ಚಿಕ್ಕಮಗಳೂರು: ರಾಮಾಯಣ ಮಹಾಕಾವ್ಯದ ಕರ್ತೃ ಶ್ರೀ ಮಹರ್ಷಿ ವಾಲ್ಮೀಕಿಯವರ ತತ್ವ ಸಿದ್ಧಾಂತಗಳು ಸದಾ ಜೀವಂತ ಎಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತದ ಮಹಾಕಾವ್ಯಗಳಲ್ಲಿ ರಾಮಾಯಣವು ಮಹತ್ವ ಪೂರ್ಣ ಗ್ರಂಥವಾಗಿದೆ ಯುಗ ಪುರುಷ ಶ್ರೀ ರಾಮನ ಆದರ್ಶ, ಜೀವನ ಶೈಲಿ, ವ್ಯಕ್ತಿತ್ವ ಹಾಗೂ ಅವರ ದೈವ ಸ್ವರೂಪವನ್ನು ಕಾವ್ಯದ ಮೂಲಕ ಅದ್ಭುತವಾಗಿ ವರ್ಣಿಸಲಾಗಿದೆ ಇಂದಿಗೂ ರಾಮ ರಾಜ್ಯದ ಪರಿಕಲ್ಪನೆಯನ್ನು ಪ್ರತಿಯೊಬ್ಬರು ಮನದಟ್ಟು ಮಾಡಿಕೊಳ್ಳುತ್ತಾರೆ ಇಂತಹ ಮಹತ್ವ ಪೂರ್ಣ ಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರ ಬದುಕು ಪ್ರೇರಣೀಯವಾದುದು ಎಂದರು.
ಮಹರ್ಷಿ ವಾಲ್ಮೀಕಿ ಕೇವಲ ಯಾವುದೇ ಒಂದು ವರ್ಗಕ್ಕೆ ಸೀಮಿತರಾದವರಲ್ಲ ಶ್ರೀ ರಾಮನ ವ್ಯಕ್ತಿತ್ವ ಸಾರುವ ಅವರ ರಾಮಾಯಣ ಮಾಹಾ ಕಾವ್ಯವು ವಿಶ್ವಾದ್ಯಂತ ಮನ್ನಣೆ ಪಡೆದು ಇದರ ಸಾರವನ್ನು ತಿಳಿಯುವ ಪ್ರತಿಯೊಬ್ಬ ವ್ಯಕ್ತಿಯ ಬದುಕು ಬದಲಾಯಿಸುವ ಗ್ರಂಥ ಇದಾಗಿದೆ. ಸಮಾಜದಲ್ಲಿ ಸತ್ಯ, ನಿಷ್ಠೆ, ಸಮಾನತೆಯ ಸಹಬಾಳ್ವೆ, ಪರೋಪಕಾರಿಯಾಗಿ ಹಾಗೂ ಧರ್ಮ ಶ್ರದ್ಧೆಯಿಂದ ಬದುಕಲು ಕಾವ್ಯವು ಸಹಕಾರಿಯಾಗಿದೆ.
ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರಂತಹ ಮಹಾನ್ ವ್ಯಕ್ತಿಗಳು ಸಮಾಜದ ಅನಿಷ್ಠ ಪದ್ಧತಿಯನ್ನು ದೂರಮಾಡಿ ಸಮಾನತೆಯಿಂದ ಬದುಕುವ ಮಾರ್ಗವನ್ನು ಸಾರಿದ್ದಾರೆ ಇವರ ವಿಚಾರದಾಗಳು ಸಧಾ ಜೀವಂತವಾದುದು ವ್ಯಕ್ತಿ ಪೂಜೆಗಿಂತ ಅವರ ವ್ಯಕ್ತಿತ್ವ ಹಾಗೂ ತತ್ವಗಳನ್ನು ಅನುಸರಿಸುವುದರಿಂದ ಉತ್ತಮ ನಾಗರಿಕರಾಗಲು ಸಾಧ್ಯ ಎಂದ ಅವರು ಮಹರ್ಷಿ ವಾಲ್ಮೀಕಿ ರಾಮಾಯಣದ ತತ್ವ ಸಿದ್ಧಾಂತಗಳನ್ನು ತಿಳಿದು ಉತ್ತಮ ಬದುಕು ರೂಪಿಸಿಕೊಳ್ಳಿ ಎಂದರು.
ನಗರ ಸಭೆ ಅಧ್ಯಕ್ಷೇ ಸುಜಾತ ಶಿವಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ.ಯಾವುದೇ ವ್ಯಕ್ತಿಯು ಆಸ್ಥಿ, ಐಶ್ವರ್ಯ, ಹಣದಿಂದ ಶೇಷ್ಠನಾಗುವುದಿಲ್ಲಾ ಆತನ ಜೀವನ ಶೈಲಿ ಹಾಗೂ ವಿಚಾರಗಳು ಉತ್ತಮವಾಗಿದಲ್ಲಿ ಅವರನ್ನು ಗೌರವಿಸಿ ಶೇಷ್ಠತೆಯನ್ನು ಗಳಿಸುತ್ತಾನೆ, ಒಬ್ಬ ತಳ ಸಮುದಾಯದ ವ್ಯಕ್ತಿ ಭಾರತದ ಮಹಾನ್ ಕಾವ್ಯವನ್ನು ರಚಿಸಬೇಕಾದರೆ ಅವರ ಜೀವನ ಹಾಗೂ ಸಿದ್ಧಾಂತಗಳು ಪ್ರತಿಯೊಬ್ಬರು ಗೌತವಿಸಬೇಕಾದುದು ಮಹರ್ಷಿ ವಾಲ್ಮಿಕಿಯವರು ಶ್ರೀ ರಾಮನ ಭಕ್ತನಾಗಿದ್ದು ಅವರ ಅನುಗ್ರಹದಿಂದ ರಾಮಾಯಣ ರಚಿಸಲಾಯಿತು ಎಂದು ಪುರಾಣಗಳು ತಿಳಿಸುತ್ತವೆ.
ವಿಶ್ವವೇ ಭಕ್ತಿಯಿಂದ ಪೂಜಿಸಿ ಆರಾಧಿಸುವ ಶ್ರೀ ರಾಮಾನ ಅನುಗ್ರಹಕ್ಕೆ ಪಾತ್ರರಾದ ಮಹರ್ಷಿ ವಾಲ್ಮೀಕಿಯವರ ಜೀವನ ಕ್ರಮಗಳು ಹಾಗೂ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಬದುಕು ನಿರ್ವಹಿಸಲು ಸಹಕಾರಿಯಾಗುತ್ತವೆ ಎಂದ ಅವರು ತಮ್ಮ ಮಕ್ಕಳಲ್ಲಿ ಭಾರತದ ನಾಡು, ನುಡಿ, ಸಂಸ್ಕೃತಿ, ಆಚಾರ, ವಿಚಾರಗಳ ಅರಿವು ಮೂಡಿಸಿ ಸಮಾಜದಲ್ಲಿ ಸಾಮರಸ್ಯದಿಂದ ಬದುಕುವ ಪಾಠವನ್ನು ತಿಳಿಸಿಕೊಡಿ ಎಂದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಮಾತನಾಡಿ ಮಹರ್ಷಿ ವಾಲ್ಮೀಕಿಯವರು ರಾಮಾಯಣ ಮಹಾಕಾವ್ಯವನ್ನು ರಚಿಸಿ ದೈವ ಸ್ವರೂಪಿ ವ್ಯಕ್ತಿಯಾಗಿದ್ದಾರೆ. ಯಾವುದೇ ವ್ಯಕ್ತಿಯು ಶ್ರಮ, ಶ್ರದ್ಧೆ, ಧೈರ್ಯದಿಂದ ಎಂತಹ ಕಾರ್ಯವನ್ನು ಪೂರ್ಣಗೊಳಿಸಬಹುದು ಆತ್ಮ ವಿಶ್ವಾಸವು ಮನುಷ್ಯನ ಅತ್ಯುತ್ತಮ ಸಂಪತ್ತು,
ನಿಷ್ಠೆಯಿಂದ ಮಾಡಿದ ಪ್ರತಿ ಕೆಲಸವು ಯಶಸ್ವಿಯಾಗುತ್ತವೆ. ಸಮಾಜದಲ್ಲಿನ ಕಟ್ಟ ಕಡೆಯ ವ್ಯಕ್ತಿಗಳು ಇಂತಹ ಮಹಾನ್ ಪುರುಷರ ಜೀವನ ಕ್ರಮಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಸರ್ಕಾರವು ದೀನ ದಲಿತರ ಪರ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಅವರನ್ನು ಪ್ರಬಲರನ್ನಾಗಿಸಲು ಕ್ರಮವಹಿಸುತ್ತಿದೆ ಪ್ರತಿಯೊಬ್ಬರು ಶಿಕ್ಷಣ ಪಡೆದು ಜ್ಞಾನವಂತರಾಗಿ ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಕಾರ್ಯ ಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಸಿ.ಟಿ. ರವಿ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಬೆಂಗಳೂರು ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರ ಶಾಸಕ ಟಿ.ಡಿ. ರಾಜೇಗೌಡ, ಅವರ ಸಂದೇಶಗಳನ್ನು ಓದಲಾಯಿತು. ಅಕ್ಕ ಐ.ಎ.ಎಸ್. ಅಕಾಡೆಮಿಯ ಮುಖ್ಯಸ್ಥರಾದ ಡಾ. ಶಿವಕುಮಾರ್ ಅವರು ಮಹರ್ಷಿ ವಾಲ್ಮೀಕಿ ಜೀವನ ಹಾಗೂ ಸಾಧನೆಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ಕಲಾ ತಂಡಗಳೊಂದಿಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ನಗರದ ತಾಲ್ಲೂಕು ಕಚೇರಿಯಿಂದ ಕುವೆಂಪು ಕಲಾ ಮಂದಿರದ ವರೆಗೆ ಆಯೋಜಿಸಿದ್ದ ಮೆರವಣಿಗೆಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಚಾಲನೆ ನೀಡಿದರು ಮೆರವಣಿಗೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಹೆ.ಎಸ್. ಕೀರ್ತನಾ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ತಹಶೀಲ್ದಾರ್ ಡಾ.ಸುಮಂತ್ ಹಾಗೂ ಇತರರು ಭಾಗಿಯಾಗಿದ್ದರು.
ಮಾಡಲಾಯಿತಿ ಕಾರ್ಯಕ್ರಮದಲ್ಲಿ. ಭದ್ರಾ ಕಾಡಾ ಶಿವಮೊಗ್ಗ ಅಧ್ಯಕ್ಷರಾದ ಡಾ. ಅಂಶುಮಂತ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಯಾಜ್ ಅಹಮದ್,ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಶಿವಾನಂದಸ್ವಾಮಿ, ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಜಿ.ಕೆ. ಭೀಮಪ್ಪ, ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಯುವಕ ಸಂಘದ ಅಧ್ಯಕ್ಷ ಜಗದೀಶ್ ಕೋಟೆ ಹಾಗೂ ಡಿಎಸ್ಎಸ್ ಮುಖಂಡರುಗಳಾದ ಕೆ.ಟಿ ರಾಧಕೃಷ್ಣ, ಹುಣಸೇಮಕ್ಕಿ ಲಕ್ಷ್ಮಣ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂಧಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
Shri Maharshi Valmiki Jayanti Programme