ಚಿಕ್ಕಮಗಳೂರು: ಗಣಪತಿ ವಿಸರ್ಜನೆಗೆ ಸಾರ್ವಜನಿಕರಿಗೆ ಅನುಕೂಲವಾಗಲೆಂದು ನಗರಸಭೆ ವತಿಯಿಂದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಕೋಟೆಕೆರೆ ಮತ್ತು ಬಸವನಹಳ್ಳಿ ಕೆರೆ ಮತ್ತು ನಗರದ ಆಜಾದ್ವೃತ್ತ ಹಾಗೂ ಹನುಮಂತಪ್ಪ ವೃತ್ತದಲ್ಲಿ ಗಣಪತಿ ವಿಜರ್ಸನೆಗೆ ಕೋಟೆಕೆರೆ ಯಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಗಣಪತಿ ವಿಸರ್ಜನೆಗೆ ಸೂಕ್ತ ಜಾಗ ನಿಗದಿಪಡಿಸಲಾಗಿದೆ. ಚಿಕ್ಕದಾಗಿ ಏರಿಯನ್ನು ನಿರ್ಮಾಣಮಾಡಿದ್ದು, ಬೇಲಿಯೊಂದಿಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.
ಗಣಪತಿ ವಿಸರ್ಜನೆ ವೇಳೆಯಲ್ಲಿ ಅವಘಡಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳ ಲಾಗಿದೆ. ಗಣಪತಿ ವಿಸರ್ಜಿಸಲು ಸ್ವಯಂಸೇವಕರುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೆರೆದಡದಲ್ಲಿ ರಕ್ಷಣೆಯ ಹಿತದೃಷ್ಟಿಯಿಂದ ಎರಡು ರಬ್ಬರ್ ಟ್ಯೂಬ್ಗಳನ್ನಿಡಲಾಗಿದೆ.
ನಗರಸಭೆಯ ಟ್ಯಾಕರ್ನಲ್ಲಿ ನೀರನ್ನು ತುಂಬಿಸಿದ್ದು, ಈ ವಾಹನದ ಹನುಮಂತಪ್ಪ ವೃತ್ತದಲ್ಲಿ ನಿಲುಗಡೆ ಗೊಳಿಸಲಾಗಿದೆ. ಮನೆಯಲ್ಲಿ ಪ್ರತಿಷ್ಠಾಸಿರುವ ಗಣಪತಿಯನ್ನು ಇಲ್ಲಿ ವಿಸರ್ಜಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ಅದೇ ರೀತಿಯಲ್ಲಿ ಬಸವನಹಳ್ಳಿ ಕೆರೆಯಲ್ಲೂ ಗಣಪತಿ ವಿಸರ್ಜಗೆಂದೇ ಪ್ರತ್ಯೇಕ ವ್ಯವಸ್ಥೆಯನ್ನು ನಗರಸಭೆ ವತಿಯಿಂದ ಕಲ್ಪಿಸಲಾಗಿದೆ. ಇಲ್ಲೂ ಸಹ ವಿದ್ಯುತ್ ವ್ಯವಸ್ಥೆಯನ್ನು ಮಾಡಲಾಗಿದೆ. ಸಾರ್ವಜನಿಕರು ಯಾವುದೇ ಭಯವಿಲ್ಲದೆ ವಿಘ್ನವಿನಾಶಕನ್ನು ವಿಸರ್ಜಿಸಬಹುದಾಗಿದೆ.
ಹನುಮಂತಪ್ಪ ವೃತ್ತದಲ್ಲಿ ವಾಹನವೊಂದನ್ನು ನಿಲ್ಲಿಸಿದ್ದು, ಗಣಪತಿ ವಿಸರ್ಜನಾವಾಹನ ಎಂಬ ನಾಮಫಲಕ ಅಳವಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಗಣಪತಿ ವಿಸರ್ಜನೆಯ ಸ್ಥಳದಲ್ಲಿ ಪೊಲೀಸರು ಮತ್ತು ಗೃಹರಕ್ಷಕದಳದವರನ್ನು ನಿಯೋಜಿಸಲಾಗಿದೆ.
City Council is the best system for Ganapathi discharge