ಚಿಕ್ಕಮಗಳೂರು: ಮಲೆನಾಡಿನ ಕುಗ್ರಾಮಗಳ ಪ್ರದೇಶಗಳ ವಿದ್ಯಾರ್ಥಿಗಳ ಪಾಡು ಶಾಲಾ ಕಟ್ಟಡ ಗಳಷ್ಟೇ ಶೋಚನೀಯವಾಗಿದ್ದು ತಾಲೂಕಿನ ಮೇಲು ಹುಲುವತ್ತಿ ಗ್ರಾಮದ ಮಕ್ಕಳು ಶಿಕ್ಷಕರೇ ಇಲ್ಲದೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬಂದು ಕುಳಿತಿದ್ದಾರೆ ಇದ್ದ ಒಬ್ಬ ಶಿಕ್ಷಕರು ವರ್ಗಾವಣೆಗೊಂಡಿದ್ದು ಯಾರನ್ನೂ ಇನ್ನೂ ನಿಯೋಜನೆ ಮಾಡಿಲ್ಲ.
ಟೀಚರ್ ಇಲ್ಲ ಅಂತ ಬಿಇಓ ಕಚೇರಿಗೆ ಬಂದ ಮಕ್ಕಳು ವಿದ್ಯಾರ್ಥಿಗಳು ಚಿಕ್ಕಮಗಳೂರು ತಾಲೂಕಿನ ಮೇಲು ಹುಲುವತ್ತಿ ಕಿರಿಯ ಪ್ರಾಥಮಿಕ ಶಾಲೆಯ 9 ಮಕ್ಕಳು ಬಂದು ಬಿಇಓ ಕಚೇರಿಯಲ್ಲಿ ಕೂತಿದ್ದಾರೆ. ಗ್ರಾಮದ ಶಾಲೆಯ 1 ರಿಂದ 5 ನೇ ತರಗತಿ ವರೆಗಿನ 9 ಜನ ಇರುವ ಮಕ್ಕಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬಂದಿದ್ದಾರೆ.
ಇದ್ದ ಒಬ್ಬರು ಟೀಚರ್ ಕೂಡ ವರ್ಗಾವಣೆ ಮಾಡಿಕೊಂಡು ಹೋಗಿದ್ದಾರೆ ಆ ಸ್ಥಳಕ್ಕೆ ಹೊಸಬರು ಬರೋದಕ್ಕೆ 15 ದಿನ ಆಗುತ್ತೆ ಎಂದು ಹೇಳಲಾಗಿದ್ದು, ಒಬ್ಬರೂ ಟೀಚರ್ ಇಲ್ಲದ ಕಾರಣ ಪೋಷಕರ ಜೊತೆ ಸೇರಿ ಬಿಇಓ ಕಚೇರಿಗೆ ಬಂದ ವಿದ್ಯಾರ್ಥಿಗಳು ಪ್ರತಿಭಟನಾರ್ಥಕ ವಾಗಿ ಆಗಮಿಸಿದ್ದಾರೆ. ಹೊಸಬರು ಬರುವ ಮುನ್ನವೇ ಹಳಬರನ್ನ ಹೇಗೆ ರಿಲೀವ್ ಮಾಡಿದ್ರು ಎಂದು ಪೋಷಕರ ಪ್ರಶ್ನೆ ಮಾಡುತ್ತಿದ್ದು, ಮುತ್ತೋಡಿ ಅರಣ್ಯ ವ್ಯಾಪ್ತಿಯ ಕುಗ್ರಾಮ ಮೇಲಿನ ಹುಲುವತ್ತಿ ಗ್ರಾಮವಾಗಿದೆ.
ಶಿಕ್ಷಕರ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಮುಷ್ಕರ ರಾತ್ರಿ ಅಂತ್ಯ ಕಂಡಿದೆ. ಚಿಕ್ಕಮಗಳೂರು ತಾಲೂಕು ಮೇಲು ಹುಲುವತ್ತಿ, ಕಸ್ಕೆ ಶಾಲೆಯಲ್ಲಿ ಇದ್ದ ಒಬ್ಬರು ಶಿಕ್ಷಕರು ವರ್ಗಾವಣೆಯಾಗಿ ಹೋಗಿದ್ದು, ಶಿಕ್ಷಕರು ಏಳೆಂಟು ದಿನಗಳಿಂದ ಬದಲಿ ಶಿಕ್ಷಕರು ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು.
ಶಿಕ್ಷಕರ ವರ್ಗಾವಣೆಯಿಂದ ಶಾಲೆಯಲ್ಲಿ ಪಾಠ ಮತ್ತು ಬಿಸಿ ಊಟ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಪೋಷಕರೊಂದಿಗೆ ಆಗಮಿಸಿದ ಮಕ್ಕಳು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಾನಕಿರಾಮ್ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದರು.
ರಾತ್ರಿಯಾದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಾರದೇ ಇದ್ದು ಅಹೋರಾತ್ರಿ ಧರಣಿಗೆ ಮುಂದಾಗಿದ್ದು ,ಇದನ್ನು ಅರಿತ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಾತ್ರಿ 8 ಗಂಟೆಗೆ ಬಂದು ಸಮಸ್ಯೆ ಆಲಿಸಿ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ಕೈ ಬಿಡಲಾಯಿತು . ಬಂದ ಮಕ್ಕಳು ಮತ್ತು ಪೋಷಕರಿಗೆ ರಾತ್ರಿ ಊಟ ಮತ್ತು ರಾತ್ರಿ ಮಲಗುವ ವ್ಯವಸ್ಥೆಯನ್ನೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಲ್ಪಿಸಿದರು. ಈ ಸಂದರ್ಭದಲ್ಲಿ ಕೋಟೆ ಸೋಮಣ್ಣ ಇತರರು ಉಪಸ್ಥಿತರಿದ್ದರು
Students protest in front of the District Education Officer’s office