ALSO FEATURED IN
ಚಿಕ್ಕಮಗಳೂರು: ಉರ್ದು ಕಲಿತರಿಗೆ ಅಂಗನವಾಡಿ ಕೇಂದ್ರದಲ್ಲಿ ನೇಮಕಾತಿಗೆ ಆದೇಶ ನೀಡಿರುವ ರಾಜ್ಯಸರ್ಕಾರದ ನಡೆ ವಿರೋಧಿಸಿ ಕನ್ನಡಸೇನೆ ಮುಖಂಡರುಗಳು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಕರ್ನಾಟಕದಲ್ಲಿ ಜಾತಿ, ಜನಾಂಗ ಯಾವುದೇ ಇರಲೀ, ಕನ್ನಡ ಭಾಷೆ ಕಲಿತವರಾಗಿರಬೇಕು. ಹೀಗಾಗಿ ಶೇ.೭೫ ಭಾಗ ಕನ್ನಡಿಗರಿಗೆ ರಾಜ್ಯದಲ್ಲಿ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ವೇದಿಕೆಗಳಲ್ಲಿ ಕನ್ನಡತನ ಮೆರೆಯುತ್ತಿದ್ದು ನೈಜವಾಗಿ ಕನ್ನಡಿಗರ ಮೇಲೆ ಅಭಿಮಾನವಿಲ್ಲ. ಅದರಂತೆ ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಉರ್ದು ಕಲಿತರಿಗೆ ಅವಕಾಶ ಕಲ್ಪಿಸಿರುವುದು ಖಂಡನೀಯ ಎಂದರು.
ರಾಜ್ಯದಲ್ಲಿ ಕನ್ನಡ ಪ್ರಥಮ ಭಾಷೆಯಾಗಿ ಕಲಿತಿರುವ ಶೇ.೨೫ ಇತರೆ ಭಾಷಿಗರಿಗೆ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿಕೊಡಿ. ಇಲ್ಲವಾದಲ್ಲಿ ನೆರೆ ರಾಜ್ಯದಿಂದ ವಾಸಿಸುವ ಶೇ.೨೫ ಭಾಗ ಉದ್ಯೋಗ ಕೇಳಲಿದ್ದಾರೆ. ಇದರಿಂದ ಕನ್ನಡಿಗರಿರು ಉದ್ಯೋಗಕ್ಕೆ ಎಲ್ಲಿ ತೆರಳಬೇಕು ಎಂದು ಹೇಳಿದ್ದಾರೆ.
ಆದ್ದರಿಂದ ಪರಭಾಷಿಗರಿಗೆ ಮೀಸಲಾತಿ ಕೊಡಬಾರದು. ಸರ್ಕಾರ ಆದೇಶಿಸಿರುವ ಉರ್ದು ಮೀಸ ಲಾತಿ ರದ್ದುಪಡಿಸಬೇಕು. ಇಲ್ಲವಾದಲ್ಲಿ ರಾಜ್ಯದ ಕನ್ನಡಿಗರು ಮತ್ತು ಕನ್ನಡಿಪರ ಸಂಘಟನೆಗಳು ಉಗ್ರ ಹೋರಾಟದ ಜೊತೆಗೆ ವಿಧಾನಸೌಧ ಮುತ್ತಿಗೆ ಯತ್ನಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಅಪರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಮುಖಂಡರುಗಳಾದ ಸತೀಶ್, ಟೋನಿ, ನಿಲೇಶ್, ಅಶೋಕ್, ಪಾಪಣ್ಣ, ಚೈತ್ರ, ಪುಷ್ಪ, ಯೋಗೀಶ್, ಹರೀಶ್, ಹುಣಸೇಮಕ್ಕಿ ಲಕ್ಷ್ಮಣ್, ಪದ್ಮಾವತಿ, ಸತೀಶ್, ಮತ್ತಿತರರಿದ್ದರು.
Employment for those who learned Urdu – Kannada Sene protest