ಚಿಕ್ಕಮಗಳೂರು: ಭಾರತದಲ್ಲಿ ಗುರುವಿಗೆ ದೇವರ ಸ್ಥಾನ ನೀಡಲಾಗಿದೆ, ಮಕ್ಕಳಲ್ಲಿ ಅಜ್ಞಾನದ ಕತ್ತಲನ್ನು ದೂರಮಾಡಿ ಜ್ಞಾನದ ಬೆಳಕನ್ನು ನೀಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಶ್ರಮ ಅತಿ ಮುಖ್ಯ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ತಿಳಿಸಿದರು.
ಮಂಗಳವಾರ ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ೬೩ ನೇ ವರ್ಷದ ಶಿಕ್ಷಕರ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಕರ ದಿನ ಆಚರಣೆ ಇಡೀ ದೇಶದಲ್ಲಿಯೇ ನೆಡೆಸಲಾಗುತ್ತಿದೆ, ವಿದ್ಯಾರ್ಥಿಗಳ ಜೀವನ ಗೋಲ್ಡನ್ ಲೈಫ್ ಪ್ರೌಢಶಿಕ್ಷಣ ಮುಗಿದ ನಂತರ ಶಾಲಾ ದಿನಗಳಿಗೆ ಹಿಂದುರುಗಿ ಬರಲು ಸಾದ್ಯವಿಲ್ಲ, ಶಿಕ್ಷಕರು ಮತ್ತು ಹಿರಿಯರ ಬಗ್ಗೆ ಗೌರವ ಬೆಳೆಸಿಕೊಂಡು ಜೀವದಲ್ಲಿ ಶಿಸ್ತನ್ನು ಬೆಳೆಸಿಕೊಂಡಾಗ ಉನ್ನತ ಸ್ಥಾನ ಏರಲು ಸಾದ್ಯ ಎಂದರು.
ಜೆವಿಎಸ್ ಶಾಲೆಗೆ ಒಳ್ಳೆಯ ಫಲತಾಂಶ ತರಲು ಶ್ರಮಿಸಿದ ಎಲ್ಲಾ ಶಿಕ್ಷಕರಿಗೆ ಧನ್ಯವಾದ ತಿಳಿಸಿದರು, ಈ ಆಚರಣೆಯನ್ನು ಇನ್ನೂ ಅದ್ದೂರಿ ಮಾಡುವ ನಿಟ್ಟಿನಲ್ಲಿ ನಮ್ಮ ಶಾಲೆಯ ಏಳಿಗೆಗಾಗಿ ದುಡಿದ ಶಿಕ್ಷಕರ ಹಲವು ಬೇಡಿಕೆಗಳನ್ನು ಈಡೇರಿಸಲು ಜಿಲ್ಲಾ ಒಕ್ಕಲಿಗರ ಸಂಘವು ತೀರ್ಮಾನಿಸಲಾಗಿದೆ ಎಂದರು, ಶಿಕ್ಷಕರು ಮಕ್ಕಳನ್ನು ತಮ್ಮ ಮಕ್ಕಳಂತೆ ಪ್ರೋತ್ಸಾಯಿಸಬೇಕು ಅವರಲ್ಲಿರುವ ಪ್ರತಿಭೆಗಳನ್ನು ಹೊರತಂದು ಮುಂದಿನ ದಿನಗಳಲ್ಲಿ ದೇಶಕ್ಕೆ ಒಳ್ಳೆಯ ಪ್ರಜೆಯನ್ನು ನೀಡಬೇಕು, ಮಕ್ಕಳ ಮನಸ್ಸಿನಲ್ಲಿ ಸದಾಕಾಲ ನೆನಪಿನಲ್ಲಿ ಇರುವಂತಹ ಗುರುಗಳಾಗಬೇಕು ಎಂದು ತಿಳಿಸಿದರು.
ಜೆವಿಎಸ್ ಶಾಲೆಯು ಪ್ರಾರಂಭವಾಗಿ ೪೧ ವರ್ಷಗಳಾಗಿವೆ ಈ ಶಾಲೆಯಲ್ಲಿ ಹಲವಾರು ಶಿಕ್ಷಕರು ತಮ್ಮ ವೃತ್ತಿ ಜೀವನವನ್ನು ಕಳೆದಿದ್ದು, ೨೫ ವರ್ಷಕ್ಕೂ ಹೆಚ್ಚು ಸೇವೆಯನ್ನು ಸಲ್ಲಿಸಿ ಇನ್ನೂ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ನಮ್ಮ ಶಾಲೆಯಲ್ಲಿ ಇದ್ದಾರೆ ಅವರಿಗೆ ನಮ್ಮ ಅಭಿನಂದನೆಗಳು ಎಂದು ತಿಳಿಸಿದರು.
ಜಿಲ್ಲಾ ಒಕ್ಕಲಿಗರ ಸಂಘದ ಗೌರವ ಕಾರ್ಯದರ್ಶಿ ಎಂ.ಸಿ ಪ್ರಕಾಶ್ ಮಾತನಾಡಿ ಸರ್ವಪಲ್ಲಿ ರಾಧಾಕೃಷ್ಣರವರ ಜನ್ಮದಿನವನ್ನು ಶಿಕ್ಷಕರಿಗೆ ಗೌರವ ಸಲ್ಲಿಸುವ ಸಲುವಾಗಿ ಸೆ. ೫ನ್ನು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡಲಾಗಿದೆ, ನಮ್ಮ ದೇಶದಲ್ಲಿ ಪ್ರತಿ ದಿನವು ಅನೇಕ ದಿನಾಚಾರಣೆಗಳು ನೆಡೆಯುತ್ತಿದ್ದು, ಆಯಾ ಇಲಾಖೆಗೆ ಸಬಂದಪಟ್ಟವರು ಆಚರಿಸುತ್ತಾರೆ, ೧೯೬೨ರ ಸೆ.೫ ರಂದು ಸರ್ವಪಲ್ಲಿ ರಾಧಾಕೃಷ್ಣರವರು ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಘೋಷಿಸಿ ಅಂದಿನಿಂದ ಇಂದಿನ ವರೆಗು ಶಿಕ್ಷಕರ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಜೆವಿಎಸ್ ಶಾಲೆಯಲ್ಲಿ ೨೫ ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ಶಿಕ್ಷಕರಾದ ರಾಮೇಗೌಡ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಿಕಟಪೂರ್ವ ಕಾರ್ಯದರ್ಶಿ ಐ.ಎಸ್ ಉಮೇಶ್ಚಂದ್ರ, ಮಾಜಿ ಅಧ್ಯಕ್ಷರಾದ ಬಿ.ಎಲ್,ಸಂದೀಪ್ ಮಾತನಾಡಿದರು. ಉಪಾಧ್ಯಕ್ಷ ಲಕ್ಷ್ಮಣ್ಗೌಡ ನಿರ್ದೇಶಕರುಗಳಾದ ರವಿಕುಮಾರ್, ಕೆ.ಎಸ್.ನಾರಾಯಣ ಗೌಡ, ರತೀಶ್ ಕುಮಾರ್, ಎಂಬಿ.ಆನಂದ್, ಜಿ.ಎಸ್.ಚಂದ್ರಪ್ಪ, ಹೆಚ್.ಬಿ.ಲಕ್ಷ್ಮೀ, ಕೆ.ಕೆ.ವೆಂಕಟೇಶ್, ಹೆಚ್.ಎನ್.ಶ್ರೀಧರ್, ಟಿ.ಡಿ.ಮಲ್ಲೇಶ್, ದಿನೇಶ್, ಪೃಥ್ವಿರಾಜ್, ಸತೀಶ್, ರಾಮಚಂದ್ರ, ಜಗನಾಥ್, ರಮೇಶ್, ಚೇತನ್, ಮೋಹನ್ಕುಮಾರ್, ಹೇಮಾವತಿ, ಸಿಇಓ ಕುಳ್ಳೇಗೌಡ, ಮ್ಯಾನೇಜರ್ ತೇಜಸ್ಮೂರ್ತಿ, ಮುಖ್ಯ ಶಿಕ್ಷಕ ವಿಜಿತ್, ಪುಷ್ವವತಿ, ಕಾಲೇಜು ಪ್ರಾಂಶುಪಾಲೆ ತೇಜಸ್ವಿನಿ ಉಪಸ್ಥಿತರಿದ್ದರು. ಶಾಲಾ ಸಹಕಾರ್ಯದರ್ಶಿ ಕೆ.ಕೆ.ಮನುಕುಮಾರ್ ಸ್ವಾಗತಿಸಿ, ಕಾಲೇಜು ಸಹ ಕಾರ್ಯದರ್ಶಿ ಎಂ.ಕೆ.ದಿನೇಶ್ ವಂದಿಸಿದರು.
Teacher’s day procession held at Zilla Okkaligara Community Hall