ತರೀಕೆರೆ: ಪಟ್ಟಣದ ಗೌಡಹನುಮಯ್ಯನ ಬೀದಿಯಲ್ಲಿ ವಾಸವಿದ್ದ ವಸಂತ ಎಂಬುವರ ಮನೆಯಲ್ಲಿಟ್ಟಿದ್ದ ಚಿನ್ನಭರಣ ಕಳುವು ಮಾಡಿದ್ದ ಮಹಿಳಾ ಆರೋಪಿಯನ್ನು ಪೊಲೀಸರು ಬಂಧಿಸಿ, ೩.೮ ಲಕ್ಷ ರೂ.ಮೌಲ್ಯದ ೫೬ ಗ್ರಾಂ ಚಿನ್ನಭರಣವನ್ನು ವಶಪಡಿಸಿಕೊಂಡಿದ್ದಾರೆ.
ಗೌಡಹನುಮಯ್ಯನ ಬೀದಿಯ ವಸಂತ ಎಂಬುವರು ಸೆ.೧ರಂದು ಅಡಿಕೆ ಸುಲಿಯುವ ಕೆಲಸಕ್ಕೆಂದು ಮನೆಯಿಂದ ಹೊರಗಡೆ ಹೋಗಿದ್ದರು. ಸಂಜೆ ಮನೆಗೆ ಬಂದು ನೋಡಿದಾಗ ಗಾಡ್ರೇಜ್ನಲ್ಲಿಟ್ಟಿದ್ದ ೪೦ ಗ್ರಾಂ ೨ ಎಳೆಯ ಚಿನ್ನದ ಮಾಂಗಲ್ಯಸರ, ೧೪ ಗ್ರಾಂ ಚಿನ್ನದ ನೆಕ್ಲೆಸ್, ೨ ಗ್ರಾಂ ಮಾಟೆ ಸೇರಿದಂತೆ ೩.೮ ಲಕ್ಷ ರೂ. ಮೌಲ್ಯದ ಒಟ್ಟು ೫೬ ಗ್ರಾಂ. ಚಿನ್ನಭರಣಗಳು ಕಳುವಾಗಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸೆ. ೪ರಂದು ಪ್ರಭಾರ ಪೊಲೀಸ್ ನಿರೀಕ್ಷಕ ವೀರೇಂದ್ರ, ಅಪರಾಧ ವಿಭಾಗದ ಪಿಎಸ್ಐ ಬಸನಗೌಡ ಬಗಲಿ, ಮತ್ತು ಸಿಬ್ಬಂದಿಗಳಾದ ಧನಂಜಯಸ್ವಾಮಿ, ರಿಯಾಜ್, ರಾಮು ಅವರುಗಳು ಕಳವಾಗಿದ್ದ ಮನೆಯ ಮಾಲೀಕರ ಸಂಬಂಧಿ ಸವಿತಾಳನ್ನು ಪತ್ತೆಮಾಡಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಕೃಷ್ಣಮೂರ್ತಿ, ತರೀಕೆರೆ ಉಪ ವಿಭಾಗದ ಡಿವೈಎಸ್ಪಿವಿ.ಎಸ್. ಹಾಲುಮೂರ್ತಿರಾವ್ ಹಾಗೂ ತರೀಕೆರೆ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಅವರ ಮಾರ್ಗದರ್ಶನದಲ್ಲಿ ತರೀಕೆರೆ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಬಸನಗೌಡಬಗಲಿ, ದೇವೆಂದ್ರರಾಥೋಡ್, ನಾಗೇಂದ್ರನಾಯ್ಕ್, ಆನಂದ್ಪಾವಸ್ಕರ್ ಪಿಎಸ್ಐ ಹಾಗೂ ಸಿಬ್ಬಂದಿಗಳಾದ ಧನಂಜಯಸ್ವಾಮಿ, ರಿಯಾಜ್, ರಾಮು, ಕಲ್ಲೇಶ್ನಾಯ್ಕ, ತ್ರಿವೇಣಿ, ನೇತ್ರಮ್ಮ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ನಯಾಜ್, ರಬ್ಬಾನಿ, ಶೇಷಾದ್ರಿ, ಬಸವರಾಜ್, ಪ್ರಭು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇವರ ಕಾರ್ಯವನ್ನು ಎಸ್ಪಿಯವರು ಶ್ಲಾಘಿಸಿದ್ದಾರೆ.
56 grams of stolen gold worth Rs 3.8 lakh has been recovered