನು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಲವಾರು ಚಿನ್ನದ ನಾಣ್ಯಗಳು ಸಿಕ್ಕಿವೆ ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇನೆಂದು ನಂಬಿಸಿ ಜೂ.೭ರಂದು ಅವರನ್ನು ಬೀರೂರಿನ ಠಾಣಾ ಸರಹದ್ದಿಗೆ ಕರೆಸಿಕೊಂಡು ಒಂದು ಅಸಲಿ ಚಿನ್ನದ ನಾಣ್ಯವನ್ನು ಸ್ಯಾಂಪಲ್ ಗಾಗಿ ಕೊಟ್ಟು ಕಳುಹಿಸಿರುತ್ತಾನೆ.
ಇದನ್ನು ಪರಿಶೀಲಿಸಿ ವೆಂಕಟೇಶನ್ ಅಸಲಿ ಎಂದು ತಿಳಿದ ಮೇಲೆ ಆ. ೨೯ ರಂದು ೨ ಲಕ್ಷ ಹಣವನ್ನು ಅವರ ಸ್ನೇಹಿತರ ಬಳಿ ಸಾಲ ಮಾಡಿ ಹೊಂದಿಸಿಕೊಂಡು ರವಿ ಎಂಬಾತನು ತಿಳಿಸಿದಂತೆ ಪುನಃ ಬೀರೂರಿಗೆ ಬಂದು ಆತನಿಗೆ ಹಣ ನೀಡಿದ್ದು, ರವಿಯು ಅವರಿಗೆ ಸುಮಾರು ೨೦೦ ಗ್ರಾಂ ನ? ನಕಲಿ ಚಿನ್ನದ ನಾಣ್ಯಗಳನ್ನು ನೀಡಿರುತ್ತಾನೆ.
ನಂತರದಲ್ಲಿ ಇದನ್ನು ಪರಿಶೀಲಿಸಿದಾಗ ಅವರು ಆತನಿಂದ ಮೋಸ ಹೋಗಿರುವ ವಿಚಾರ ತಿಳಿದು ಆ.೩೦ ರಂದು ಬೀರೂರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ಅದರಂತೆ ಬೀರೂರು ಪೊಲೀಸ್ ಠಾಣಾ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ಆರೋಪಿಯನ್ನು ಶೀಘ್ರವಾಗಿ ಬಂಧಿಸುವ ಸಲುವಾಗಿ ಎಸ್ಪಿ ಡಾ|| ವಿಕ್ರಂ ಅಮಟೆ, ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೃ?ಮೂರ್ತಿ.ಜಿ.. ಡಿವೈಎಸ್ಪಿ ವಿ.ಎಸ್.ಹಾಲಮೂರ್ತಿ ರಾವ್, ವೃತ್ತ ನಿರೀಕ್ಷಕ ಶ್ರೀ ಶ್ರೀಕಾಂತ್ ಎಸ್.ಎನ್. ಬೀರೂರು ಇವರ ಮಾರ್ಗದರ್ಶನದಲ್ಲಿ ಬೀರೂರು ಪೊಲೀಸ್ ಠಾಣೆಯ ಪಿ.ಎಸ್.ಐ ರವರ ಶ್ರೀ ಸಜಿತ್ ಕುಮಾರ್ ಜಿ.ಆರ್ ರವರ ನೇತೃತ್ವದಲ್ಲಿ ಹೆಡ್ ಕಾನ್‌ಸ್ಟೆಬಲ್ ಗಳಾದ ಡಿ.ವಿ.ಹೇಮಂತ್ ಕುಮಾರ್ ಹಾಗೂ ಕಾನ್ಸ್‌ಟೆಬಲ್ ಗಳಾದ ಬಿ.ಹೆಚ್. ರಾಜಪ್ಪ ಮತ್ತು ಕೆ.ದುರುಗಪ್ಪ ತಂಡವು ಆರೋಪಿಯ ಪತ್ತೆಗೆ ಮುಂದಾದರು.
ಆರೋಪಿ ರಾಜಪ್ಪನ್ನು ದಾವಣಗೆರೆಯಲ್ಲಿ ಬಂಧಿಸಿ ಆತನಿಂದ ಮನೆಯಲ್ಲಿ ಬಚ್ಚಿಟ್ಟಿದ್ದ ೨.೦೦.೦೦೦ ರೂ ನಗದು ಹಣವನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ. ಈ ಪ್ರಕರಣದ ಪತ್ತೆಗಾಗಿ ಶ್ರಮಿಸಿದ ತನಿಖಾ ತಂಡವನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ರವರು ಪ್ರಶಂಶಿಸಿ ಶ್ಲಾಘಿಸಿರುತ್ತಾರೆ.
Rapid operation by Birur police arrests the person who issued the counterfeit