ಚಿಕ್ಕಮಗಳೂರು: ಸಂತೆ ಮೈದಾನದಲ್ಲಿ ಮೀನು ವ್ಯಾಪಾರ ನಡೆಸುತ್ತಿರುವ ಮೀನು ಗಾರರಿಗೆ ಮಳಿಗೆ ಸೇರಿದಂತೆ ಶುಚಿತ್ವಕ್ಕೆ ಆದ್ಯತೆ ಕೊಡಲು ಹೆಚ್ಚಿನ ಸವಲತ್ತು ಒದಗಿಸಬೇಕು ಎಂದು ಆಗ್ರಹಿಸಿ ಮೀನು ಮಾರಾಟಗಾರರು ನಗರ ವ್ಯಾಪ್ತಿಯಲ್ಲಿನ ಮಳಿಗೆಗಳನ್ನು ಬುಧವಾರ ಬಂದ್ಗೊಳಿಸಿ ಸೌಲಭ್ಯಕ್ಕೆ ಒತ್ತಾಯಿಸಿದರು.
ಅಂಬೇಡ್ಕರ್ ರಸ್ತೆ ಸಮೀಪವಿರುವ ಮಟನ್ ಹಾಗೂ ಚಿಕನ್ ಮಳಿಗೆಗಳ ಮಾದರಿಯಂತೆ ಮೀನುಗಾ ರರಿಗೆ ನಗರಸಭಾ ಆಡಳಿತ ಮಂಡಳಿ ಪ್ರತ್ಯೇಕವಾಗಿ ಮಳಿಗೆ ನಿರ್ಮಿಸಿಕೊಟ್ಟು ಸುಗಮ ವ್ಯಾಪಾರ ಹಾಗೂ ಶುಚಿತ್ವದಿಂದ ಕೂಡಿರಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮೀನು ವ್ಯಾಪಾರಿ ಗೋಪಿ ಮಾತನಾಡಿ ಸಂತೆದಿನವಾದ ಬುಧವಾರ ಬಹುತೇಕ ಮೀನುಗಾ ರರು ಸಂತೆ ಮೈದಾನದಲ್ಲಿ ವ್ಯಾಪಾರ ನಡೆಸುತ್ತಾರೆ. ಆದರೆ ಮೀನಿನ ಶುಚಿತ್ವದ ನೀರು ಹರಿಯಲು ಯುಜಿಡಿ ವ್ಯವಸ್ಥೆಯಿಲ್ಲದ ಕಾರಣ ನೇರವಾಗಿ ಚರಂಡಿ ಮೂಲಕ ಹರಿದು ಸ್ಥಳೀಯ ನಿವಾಸಿಗಳ ಮನೆ ಮುಂಭಾಗದ ಚರಂಡಿಯಿಂದ ಕಾಲುವೆಗೆ ಸೇರುತ್ತಿದೆ ಎಂದರು.
ಮೀನಿನ ಶುಚಿತ್ವಗೊಳಿಸಿದ ನೀರು ವಿಪರೀತ ವಾಸನೆ ಹಾಗೂ ರೋಗರುಜಿನಿಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆಕ್ಷೇಪಿಸಿದ ಹಿನ್ನೆಲೆ ಸಂತೆ ಮೈದಾನದಲ್ಲಿ ವ್ಯಾಪಾರ ಸ್ಥಗಿತಗೊಳಿಸಲಾಗಿದೆ. ಈ ಸಂಬಂ ಧ ಶಾಸಕರು ಹಾಗೂ ನಗರಸಭಾ ಪೌರಾಯುಕ್ತರಿಗೆ ಗಮನಕ್ಕೆ ತಂದಿದ್ದು ಮೀನು ವ್ಯಾಪಾರಕ್ಕೆ ಅನುಕೂಲವಾ ಗಲು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಬಹುತೇಕ ಬಡವರ್ಗದ ಜನತೆ ಮೀನು ಮಾರಾಟದ ವೃತ್ತಿಯಲ್ಲಿ ಅನೇಕ ವರ್ಷಗಳಿಂದ ತೊಡಗಿ ದ್ದಾರೆ. ಇದೀಗ ಸಾರ್ವಜನಿಕ ಆಕ್ಷೇಪದ ಕಾರಣ ವ್ಯಾಪಾರ ನಡೆಸುತ್ತಿಲ್ಲ. ಸಂತೆದಿನ ಹೊರತಾಗಿ ಮಾರ್ಕೆಟ್ ಸಮೀಪ ಬಾಡಿಗೆ ಮಳಿಗೆಗಳಲ್ಲಿ ವ್ಯಾಪಾರ ನಡೆಸಲಾಗುತ್ತಿದೆ. ಈ ಹಿಂದೆ ಮಟನ್ ಹಾಗೂ ಚಿಕನ್ ಮಳಿಗೆಗ ಳಲ್ಲಿ ಮೀನು ವ್ಯಾಪಾರಕ್ಕೆ ಅವಕಾಶ ಕಲ್ಪಿಸುವುದಾಗಿ ಹೇಳಿ ಹಿಂಜರಿಯಲಾಗಿದೆ ಎಂದು ಹೇಳಿದರು.
ಸಾರ್ವಜನಿಕರು ಹಾಗೂ ಮೀನುಗಾರರ ನಡುವಿನ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು ಹಾಗೂ ನಗರ ಸಭಾವು ಮುತುವರ್ಜಿವಹಿಸಿ ಒಳಚರಂಡಿ ಹಾಗೂ ಮೂಲಸವಲತ್ತು ಒದಗಿಸುವ ಬಗ್ಗೆ ಭರವಸೆ ನೀಡಿದ ಮೇರೆಗೆ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಇಂದು ಮೀನು ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದ್ದು ಶೀಘ್ರ ವೇ ಮೀನುಗಾರರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದರು.
ಈ ಸಂದರ್ಭದಲ್ಲಿ ಮೀನುಗಾರರಾದ ಇಬ್ರಾಹಿಂ, ರವಿ, ರಮೇಶ್, ದೀಪು, ಕೃಷ್ಣ, ಜಯರಾಮ್, ಉದ ಯ್, ಗಣೇಶ್, ಮಂಜುನಾಥ್, ಪ್ರಕಾಶ್, ಹರ್ಷದ್, ಉಬೇದುಲ್ಲಾ, ಕುಮಾರ್, ಮಂಜುನಾಥ್, ಪ್ರಕಾಶ್, ವೆಂಕಟೇಶ್, ಸತೀಶ್ ಮತ್ತಿತರರು ಹಾಜರಿದ್ದರು.
Businessmen demand to respond to fishermen’s problems