ಚಿಕ್ಕಮಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ವನ್ನು ಕಾರ್ಮಿಕ ಇಲಾಖೆ ನಿರಂತರವಾಗಿ ಮಾಡುತ್ತಿದೆ ಎಂದು ಕಾರ್ಮಿಕ ಇಲಾಖೆ ಸಹಾಯಕ ಕಾರ್ಮಿಕ ಆಯುಕ್ತ ರವಿಕುಮಾರ್ ತಿಳಿಸಿದರು.
ಮಂಗಳವಾರ ನಗರದ ಪ್ರೆಸ್ಕ್ಲಬ್ನಲ್ಲಿ ಪ್ರಸ್ಕ್ಲಬ್ ವತಿಯಿಂದ ಆಯೋಜಿಸಿದ್ದ ತಿಂಗಳ ಅಥಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಾರ್ಮಿಕ ಇಲಾಖೆ ಸ್ವಾತಂತ್ರ್ಯ ಪೂರ್ವ ಅಂದರೇ ೧೯೩೫ರಲ್ಲಿ ಕಾರ್ಮಿಕರು ಮತ್ತು ಮಾಲೀಕರ ಸಂಘರ್ಷದ ದಿನಗಳಲ್ಲಿ ಹುಟ್ಟಿಕೊಂಡ ಅತ್ಯಂತ ಹಳೆಯ ಇಲಾಖೆ ಇದಾಗಿದೆ ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕ ಇಲಾಖೆ ಆರು ಜನ ಕಾರ್ಮಿಕ ನಿರೀಕ್ಷಕರು ಹಾಗೂ ಐದು ಜನ ಹಿರಿಯ ಕಾರ್ಮಿಕ ನಿರೀಕ್ಷಕರು ಹಾಗೂ ಕಡೂರಿನಲ್ಲಿ ಓರ್ವ ಕಾರ್ಮಿಕ ನಿರೀಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ ಅವರು, ಕಾರ್ಮಿಕ ಇಲಾಖೆ ಕಾರ್ಮಿಕ ಮತ್ತು ಮಾಲೀಕ, ಕಾರ್ಮಿಕ ಮತ್ತು ಕಾರ್ಮಿಕ, ಹಾಗೂ ಕೈಗಾರಿಕೆ ಮಾಲೀಕ ಮತ್ತು ಮಾಲೀಕರ ನಡುವೆ ಆರೋಗ್ಯಕರ ಕೈಗಾರಿಕಾ ವಾತಾವರಣ ಸೃಷ್ಟಿಸುವುದು ಇಲಾಖೆಯ ಧ್ಯೇಯವಾಗಿದೆ ಎಂದು ಹೇಳಿದರು.
ಕಾರ್ಮಿಕ ಇಲಾಖೆ ಅನೇಕ ಕಾಯ್ದೆ ಕಾನೂನುಗಳನ್ನು ಒಳಗೊಂಡಿದ್ದು ಅವುಗಳ ಅನುಷ್ಠಾನಕ್ಕೆ ನಿರಂತರವಾಗಿ ಶ್ರಮಿಸುತ್ತಿದೆ. ಕಾರ್ಮಿಕ ವಿವಾದ ಕಾಯ್ದೆ, ಕನಿಷ್ಠ ವೇತನ ಕಾಯ್ದೆ, ಕೈಗಾರಿಕಾ ಸಂಬಂಧಿತ ಕಾಯ್ದೆ, ವೇತನಕ್ಕೆ ಸಂಬಂಧಿಸಿದ ಕಾಯ್ದೆ, ಸಾಮಾಜಿಕ ಭದ್ರತೆ ಕಾಯ್ದೆ ಹೀಗೆ ಕಾರ್ಮಿಕರ ಮತ್ತು ಮಾಲೀಕರ ಕಲ್ಯಾಣಕ್ಕಾಗಿ ಅನೇಕ ಕಾಯ್ದೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿ ಸಿದೆ ಎಂದು ತಿಳಿಸಿದರು.
ಕೈಗಾರಿಕಾ ಸಂದಾನ ಕಾಯ್ದೆಯಡಿಯಲ್ಲಿ ಕಾರ್ಮಿಕರು ಮತ್ತು ಮಾಲೀಕರ ನಡುವೆ ವಿವಾದ ಏರ್ಪಟ್ಟಗ, ಸಭೆಗಳನ್ನು ನಡೆಸಿ ಸಂದಾನದ ಮೂಲಕ ಬಗೆಹರಿಸುವ ಪ್ರಯತ್ನವನ್ನು ಕಾರ್ಮಿಕ ಇಲಾಖೆ ಮಾಡಲಿದೆ. ಆರ್ಥಿಕ ಪ್ರಗತಿ ಮತ್ತು ಕೈಗಾರಿಕಾ ಶಾಂತಿ ಸ್ಥಾಪಿಸಲು ಶ್ರಮಿಸಲಿದೆ ಎಂದ ಅವರು, ಕನಿಷ್ಠ ವೇತನ ಕಾಯ್ದೆಯಡಿಯಲ್ಲಿ ಪ್ರತೀ ಐದು ವರ್ಷಕ್ಕೊಮ್ಮೆ ಕನಿಷ್ಠ ವೇತನ ಪರಿಷ್ಕರಣೆ ನಡೆಯಲಿದೆ. ಯಾವುದೇ ಕೈಗಾರಿಕೆ ಕನಿಷ್ಠ ವೇತನ ನೀಡದೆ ಕಾರ್ಮಿಕರಿಗೆ ವಂಚಿಸಿದರೇ ಅಂತಹ ಕ್ಲೈಮ್ಗಳನ್ನು ನಿರ್ವಹಣೆ ಮಾಡಲಿದೆ. ಇಲಾಖೆಯಿಂದ ಸಾಧ್ಯವಾಗದಿದ್ದಲ್ಲಿ ನ್ಯಾಯಾಲಯದ ಮೋರೆ ಹೋಗಲಾಗುವುದು ಎಂದರು.
ಕೈಗಾರಿಕಾ ಸಂಬಂಧಿತ ಕಾಯ್ದೆಯಡಿಯಲ್ಲಿ ಕೆಲಸ ನಿರ್ವಹಣೆಯಲ್ಲಿ ಸಮಸ್ಯೆಗಳು ಎದುರಾದಾಗ ಸಂದಾನ ಸಭೆಯ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಲಿದೆ. ಈ ಕಾಯ್ದೆಯಡಿಯಲ್ಲಿ ೨೭ ರಿಂದ ೨೮ ಕಾಯ್ದೆಗಳು ಅನುಷ್ಠಾನಗೊಳ್ಳಿದೆ ಎಂದ ಅವರು, ವೇತನ ನಿರ್ವಹಣೆ ಕಾಯ್ದೆಯಡಿಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಒಂದು ವೇಳೆ ಕಾರ್ಮಿಕರಿಗೆ ಅನ್ಯಾಯ ವಾದಗ ಕಾರ್ಮಿಕ ಇಲಾಖೆ ಅನ್ಯಾಯವನ್ನು ಸರಿಪಡಿಸುವ ಕೆಲಸ ಮಾಡಲಿದೆ ಎಂದು ತಿಳಿಸಿದರು.
ವೇತನ ಪಾವತಿ ಕಾಯ್ದೆಯಡಿಯಲ್ಲಿ ನಿದಿಷ್ಠ ಸಮಯದಲ್ಲಿ ಸಂಬಂಧಪಟ್ಟ ಕೈಗಾರಿಕೆಗಳು ಕಾರ್ಮಿಕರಿಗೆ ವೇತನ ಪಾವತಿ ಮಾಡ ಬೇಕು. ಬೋನಸ್ಸ್, ನೀಡಬೇಕು. ಉಪಧನ ಪಾವತಿ ಕಾಯ್ದೆಯಡಿಯಲ್ಲಿ ಐದು ವರ್ಷ ಕಾರ್ಯನಿರ್ವಹಿಸಿದ ಕಾರ್ಮಿಕರಿಗೆ ಶೇ.೧೫ರಷ್ಟು ಉಪಧನ ಪಾವತಿ ಮಾಡಬೇಕು. ಹಾಗೂ ಕಾರ್ಮಿಕರ ವೃತ್ತಿಕ್ಷಮತೆ ಆಧಾರದ ಮೇಲೆ ಶೇ.೮.೩೩ ರಿಂದ ಗರಿಷ್ಟ ಶೇ.೨೦ ರಷ್ಟು ಬೋನಸ್ಸ್ ನೀಡಬೇಕು ಕಾಯ್ದೆ ಹೇಳುತ್ತದೆ ಎಂದರು.
ಸಾಮಾಜಿಕ ಭದ್ರತೆ ಕಾಯ್ದೆಯಡಿಯಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಮಕ್ಕಳ ಮದುವೆ ಸೇರಿದಂತೆ ಮಹಿಳೆಯರ ಹೆರಿಗೆ ರಜೆ, ಆರೋಗ್ಯ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದ ಅವರು, ಕಾರ್ಮಿಕ ಇಲಾಖೆ ಜತೆ ಅನೇಕ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಗ್ರಾಜ್ಯೂಟಿ ಫಡ್ಗೆ ಸಂಬಂಧಿಸಿದ ೨೧೭ ಪ್ರಕರಣಗಳು, ಕನಿಷ್ಠ ವೇತನಕ್ಕೆ ಸಂಬಂಧಿಸಿದ ೬೩ ಪ್ರಕರಣಗಳು ಕಾರ್ಮಿಕ ಇಲಾಖೆ ಮುಂದಿದೆ ಎಂದ ಅವರು, ಕಾರ್ಮಿಕರಿಗೆ ಮಾಲೀಕರಿಂದ ಅಥವಾ ಬೇರೆ ಬೇರೆ ಸಂದರ್ಭದಲ್ಲಿ ಅನ್ಯಾಯಕ್ಕೆ ಒಳಗಾ ದಾಗ ಕಾರ್ಮಿಕ ಇಲಾಖೆ ನೆರವು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಸುರೇಶ್ ಮಾತನಾಡಿ, ಜಿಲ್ಲಾ ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾದ ಕಾರ್ಮಿಕರ ಮಕ್ಕಳ ಮದುವೆಗೆ ೫,೨೭೨ ಫಲಾನುಭವಿಗಳಿಗೆ ೨೭ಕೋಟಿ ೫೯ಲಕ್ಷ ರೂ. ನೀಡಲಾಗಿದೆ. ಕಾರ್ಮಿಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ೨೩,೨೪೨ ಫಲಾನುಭವಿಗಳಿಗೆ ೧೯ಕೋಟಿ ೯೫ಕೋಟಿ ರೂ. ಮಹಿಳಾ ಕಾರ್ಮಿಕರಿಗೆ ಹೆರಿಗೆ ಸಹಾಯಧನವಾಗಿ ೧೫೨೭ ಫಲಾನುಭ ವಿಗಳಿಗೆ ೪ ಕೋಟಿ ೪೪ ಲಕ್ಷ ರೂ. ವೈದ್ಯಕೀಯ ಸಹಾಯಧನ ೧ಕೋಟಿ ೩೧ ಲಕ್ಷ ರೂ. ತಾಯಿ ಮಗು ಸಹಾಯಹಸ್ತ ಯೋಜನೆ ಯಡಿ ೧೮ ಫಲಾನುಭವಿಗಳಿಗೆ ೬೯ ಲಕ್ಷ ರೂ. ಅಂತ್ಯಕ್ರಿಯೆ ವೆಚ್ಚ ಯೋಜನೆಯಡಿ ೯೬೩ ಫಲಾನುಭವಿಗಳಿಗೆ ೫.೨೨ ಲಕ್ಷ ರೂ. ಪಿಂಚಣಿ ಯೋಜನೆಯಡಿ ಪ್ರತೀ ತಿಂಗಳು ಮೂರು ಸಾವಿರದಂತೆ ೯೩ ಫಲಾನುಭವಿಗಳಿಗೆ, ಕುಟುಂಬ ಪಿಂಚಣಿ ಯೋಜನೆಯಡಿ ಇಬ್ಬರು ಫಲಾನುಭವಿಗಳಿಗೆ ಪ್ರತೀ ತಿಂಗಳು ೧,೫೦೦, ದುರ್ಬಲ ಪಿಂಚಣಿ ಯೋಜನೆಯಡಿ ಆರು ಫಲಾನುಭವಿಗಳಿಗೆ ಪ್ರತೀ ತಿಂಗಳು ಎರಡು ಸಾವಿರ ರೂ. ನೀಡಲಾಗುತ್ತಿದೆ ಎಂದರು.
ವಲಸೆ ಕಾರ್ಮಿಕರನ್ನು ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ೨೦೩ ತೋಟ ಮಾಲೀಕರು ನೋಂದಣಿಯಾಗಿದ್ದಾರೆ. ೧,೩೦೦ ವಲಸೆ ಕಾರ್ಮಿಕರು ನೋಂದಣಿಯಾಗಿದ್ದಾರೆ. ಇತ್ತೀಚೆಗೆ ೨೭ ಕಾಫಿತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನ್ಯೂನತೆಗಳು ಕಂಡು ಬಂದಿದ್ದು, ಈ ತೋಟ ಮಾಲೀಕರಿಗೆ ಶೋಕಸ್ ನೀಡಲು ಇಲಾಖೆ ಮುಂದಾಗಿದೆ ಎಂದು ತಿಳಿಸಿದರು.
ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಖಜಾಂಚಿ ತಾರಾನಾಥ್, ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಪ್ರಭಾಕರ್, ಸಮರ್ಥ, ರಾಘವೇಂದ್ರ, ಮಹಮದ್ ನಯಾಜ್ ಇದ್ದರು. ತಾರಾನಾಥ್ ಸ್ವಾಗತಿಸಿದರು. ಚಂದ್ರೇಗೌಡ ವಂದಿಸಿದರು.
Sincere effort to deliver Central State Government schemes to the beneficiaries