ಚಿಕ್ಕಮಗಳೂರು: ಎತ್ತಿನ ಹೊಳೆ ಯೋಜನೆಯ ನೀರು ಹರಿದು ದೇವನೂರು ಕೆರೆ ಭರ್ತಿಯಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಅವರು ಭಾನುವಾರ ದೇವನೂರು ಕೆರೆಗೆ ಬಾಗೀನ ಅರ್ಪಸಿ ನಂತರ ಮಾತನಾಡಿದರು. ಸಖರಾಯಪಟ್ಟಣದ ಹಾಗೂ ಲಕ್ಯ ಹೋಬಳಿಗಳೆರಡು ಬರಗಾಲ ಪೀಡಿತ, ದೈವ ಕೃಪೆಯಿಂದ ೨೦೨೨ ರಲ್ಲಿ ದೇವನೂರು ಕೆರೆ ತುಂಬಿತ್ತು. ಹಿಂದೆ ಎತ್ತಿನ ಹೊಳೆ ಯೋಜನೆಗೆ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಇಂದು ಅದೇ ಎತ್ತಿನ ಹೊಳೆಯ ನೀರು ಹರಿದು ಬಂದು ದೇವನೂರು ಕೆರೆ ತುಂಬಿ ಹರಿಯುತ್ತಿದೆ ಎಂದರು.
ರೈತರಿಗೆ ಜಾತಿ, ಪಕ್ಷ ವಿಲ್ಲ. ರೈತರು ಸಂವೃದ್ಧಿಯಾಗಿರಬೇಕು. ಒಳ್ಳೆಯ ಮಳೆ, ಬೆಳೆ, ಉತ್ತಮ ಬೆಲೆ ಸಿಕ್ಕರೆ ಸರ್ಕಾರದ ಯಾವುದೇ ಉಚಿತ ಯೋಜನೆಗಿಂತಲೂ ಮಿಗಿಲಾದದ್ದು, ದೈವ ಕೃಪೆ ಮತ್ತು ಮನುಷ್ಯ ಪ್ರಯತ್ನದಿಂದಾಗಿ ಎತ್ತಿನ ಹೊಳೆ ನೀರು ಹರಿದು ಬಂದು ಬೆಳವಾಡಿ ಕೆರೆ, ಮಾಚೇನಹಳ್ಳಿ ಕೆರೆ, ದೇವನೂರು ಕೆರೆ ತುಂಬಿದೆ ಎಂದರು.
ಚಿಕ್ಕಮಗಳೂರು ಕ್ಷೇತ್ರದ ೬೧ ಕೆರೆ ತುಂಬಿಸಲು ಭದ್ರಾ ಉಪ ಕಣಿವೆ ಮತ್ತು ರಣಘಟ್ಟ ಯೋಜನೆಗಳು ಅನುಷ್ಠಾನವಾಗಬೇಕಾಗುತ್ತದೆ. ಈ ಕಾಮಗಾರಿಗಳು ಮುಗಿದ ನಂತರ ಎಲ್ಲಾ ಊರಿನ ಕೆರೆಗಳು ತುಂಬುತ್ತವೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಶಾಶ್ವತವಾಗಿ ಕೆರೆಗಳನ್ನು ತುಂಬಿಸುವ ಸಲುವಾಗಿ ೧೨೮೧ ಕೋಟಿ ರೂ.ನ ಭದ್ರಾ ಉಪ ಕಣಿವೆ ಯೋಜನೆ ಮತ್ತೊಂದು ರಣಘಟ್ಟ ಯೋಜನೆಯಿಂದ ಕೆರೆ ತುಂಬಿಸುವ ಯೋಜನೆಯಡಿ ಟನಲ್ ಕಾಮಗಾರಿ ೩೦೦ ಮೀ. ಮುಗಿದಿದೆಇನ್ನು ೮೦೦ ಮೀ. ಪೂರ್ಣಗೊಂಡರೆ ಆ ಭಾಗದಿಂದಲೂ ನೀರು ಬರುತ್ತದೆ.
ಮೂರನೇ ಹಂತವಾದ ಕರಗಡದಿಂದ ನೀರು ತುಂಬಿಸುವ ಯೋಜನೆಯನ್ನು ಮಾಡಿದ್ದೇವೆ. ಯೋಗಾ, ಯೋಗ ಈ ಬಾರಿ ಎತ್ತಿನ ಹೊಳೆ ಪೈಪ್ಲೈನ್ ಕೆಲಸ ಆಗದ ಕಾರಣ ವೇದಾ ಕಣಿವೆಗೆ ನೀರನ್ನು ಬದಲಿಸಿದ ಪರಿಣಾಮ ಹಳೇಬೀಡು ಕೆರೆ, ಬೆಳವಾಡಿ ಕೆರೆಗೆ ತಾತ್ಕಾಲಿಕವಾಗಿ ನೀರು ಬಂದಿದೆ. ಅದನ್ನು ಶಾಶ್ವತವಾಗಿಸಿಕೊಳ್ಳಲು ಪ್ರಯತ್ನ ನಡೆಯುತ್ತಿದೆ ಎಂದರು.
ಆನರ ಮುಖದಲ್ಲಿ ಕೆರೆ ತುಂಬಿದಾಗ ಕಾಣುವ ಹರ್ಷ, ಆನಂದ ಕೋಟಿ ಕೊಟ್ಟರೂ ಸಿಗುವುದಿಲ್ಲ. ಉಪಕಾರ ಸ್ಮರಣೆ ಮಾಡುವುದು, ಕೃತಜ್ಞತೆ ಸಲ್ಲಿಸುವುದು ಭಾರತೀಯ ಸಂಸ್ಕೃತಿಯ ಒಂದು ಭಾಗ. ಭೂಮಿ ತಾಯಿಯನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಕೆರೆ ತುಂಬಿದಾಗ ಗಂಗೆಗೆ ಕೃತಜ್ಞತೆ ಸಲ್ಲಿಸುತ್ತೇವೆ. ಹಾಗಾಗಿ ಕೆರೆಗೆ ಬಾಗೀನ ಅರ್ಪಿಸಿದ್ದೇವೆ ಎಂದರು.
ಮನೆ ಮನೆಗೆ ಶುದ್ಧ ಕುಡಿಯುವ ನೀರು ಕೊಡುವ ಜಲ್ಜೀವನ್ ಮಿಷನ್ ಯೋಜನೆಗೆ ೧೫೧೪ ಕೋಟಿ ರೂ. ಮಂಜೂರು ಮಾಡಿಸಿ ಕಾಮಗಾರಿ ನಡೆಯುತ್ತಿದೆ. ೨೦೧೮ ರಿಂದ ೨೦೨೩ ವರೆಗೆ ದೇವನೂರು ಪಂಚಾಯ್ತಿಗೆ ೩೭.೮೬ ಕೋಟಿ ಮಂಜೂರು ಮಾಡಿಸಿ ವಿವಿಧ ಅಭಿವೃದ್ಧಿ ಕಾಮಗಾಗಿ ಮಾಡಿಸಿದ್ದೇವೆ ಎಂದರು.
ದೇವನೂರು ಗ್ರಾಮ ಒಂದಕ್ಕೆ ಜಲ್ ಜೀವನ್ ಮಿಷನ್ ಒಂದರಲ್ಲೇ ೫ ಕೋಟಿ ರೂ. ಅನುದಾನ ಬಂದಿದೆ. ಅಭಿವೃದ್ಧಿ ಕೆಲಸ ನಿಲ್ಲಬಾರದು, ಅದನ್ನು ಮುಂದುವರಿಸಲು ಎಲ್ಲಾ ಸಹಕಾರ ನೀಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಉಪಾಧ್ಯಕ್ಷ ಗುಣಸಾಗರ ವಿಜಯಕುಮಾರ್, ಸದಸ್ಯೆ ಹೇಮಾವತಿ, ನಟರಾಜ್, ಅಶೋಕ, ಗ್ರಾಪಂ ಅಧ್ಯಕ್ಷೆ ದೀಪಾ ದಕ್ಷಿಣ್ ಮೂರ್ತಿ, ಉಪಾಧ್ಯಕ್ಷ ರವಿ, ಷಣ್ಮುಖಪ್ಪ, ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರುಗಳು, ಗ್ರಾ.ಪಂ.ಸದಸ್ಯರು ಇತರರು ಇದ್ದರು.
Garden offering to Devanur lake