ಚಿಕ್ಕಮಗಳೂರು: ನಗರ ಗೃಹ ನಿರ್ಮಾಣ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ೧೦.೫೬.೬೫೦ ರೂ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೆಚ್,ಎಂ, ನಾರಾಯಣ ಹೇಳಿದರು.
ನಗರದ ಶ್ರೀ ವಿದ್ಯಾಭಾರತಿ ಸಭಾಂಗಣದಲ್ಲಿ ಭಾನುವಾರ ನಡೆದ ನಗರ ಗೃಹ ನಿರ್ಮಾಣ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಲಾಭಾಂಶದಲ್ಲಿ ಶೇ ೫ ರಷ್ಟು ಡಿವಿಡೆಂಟ್ ಸದಸ್ಯರಿಗೆ ನೀಡಲಾಗುವುದು ಎಂದು ತಿಳಿಸಿದರು.
೧೨,೧೨,೨೭೦ ರೂ ನೀಡಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನವನ್ನು ಖರೀದಿಸಿದ್ದು ಅದರಲ್ಲಿ ಸಂಘದ ಶತಮಾನೋತ್ಸವ ಕಟ್ಟಡವನ್ನು ನಿರ್ಮಿಸಲಾಗುವುದು. ಸದ್ಯದಲ್ಲೇ ಶಂಕುಸ್ಥಾಪನೆ ನೆರವೇರಿಸಲಿದ್ದು ನಿರ್ಮಾಣಕ್ಕೆ ಸದಸ್ಯರೆಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಂಘದಲ್ಲಿ ಒಂದು ಕೋಟಿ ೩೫ ಲಕ್ಷ ರೂ ಠೇವಣಿ ಹಣವಿದ್ದು ಸಂಸ್ಥೆ ೩ ಕೋಟಿ ೧೬ ಲಕ್ಷ ವಾರ್ಷಿಕ ವ್ಯವಹಾರ ನಡೆಸಿದೆ. ೫೨ ಲಕ್ಷ ರು ವ್ಯಾಪಾರ ಸಾಲ. ೯೯ ಲಕ್ಷ ರೂ ಆಧಾರ ಸಾಲ ನೀಡಲಾಗಿದೆ ಎಂದು ತಿಳಿಸಿದರು.
ಸಂಘದ ಬೆಳವಣಿಗೆಗಾಗಿ ಸದಸ್ಯರು ಸಂಘದಲ್ಲಿ ಠೇವಣಿ ಇಡಬೇಕು. ತಮ್ಮ ಸ್ನೇಹಿತರನ್ನೂ ಸದಸ್ಯರನ್ನಾಗಿ ಮಾಡಬೇಕು ಎಂದು ಹೇಳಿದರು.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿರುವ ಸಂಘದ ಸದಸ್ಯರ ಮಕ್ಕಳಿಗೆ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರದ ಜೊತೆಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.
ಮಾಜಿ ಅಧ್ಯಕ್ಷ ಎಲ್, ಕೆ, ವೇಣುಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಪಿ, ಸಂತೋಷ್ ವಾರ್ಷಿಕ ವರದಿಯನ್ನು ಮಂಡಿಸಿದರು.
ಸಂಘದ ಉಪಾಧ್ಯಕ್ಷೆ ಎಲ್.ಕೆ. ರುಕ್ಮಿಣಿ ಕೃಷ್ಣಮೂರ್ತಿ. ಮಾಜಿ ಅಧ್ಯಕ್ಷರಾದ ಸಿ. ಎಸ್. ಕುಬೇರ. ಎಲ್. ವಿ. ಕೃಷ್ಣಮೂರ್ತಿ. ಸಿ.ಎಸ್. ಏಕಾಂತ ರಾಮು. ಬಿ. ವಿರೂಪಾಕ್ಷಪ್ಪ.ನಿರ್ದೇಶಕರಾದ ಸಿ.ಎಂ. ವೇಣುಗೋಪಾಲ್. ಸಿ. ಡಿ. ರವೀಂದ್ರ ನಾಯ್ಕ. ಬಿ. ಎಂ. ಕುಮಾರ್. ಕೆ. ವಿಶ್ವನಾಥ್. ಸಿ. ಈ. ಗೀತಾ. ಆಶಾ ಉಪಸ್ಥಿತರಿದ್ದರು.
Annual General Meeting of All Members of Urban Housing Co-operative Society