ಚಿಕ್ಕಮಗಳೂರು: ಚಾರ್ಮಾಡಿ ಘಾಟ್ನಲ್ಲಿ ಮತ್ತೆ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ರಸ್ತೆಯಲ್ಲಿ ಓಡಾಡುತ್ತಿದ್ದ ಆನೆ ಕಂಡು ವಾಹನ ಸವಾರರು ಆತಂಕಗೊಂಡಿದ್ದಾರೆ.
ನಿತ್ಯ ರಸ್ತೆ ಬದಿ ಕತ್ತಲಲ್ಲಿ ಆನೆ ನಿಂತಿರುವುದನ್ನು ಕಂಡು ಪ್ರಯಾಣಿಕರು ಆತಂಕದಲ್ಲಿ ಪ್ರಯಾಣಿಸುವಂತಾಗಿದೆ. ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ನಲ್ಲಿ ಆನೆಗಳು ಸರ್ವೇ ಸಾಮಾನ್ಯವಾಗಿವೆ.
ಆದರೆ ಕತ್ತಲಲ್ಲಿ ಏಕಾಏಕಿ ರಸ್ತೆಯ ಮೇಲೆ ಆನೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ವಾಹನ ಸವಾರರಲ್ಲಿ ಅಪಘಾತದ ಆತಂಕ ಶುರುವಾಗಿದೆ. ಆನೆಗಳು ರಸ್ತೆಯ ತಿರುವಿನಲ್ಲಿ ನಿಂತುಕೊಳ್ಳುತ್ತವೆ.
ಇದರಿಂದಾಗಿ ವಾಹನ ಸವಾರರಿಗೆ ರಸ್ತೆ ಕಾಣದೆ ವಾಹನ ಸಂಚಾರ ಮಾಡಲು ಕಷ್ಟವಾಗಿದೆ. ಇದರಿಂದ ರಸ್ತೆ ದಾಟುವುದು ಕಷ್ಟವಾಗಿದೆ ಎಂದು ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ.
ವಾಹನಗಳ ಸಮೀಪವೇ ಆನೆಯ ಓಡಾಟದ ದೃಶ್ಯ ವೈರಲ್ ಆಗಿದೆ. ಆದರೆ ಅದೃಷ್ಟವಶಾತ್ ಆನೆ ಯಾರಿಗೂ ಕೂಡ ತೊಂದರೆಯನ್ನು ನೀಡಲ್ಲ. ಕಾಡಾನೆ ಕಂಡು ವಾಹನಗಳನ್ನ ನಿಲ್ಲಿಸಿ ನಿಧಾನವಾಗಿ ವಾಹನಗಳು ಮುಂದೆ ಸಾಗಿವೆ.
ಘಾಟ್ನ ತಿರುವಿನಲ್ಲಿ ರಾತ್ರಿ ಏಕಾಏಕಿ ಆನೆ ಕಾಣಿಸಿಕೊಂಡಿದ್ದು ಕಳೆದ ಮೂರ್ನಾಲ್ಕು ತಿಂಗಳಿಂದಲೂ ಆನೆಗಳು ನಡು ರಸ್ತೆಯಲ್ಲಿ ಕಾಣಿಸಿಕೊಳ್ತಿದೆ. ಇದರಿಂದ ಪ್ರಯಾಣಿಕರು ಅಪಘಾತದ ಆತಂಕ ವ್ಯಕ್ತಪಡಿಸಿದ್ದಾರೆ
A lone elephant sighting again at Charmadi Ghat