ಯಗಟಿ ಪೊಲೀಸರಿಂದ 2.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಚಿಕ್ಕಮಗಳೂರು: ಚೌಳಹಿರಿಯೂರಿನಲ್ಲಿ ಗ್ರಾಮದಲ್ಲಿ ಕಳ್ಳತನ ವಾಗಿದ್ದ ಪ್ರಕರಣದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಯಗಟಿ ಪೊಲೀಸರು ಬಂಧಿಸಿದ್ದಾರೆ.
ಚೌಳಹಿರಿಯೂರ ಗ್ರಾಮದ ಸುರೇಶ್ ಅವರ ಮನೆಯಲ್ಲಿ ಯಾರೋ ಕಳ್ಳರು ಮನೆಯ ಮುಂಬಾಗಿಲಿನ ಒಳಭಾಗದ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಒಳಪ್ರವೇಶಿಸಿ, ಬೀರೂವಿನಲ್ಲಿದ ಸುಮಾರು ೪೪ ಗ್ರಾಂ ೨.೬೦ ಲಕ್ಷ ರೂ. ಮೌಲ್ಯದ ಚಿನ್ನಾಭರಣ ೨೫೦೦ ರೂ ಬೆಲೆ ಬಾಳುವ ೩೦ ಗ್ರಾಂ ತೂಕದ ಬೆಳ್ಳಿ, ಆಭರಣ ಹಾಗೂ ೫೦ಸಾವಿರ ರೂ.ನಗದು ದೇವರ ಹುಂಡಿಯಲಿದ ೨೫೦೦ ರೂ. ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ, ಯಗಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
ಪರ್ವತನಹಳ್ಳಿ ಯಿಂದ ೯ನೇ ಕ್ರಾಸ್ ಗೆ ಹೋಗುವ ರಸ್ತೆಯಲ್ಲಿ ಸಿದ್ದಮ್ಮ ತಮ್ಮ ಹೊಲಕ್ಕೆ ಹೋಗಲು ದಾರಿ ಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರೋ ಅಪರಿಚಿತರಿಬ್ಬರು ಬೈಕ್‌ನಲ್ಲಿ ಬಂದು ವಿಳಾಸ ಕೇಳುವ ನೆಪದಲ್ಲಿ ಅವರ ಕೊರಳಲ್ಲಿದ್ದ ೨೦ಗ್ರಾಂ ಸುಮಾರು ೧ ಲಕ್ಷ ರೂ. ಬೆಲೆ ಬಾಳುವ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದು, ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣಗಳಲ್ಲಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ವಿಕ್ರಂ ಅಮಟೆ, ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಕೃಷ್ಣಮೂರ್ತಿ, ಡಿವೈಎಸ್ಪಿ ವಿ.ಎಸ್. ಹಾಲಮೂರ್ತಿರಾವ್, ಇವರ ಮಾರ್ಗದರ್ಶನದಲ್ಲಿ ಬೀರೂರು ವೃತ್ತನಿರೀಕ್ಷಕ ಎಸ್.ಎನ್. ಶ್ರೀಕಾಂತ್ ನೇತೃತ್ವದಲ್ಲಿ ಯಗಟಿ ಪೊಲೀಸ್ ಪಿ.ಎಸ್.ಐ ಮಂಜುನಾಥ ಠಾಣಾ ಸಿಬ್ಬಂದಿಗಳಾದ ಕಿರಣ್, ಉಮೇಶ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ಶ್ರೀನಿವಾಸ್, ಪ್ರದೀಪ್ ಅವರುಗಳ ತಂಡವು ವಿವಿಧ ಆಯಾಮಗಳಲ್ಲಿ ವೈಜ್ಞಾನಿಕವಾಗಿ ಮತ್ತು ಬಾತ್ಮೀದಾರರ ಸಹಾಯದಿಂದ ಆರೋಪಿಯ ಪತ್ತೆ ಬಗ್ಗೆ ಎಲ್ಲಾ ರೀತಿಯಲ್ಲಿಯೂ ಮಾಹಿತಿಯನ್ನು ಕಲೆ ಹಾಕಿದ ತನಿಖಾ ತಂಡವು ಆರೋಪಿಯ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ತುಮಕೂರಿನ ವೆಲ್ಡಿಂಗ್ ಕೆಲಸದ ಮುಬಾರಕ್‌ನನ್ನು ಬಂಧಿಸಿ ಒಟ್ಟು ೩.೫೬ ಲಕ್ಷ ರೂ. ಬೆಲೆಬಾಳು ೫೯.೩೯೦ ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ ೪೦ಸಾವಿರ ರೂ ಬೆಲೆಬಾಳು ಹಿರೋಹೊಂಡಾ ಸ್ಪ್ಲೆಂಡರ್ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ.
2.60 lakhs from Yagati police. Valuable gold jewelery seized