ಚಿಕ್ಕಮಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಸಮಯಕ್ಕೆ ತೆರಳಲು ಕೆ.ಎಸ್.ಆರ್.ಟಿ.ಸಿ. ಇಲಾಖೆ ಬಸ್ಸೌಲಭ್ಯ ಪೂರೈಸದಿರುವುದನ್ನು ಖಂಡಿಸಿ ನಗರದ ಎಐಟಿ ವೃತ್ತದಲ್ಲಿ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ರಸ್ತೆತಡೆಹಿಡಿದು ಪ್ರತಿಭಟನೆ ನಡೆಸಿದರು.
ಎಬಿವಿಪಿ ಕಾರ್ಯಕರ್ತ ರಾಕೇಶ್ ಮಾತನಾಡಿ ಜಿಲ್ಲೆಯಲ್ಲೇ ಅತಿಹೆಚ್ಚು ಸಂಖ್ಯೆ ಹೊಂದಿರುವ ಐಡಿಎಸ್ಜಿ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ಸೌಕರ್ಯ ಕಲ್ಪಿಸುವುದು ಸರ್ಕಾರಿ ಹಾಗೂ ಕೆ.ಎಸ್.ಆರ್.ಟಿ.ಸಿ ಕರ್ತವ್ಯವಾಗಿದೆ. ಆದರೆ ಸಮಯಕ್ಕೆ ಬಸ್ಗಳು ಬಾರದೇ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.
ಜನಸಾಮಾನ್ಯರ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕೆ ಎಷ್ಟು ಬಸ್ಗಳು ಯಾವ ಭಾಗದಲ್ಲಿ ನಿಯೋ ಜಿಸಬೇಕು ಎಂಬುದು ವಿಭಾಗೀಯ ನಿಯಂತ್ರಾಣಾಧಿಕಾರಿಗೆ ಅರಿವಿಲ್ಲದಂತಿದೆ. ಸಾವಿರಾರು ಸಂಖ್ಯೆಯಲ್ಲಿ ಐಡಿಎಸ್ಜಿ ಕಾಲೇಜು ಸೇರ್ಪಡೆಗೊಳ್ಳುವ ಯುವಕ-ಯುವತಿಯರಿಗೆ ಕಾಡುವೊಂದೇ ಬಸ್ಸಿನ ಸಮಸ್ಯೆ ಎಂದರು.
ಅನೇಕ ವಿದ್ಯಾರ್ಥಿಗಳ ಕುಟುಂಬವು ಬಡವರ್ಗದ ಕಾರಣ ಹಣಕಾಸು ಸರಿದೂಗಿಸುವ ನಿಟ್ಟಿನಲ್ಲಿ ಬಸ್ ಪಾಸ್ ಮಾಡಿಕೊಂಡಿರುತ್ತಾರೆ. ಕೆಲವೊಮ್ಮೆ ಬಸ್ಸಿಲ್ಲದ ಕಾರಣ ಆಟೋಗಳಲ್ಲಿ ಹೆಚ್ಚಿನ ದರದಲ್ಲಿ ತೆರಳ ಬೇಕಾ ಗುವ ಸ್ಥಿತಿ ತಂದೊಡ್ಡಿದೆ. ಹೀಗಾಗಿ ಎಬಿವಿಪಿ ಕಾರ್ಯಕರ್ತರು ರಸ್ತೆತಡೆಹಿಡಿದು ಬೃಹತ್ ಪ್ರತಿಭಟನೆ ನಡೆ ಸಿದೆ ಎಂದರು.
ವಿದ್ಯಾರ್ಥಿಗಳಿಗೆ ಬಸ್ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಾನೂನುಬದ್ಧವಾಗಿ ಹೋರಾಟವನ್ನು ಎಬಿವಿಸಿ ರೂಪಿಸುತ್ತಿದೆ. ಈ ನಡುವೆ ಬಸ್ಚಾಲಕರು ವಿದ್ಯಾರ್ಥಿಗಳಿಗೆ ಲೆಕ್ಕಿಸದೇ ದೌರ್ಜನ್ಯವೆಸಗುವುದು ಸರಿಯಲ್ಲ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಬಸ್ ಸಮಸ್ಯೆ ಬಗೆಹರಿಸದಿದ್ದಲ್ಲಿ ಎಐಟಿ ವೃತ್ತ ಹಾಗೂ ಐಡಿ ಎಸ್ಜಿ ಬಂದ್ಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆ.ಎಸ್.ಆರ್.ಟಿ.ಸಿ. ಇಲಾಖೆ ಪ್ರತಿದಿನ ಬೆಳಿಗ್ಗೆ ೮.೩೦ ರಿಂದ ಸಂಜೆ ೬ ರವರೆಗೆ ಒಂದೊಂದು ಬಸ್ಗಳನ್ನು ಬಿಡಬೇಕು. ನಗರ ಸಾರಿಗೆ ಬಸ್ಗಳ ಸಂಖ್ಯೆ ಹೆಚ್ಚಿಸಬೇಕು. ಚಿಕ್ಕಮಗ ಳೂರು ವಿಭಾಗದ ಎಲ್ಲಾ ಬಸ್ಗಳನ್ನು ಬಿಜಿಎಸ್ ವೃತ್ತದಲ್ಲಿ ನಿಲ್ಲಿಸುವಂತೆ ಆದೇಶಿಸಬೇಕು ಎಂದು ಆಗ್ರಹಿ ಸಿದರು.
ಬೆಳಿಗ್ಗೆ ಹಾಗೂ ಮಧ್ಯಾಹ್ನದ ವೇಳೆ ಸಮರ್ಪಕ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿ ಯಲ್ಲಿ ನಗರ ಬಸ್ ನಿಲ್ದಾಣದಿಂದ ದಂಟರಮಕ್ಕಿ, ಬಿಜಿಎಸ್ವೃತ್ತಿ ಬಸ್ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಜರಿದ್ದರು.
ABVP protested by blocking the national highway road demanding bus facility