ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಉತ್ತಮ ಕಾರ್ಯನಿರ್ವಹಣೆಯಲ್ಲಿ ರಾಜ್ಯದಲ್ಲೇ ೨ ನೇ ಸ್ಥಾನಗಳಿಸಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಗೆ ಭಾಜನವಾಗಿದ್ದು, ೨ ಲಕ್ಷ ರೂ.ನಗದು ಪುರಸ್ಕಾರ ಪಡೆದಿದೆ ಎಂದು ಬ್ಯಾಂಕ್ನ ಅಧ್ಯಕ್ಷ ಡಿ.ಎಸ್.ಸುರೇಶ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೩-೨೪ ನೇ ಸಾಲಿನಲ್ಲಿ ಶಾಸನ ಬದ್ಧ ಲೆಕ್ಕ ಪರಿಶೋಧನೆ ಹಾಗೂ ನಬಾರ್ಡ್ ನಡೆಸಿದ ತಪಾಸಣೆಯಲ್ಲಿ ನಮ್ಮ ಬ್ಯಾಂಕು ಸತತವಾಗಿ ಎ ವರ್ಗೀಕೃತ ಶ್ರೇಣಿಯನ್ನು ಪಡೆದಿದೆ ಎಂದು ತಿಳಿಸಿದರು.
ಬ್ಯಾಂಕು ೨೮ ಶಾಖೆಗಳು ಹಾಗೂ ೨೭ ಪ್ರಾಥಮಿಕ ಸಹಕಾರ ಸಂಘಗಳು ಹಾಗೂ ಇತರೇ ೨೫೧ ಸಂಘಗಳ ಮೂಲಕ ಕೃಷಿ ಮತ್ತು ಕೃಷಿಯೇತರ ಸಾಲ ನೀಡಲಾಗಿದೆ ಎಂದರು.
ಬ್ಯಾಂಕು ಹಾಲಿ ೬೫ ಕೋಟಿ ರೂ. ಷೇರು ಬಂಡವಾಳ ಹೊಂದಿದೆ. ೨.೨೦ ಲಕ್ಷಕ್ಕೂ ಹೆಚ್ಚು ಠೇವಣಿದಾರರಿದ್ದು, ೧೨೮೧ ಕೋಟಿ ರೂ. ವಿವಿಧ ಠೇವಣಿ ಸಂಗ್ರಹಣೆ ಮಾಡಲಾಗಿದೆ ಎಂದರು.
ಶೂನ್ಯ ಬಡ್ಡಿದರದಲ್ಲಿ ಮಾರ್ಚ್ ೨೦೨೪ ರ ಅಂತ್ಯಕ್ಕೆ ೫೭೨೨೯ ರೈತರಿಗೆ ೮೭೩ ಕೋಟಿ ರೂ. ಕೆಸಿಸಿ ಬೆಳೆ ಸಾಲ ವಿತರಣೆ ಮಾಡಿ ರೈತರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ೨೦೨೪-೨೫ ನೇ ಸಾಲಿಗೆ ರೂ. ೯೩೫ ಕೋಟಿ ಗಳ ಕೃಷಿ ಸಾಲ ನೀಡುವ ಗುರಿ ಹೊಂದಲಾಗಿz. ಈ ವರ್ಷ ಮಾರ್ಚ್ ಅತ್ಯಂಕ್ಕೆ ಶೇ.೩ ಬಡ್ಡಿ ದರದಲ್ಲಿ ೧೯೦ ರೈತರಿಗೆ ೧೩.೩೮ ಕೊಟಿ ರೂ. ಸಾಲ ವಿತರಿಸಲಾಗಿದೆ.
೨೦೨೩-೨೪ ನೇ ಸಾಲಿಗೆ ಒಟ್ಟು ೧೨೨೦೭ ಸಾಲಗಾರ ಸದಸ್ಯರಿಗೆ ೩೩೬ ಕೋಟಿ ಕೃಷಿಯೇತರ ಸಾಲ ನೀಡಲಾಗಿದೆ. ಪ್ರಸ್ತುತ ವರ್ಷದಲ್ಲಿ ೩೫೦ ಕೋಟಿ ರೂ. ಕೃಷಿಯೇತರ ಸಾಲ ವಿತರಣಾ ಗುರಿ ಹೊಂದಲಾಗಿದೆ ಎಂದರು.
ಬ್ಯಾಂಕ್ನಲ್ಲಿ ೧೩೬೭೬ ಸ್ವಸಹಾಯ ಗುಂಪುಗಳಿದ್ದು, ೨೦೨೩-೨೪ ನೇ ಸಾಲಿನಲ್ಲಿ ೯೭ ಹೊಸ ಗುಂಪುಗಳನ್ನು ರಚನೆ ಮಾಡಲಾಗಿದೆ. ರುತ್ತದೆ. ಎನ್.ಆರ್.ಎಲ್.ಎಂ. ಯೋಜನೆಯಲ್ಲಿ ೫೭ ಸ್ವಸಹಾಯ ಗುಂಪುಗಳಿಗೆ ರೂ. ೧.೨೭ ಕೋಟಿ ಸಾಲ ವಿತರಣೆ ಮಾಡಲಾಗಿದೆ. ಈ ಮೂಲಕ ಜಿಲ್ಲೆಯ ಬಡ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದರು.
ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಬಹು ಸೇವಾ ಯೋಜನೆಯ ಮೂಲಕ ೪೩ ಸಂಘಗಳಿಗೆ ೧೫.೯೭ ಕೋಟಿ ರೂ. ಗೋದಾಮು ನಿರ್ಮಾಣಕ್ಕೆ ಸಾಲ ನೀಡಲಾಗಿದೆ ಎಂದರು.
ರೈತರ ಪ್ರಾಮಾಣಿಕ ಮರುಪಾವತಿ, ಆಡಳಿತ ಮಂಡಳಿಯ ಸೂಕ್ತ ಮಾರ್ಗದರ್ಶನ ಮತ್ತು ಸಿಬ್ಬಂದಿಗಳ ನಿರಂತರ ಶ್ರಮದಿಂದ ೨೦೨೩-೨೪ ನೇ ಸಾಲಿಗೆ ಸಾಲ ವಸೂಲಾತಿ ಶೇ. ೯೮ ರಷ್ಟಾಗಿದ್ದು, ಎನ್ಪಿಎ ಪ್ರಮಾಣ ಶೇ. ೩.೫೨ ರಷ್ಟಿದೆ ಎಂದರು.
೨೦೨೩-೨೪ ಸಾಲಿನಲ್ಲಿ ೨೨.೦೮ ಕೋಟಿ ರೂ. ಲಾಭ ಗಳಿಸಿದ್ದು, ೭.೪೨ ಕೋಟಿ ರೂ. ನಿವ್ವಳ ಲಾಭ ಘೋಷಣೆ ಮಾಡಲಾಗಿದೆ ಎಂದರು.
ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಮತ್ತು ಯುಪಿಐಎನ್ ಸೇವೆ IಒPS ಮತ್ತು UPIಓ ಸೇವೆ ಪ್ರಗತಿಯಲ್ಲಿದ್ದು ಸದ್ಯದಲ್ಲಿಯೇ ಗ್ರಾಹಕರಿಗೆ ಲಭಿಸಲಿದೆ ಎಂದರು.
೨೦೨೩-೨೪ ನೇ ಸಾಲಿನಲ್ಲಿ ಸದಸ್ಯ ಸಹಕಾರ ಸಂಘಗಳಿಗೆ ಕಟ್ಟಡ ನಿರ್ಮಾಣ, ಪೀಠೋಪಕರಣ ಖರೀದಿಗಳಿಗಾಗಿ ಆರ್ಥಿಕ ಸೌಲಭ್ಯ ನೀಡಲು ಉದ್ದೇಶಿಸಿ ರೂ. ೧.೫೦ ಕೋಟಿ ಕಾದಿರಿಸಲಾಗಿದೆ ಎಂದರು.
ಬ್ಯಾಂಕಿನ ಹೊಸ ಕಟ್ಟಡದ ನಿರ್ಮಾಣ ಕಾರ್ಯ ಮುಗಿದಿದ್ದು, ಸದ್ಯದಲ್ಲಿಯೇ ಸಾರ್ವಜನಿಕ ಸೇವೆಗೆ ಸಮರ್ಪಣೆಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ನ ಉಪಾಧ್ಯಕ್ಷ ನಿರ್ದೇಶಕರುಗಳಾದ ಹೆಚ್.ಬಿ.ಶಿವಣ್ಣ, ಎಂ.ಎಸ್.ನಿರಂಜನ್, ಪರಮೇಶ್, ವ್ಯವಸ್ಥಾಪಕ ನಿರ್ದೇಶಕ ತಿಮ್ಮಪ್ಪ ಇದ್ದರು.
Award from Apex Bank to District Co-operative Central Bank