ಚಿಕ್ಕಮಗಳೂರು: ಜನಪರ ಸಾಹಿತ್ಯ ಪರಿಷತ್ತು, ಮೈಸೂರು,ಡಾ. ಎಂ.ಶಾಂತಾ ರಾಮಕೃಷ್ಣ ಅಭಿಮಾನಿಗಳ ಸಂಗ,ಸ್ವಾಮಿ ಎಂ.ರಾಜೇಶ್ ಅಭಿಮಾನಿಗಳ ಬಳ ಮೈಸೂರು ಇವುಗಳ ವತಿಯಿಂದ ಇಂದು ಮೈಸೂರಿನಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ರವರಿಗೆ `ಕನಕ ಮಾರ್ಗ ಪ್ರಶಸ್ತಿ-೨೦೨೪’ ನೀಡಿ ಗೌರವಿಸಲಾಯಿತು.
ಮೈಸೂರು ನಗರದ ಜೆ.ಎಲ್.ಬಿ ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದ ೨೦ ಮಂದಿಗೆ ಕನಕ ಮಾರ್ಗ ಪ್ರಶಸ್ತಿ-೨೦೨೪’ ನೀಡಿ ಗೌರವಿಸಲಾಯಿತು.
ಕನಕ ಗುರು ಪೀಠದ ಶ್ರೀ ಶಿವಾನಂದ ಪುರಿ ಸ್ವಾಮಿಜಿ ರವರ ದಿವ್ಯ ಸಾನ್ನಿಧ್ಯದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ರಾಜ್ಯಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರೂ ಹಾಗೂ ಮಾಜಿ ಸಚಿವರೂ ಆದ ಹೆಚ್.ಎಂ.ರೇವಣ್ಣ ಸೇರಿ ಹಲವಾರು ಗಣ್ಯರು ಉಪಸ್ಥಿತರಿದ್ದರು.
ರೇಖಾ ಹುಲಿಯಪ್ಪಗೌಡರವರು ಕಳೆದ ೨೫ ವರ್ಷಗಳಿಂದ ರಾಜಕೀಯ ಸೇರಿದಂತೆ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಇವರು ರಾಜ್ಯ ತೆಂಗುನಾರಿ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಸಂದರ್ಭದಲ್ಲಿ ಮಂಡಳಿಗೆ ಕಾಯಕಲ್ಪ ನೀಡಿದ್ದಾರೆ. ಹಾಗೂ ಇವರು ಈಗ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Former Zilla Panchayat President Rekha Huliappa Gowda “Kanaka Marg Award”