ಚಿಕ್ಕಮಗಳೂರು: ನೀಡಿದ್ದ ಸಾಲ ವಾಪಸ್ಸು ಕೇಳಿದ್ದಕ್ಕೆ ವ್ಯಕ್ತಿಯೋರ್ವನನ್ನು ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿ ಹೆಣವನ್ನು ಹೂತು ಹಾಕಿದ್ದ ಆರೋಪಿಗಳಿಗೆ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪುನೀಡಿದೆ.
ನಾಗೇಶ್ ಆಚಾರ್ ಎಂಬ ವ್ಯಕ್ತಿ ೨೦೨೧ ರ ನ.೨೫ರಂದು ಬೆಳಿಗ್ಗೆ ೦೮ ಗಂಟೆ ವೇಳೆಗೆ ಮೂಡಿಗೆರೆ ತಾಲ್ಲೂಕು ಬಿದುರುತಳ ಗ್ರಾಮದಲ್ಲಿರುವ ಬಾಳೂರು ವಾಸಿಯಾದ ಕೃಷ್ಣಗೌಡ ಬಿ.ಎಂ. ರವರಿಗೆ ಸೇರಿದ ಬಿದುರುತಳ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಮನೆಯ ಆಚಾರಿ ಕೆಲಸಕ್ಕೆ ಹೋಗುತ್ತೇನೆಂದು ಹಾಗೂ ಪುನಃ ಕೆಲಸ ಮುಗಿಸಿ ಭಾನುವಾರ ಸಂಜೆ ಬರುತ್ತೇನೆಂದು ಹೇಳಿ ಹೋಗಿದ್ದ ವ್ಯಕ್ತಿ ಕಾಣೆಯಾಗಿದ್ದರು.
ಈ ಬಗ್ಗೆ ಪತ್ನಿ ಸುಮಾರವರು ನ.೨೮-೧೧-೨೦೨೧ ರಂದು ಸುಮಾರವರ ಸಂಬಂಧಿಕರೊಂದಿಗೆ ಬಾಳೂರು ಪೊಲೀಸ್ ಠಾಣೆಗೆ ಬಂದು ನಾಗೇಶ್ ಆಚಾರಿ ಕಾಣೆಯಾಗಿದ್ದಾರೆಂದು ಪ್ರಕರಣ ದಾಖಲಿಸಿದ್ದರು. ಬಾಳೂರು ಪೋಲೀಸರು. ಸುಮಾರವರ ಸಂಬಂಧಿಕರು ಮತ್ತು ಬಾಳೂರು ಗ್ರಾಮಸ್ಥರು ಸೇರಿ ಬಿದರುತಳ ಗ್ರಾಮದಲ್ಲಿ. ಕಾಣಿಯಾದ ವ್ಯಕ್ತಿಯನ್ನು ಹುಡುಕಲಾಗಿ ಸದರಿ ನಾಗೇಶ್ ಆಚಾರಿಯವರ ಮೃತದೇಹವನ್ನು ಬಾಳೂರು ಮೀಸಲು ಅರಣ್ಯ ಪ್ರದೇಶದಲ್ಲಿ ಮಣ್ಣಿನೊಳಗೆ ಹೂತಿದ್ದು ಅದರಲ್ಲಿ ಕಾಲು ಮತ್ತು ಸ್ವಲ್ಪ ಬಟ್ಟೆ ಹೊರಕಾಣುತ್ತಿದ್ದು.
ಮೃತ ದೇಹ ನಾಗೇಶ್ ಆಚಾರ್ ರವರಂತೆಯೇ ಕಾಣುತ್ತಿದೆ ಎಂದು ತಿಳಿಸಿದ ಮೇರೆಗೆ ಸುಮಾ ರವರು ನೀಡಿದ ದೂರಿನನ್ವಯ ಆರೋಪಿತರಾದ ಕೃಷ್ಣಗೌಡ ಬಿ.ಎಂ. ಮತ್ತು ಉದಯ ಬಿ.ಸಿ. ರವರುಗಳ ವಿರುದ್ಧ ಬಾಳೂರು ಠಾಣೆಯಲ್ಲಿ ಬಾಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ಅಂದಿನ ವೃತ್ತ ನಿರೀಕ್ಷಕರಾದ ಜೆ.ಸಿ.ಸೋಮಶೇಖರ್ ರವರು ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಭಾನುಮತಿ ಬಿ.ಸಿ. ರವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ೧ನೇ ಆರೋಪಿಯಾದ ಕೃಷ್ಣಗೌಡ ರವರಿಗೆ ಕಲಂ ೩೦೨ ಐಪಿಸಿ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು ೫೦,೦೦೦ ರೂ ದಂಡ, ಪಾವತಿಸಲು ತಪ್ಪಿದ್ದಲ್ಲಿ ೬ ತಿಂಗಳ ಸಾದಾ ಸಜೆ, ಕಲಂ ೨೦೧ ಐಪಿಸಿ ಅಪರಾಧಕ್ಕಾಗಿ ೩ ವರ್ಷಗಳ ಸಾದಾ ಸಜೆ ಮತ್ತು ೩೦೦೦ ದಂಡ ಮತ್ತು ದಂಡ ಪಾವತಿಸಲು ತಪ್ಪಿದ್ದಲ್ಲಿ ೬ ತಿಂಗಳ ಸಾದಾ ಸಜೆ ಹಾಗೂ ಆಯುಧ ಕಾಯಿದೆ ಕಲಂ ೩೦ ರ ಅಪರಾಧಕ್ಕಾಗಿ ೬ ತಿಂಗಳ ಸಾದಾ ಸಜೆ ಹಾಗೂ ೨ನೇ ಆರೋಪಿ ಉದಯ ಬಿ.ಸಿ. ರವರಿಗೆ ಕಲಂ ೨೦೧ ಐಪಿಸಿ ಅಪರಾಧಕ್ಕಾಗಿ ೩ ವರ್ಷಗಳ ಸಾದಾ ಶಿಕ್ಷೆ ಮತ್ತು ೩೦೦೦ ದಂಡ ವಿಧಿಸಿದ್ದು ಮತ್ತು ದಂಡ ಪಾವತಿಸಲು ತಪ್ಪಿದಲ್ಲಿ ೬ ತಿಂಗಳ ಸಾದಾ ಸಜೆಯನ್ನು ವಿಧಿಸಿ ತೀರ್ಪು ನೀಡಿರುತ್ತಾರೆ.
ಈ ಪ್ರಕರಣದಲ್ಲಿ ವಿಚಾರಣಾ ಸಮಯದಲ್ಲಿ ಎ.ಎಸ್.ಐ. ಯತೀಶ್ ರವರು ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಸಮರ್ಪಕವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಹಾಗೂ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಹೆಚ್.ಎಸ್.ಲೋಹಿತಾಶ್ವಚಾರ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.
The accused who shot and killed and buried the shroud were sentenced to life imprisonment