ಚಿಕ್ಕಮಗಳೂರು: ಪರಿಸರ ಮತ್ತು ಅರಣ್ಯ, ವನ್ಯಜೀವಿಗಳನ್ನು ರಕ್ಷಿಸಲು ಕರ್ನಾಟಕ ಸಂಭ್ರಮ-೫೦ ಈ ವಸ್ತು ಪ್ರದರ್ಶನ ಸಹಕಾರಿಯಾಗಿದೆ ಎಂದು ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಅಭಿಪ್ರಾಯಿಸಿದರು.
ಅವರು ನಗರದ ಬೈಪಾಸ್ ರಸ್ತೆಂiiಲ್ಲಿ ಸೈಮನ್ ಎಕ್ಸಿಬಿಟರ್ಸ್ ಸಂಸ್ಥೆ ಪ್ರಾರಂಭಿಸಿರುವ ಕರ್ನಾಟಕ ಸಂಭ್ರಮ-೫೦ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಕೃತಕ ಕಾಡುಪ್ರಾಣಿಗಳ ಲೋಕ ವಿಸ್ಮಯ ತರಿಸುತ್ತದೆ. ಈ ಮೂಲಕ ಪ್ರಕೃತಿ, ಅರಣ್ಯ ಪರಿಸರ ಉಳಿಸಲು ಪೂರಕ ವಾತಾವರಣವನ್ನು ವಸ್ತುಪ್ರದರ್ಶನ ನಿರ್ಮಾಣ ಮಾಡಿದೆ ಎಂದು ಶ್ಲಾಘಿಸಿದರು.
ನಶಿಸುತ್ತಿರುವ ವನ್ಯ ಪ್ರಾಣಿ-ಪಕ್ಷಿಗಳ ಲೋಕ ವಿಶೇಷ ಆಕರ್ಷಣೆಯಾಗಿದ್ದು, ಆಹಾರ ಮಳಿಗೆ, ವಿವಿಧ ಕರಕುಶಲ ವಸ್ತುಗಳ ಮಾರಾಟ ಮಳಿಗೆ ಇನ್ನೂ ಮುಂತಾದ ಬಹುಪಯೋಗಿ ವಸ್ತು ಪ್ರದರ್ಶನದಲ್ಲಿ ಇಡಲಾಗಿದ್ದು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ವೀಕ್ಷಿಸಿದರೆ ತುಂಬಾ ಅನುಭವ ಸಿಗುತ್ತದೆ ಎಂದು ಹೇಳಿದರು.
ವಸ್ತುಪ್ರದರ್ಶನವನ್ನು ವೀಕ್ಷಿಸಿದ ತಮಗೆ ಇಂಗ್ಲಿಷ್ ಸಿನಿಮಾದ ಸಾಹಸಮಯ ಚಿತ್ರಗಳನ್ನು ನೋಡಲು ಹಾಗೂ ಅಭೂತಪೂರ್ವ ಕಲಾಕೃತಿಗಳು ಜನರ ಮನಸ್ಸಿನಲ್ಲಿ ಒಂದು ಮನರಂಜನೆಯನ್ನು ತಂದುಕೊಡುತ್ತದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಅನು ಮಧುಕರ್ ಮಾತನಾಡಿ, ಬೆಂಗಳೂರು ಮತ್ತು ಮೈಸೂರಿಗೆ ಸೀಮಿತವಾಗಿದ್ದ ಬೃಹತ್ ಎಕ್ಸಿಬಿಷನ್ ಇಂದು ಚಿಕ್ಕಮಗಳೂರಿನಲ್ಲಿ ಆರಂಭವಾಗಿರುವುದು ತುಂಬಾ ಸಂತಸ ತಂದಿದೆ ಎಂದು ಹೇಳಿದರು.
ವಸ್ತುಪ್ರದರ್ಶನದ ಒಳಗೆ ಪ್ರವೇಶಿಸಿದರೆ ದಸರಾ ಮಹೋತ್ಸವವನ್ನು ನೋಡುತ್ತಿದ್ದೇವೆ ಎಂಬ ಅಭಿಪ್ರಾಯ ಮೂಡುತ್ತದೆ. ಆರ್ಆರ್ ಮೂವಿ ಮಾದರಿಯ ಜೊತೆಗೆ ಪ್ರಾಣಿ-ಪಕ್ಷಿಗಳ ವೀಕ್ಷಿಸಲು ಈ ವಸ್ತುಪ್ರದರ್ಶನ ಆಯೋಜಕರು ಒಳ್ಳೆಯ ಸದಾವಕಾಶವನ್ನು ಒದಗಿಸಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿನೀಡಿ ಸಹಕರಿಸಬೇಕೆಂದು ಮನವಿ ಮಾಡಿದರು.
ಸೈಮನ್ ಎಕ್ಸಿಬಿಟರ್ಸ್ ನಿರ್ದೇಶಕ ಎಂ.ಎಸ್. ನಾಗಚಂದ್ರ ಮಾತನಾಡಿ, ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ ಸುವರ್ಣ ಮಹೋತ್ಸವದ ಅಂಗವಾಗಿ ಕರ್ನಾಟಕ ಸಂಭ್ರಮ-೫೦ ಮೇಳವನ್ನು ಆಯೋಜಿಸಲಾಗಿದ್ದು, ಇಂದಿನಿಂದ ನ.೨೪ ರವರೆಗೆ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ ೫ ರಿಂದ ರಾತ್ರಿ ೯ ಗಂಟೆಯವರೆಗೆ ಎಕ್ಸ್ಪೋ ತೆರೆದಿರುತ್ತದೆ ಎಂದರು.
ಈ ವಸ್ತುಪ್ರದರ್ಶನದಲ್ಲಿ ಡ್ರೆಸ್ ಮೆಟೀರಿಯಲ್ಸ್, ರೆಡಿಮೇಡ್ ಉಡುಪು, ಸೀರೆ, ಕುರ್ತಾ, ಪೈಜಾಮ, ಶರ್ಟಿಂಗ್, ಶೂಟಿಂಗ್ ಸೇರಿದಂತೆ ವ್ಯಾಪಕ ಶ್ರೇಣಿಯ ಮಸಾಲ ಪುಡಿಗಳು, ಜೇನುತುಪ್ಪ, ಚಾಕಲೇಟ್ಗಳು, ಚಟ್ನಿಪುಡಿ, ಉಪ್ಪಿನಕಾಯಿ, ಒಣ ಹಣ್ಣುಗಳು ಮಾರಾಟಕ್ಕೆ ಲಭ್ಯವಿರುತ್ತವೆ ಎಂದು ಹೇಳಿದರು.
ಸಣ್ಣ ಕಂಪನಿಗಳಿಂದ ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ. ವಿದ್ಯಾರ್ಥಿಗಳು ಹಿರಿಯರಿಗೆ ಮನರಂಜನಾ ಉದ್ಯಾನವನವನ್ನು ಏರ್ಪಡಿಸಲಾಗಿದ್ದು, ಆಹಾರ ಪ್ರೇಮಿಗಳಿಗಾಗಿ ಫುಡ್ಕೋರ್ಟ್ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದಲ್ಲದೆ ೧೯೫೨ ರಿಂದ ಇಲ್ಲಿಯವರೆಗೆ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಮಾಹಿತಿ, ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರ ಸಂಗ್ರಹಗಳು, ವಿವಿಧ ಕ್ರೀಡಾಪಟುಗಳು, ಚಲನಚಿತ್ರ ನಟರಾದ ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಶ್ರೇಷ್ಟ ನಟರ ಮಾಹಿತಿ ಪ್ರದರ್ಶನದಲ್ಲಿ ವಿಶೇಷ ಆಕರ್ಷಣೆಯಾಗಿದೆ ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರ ಬಗ್ಗೆ ಉಪಯುಕ್ತ ಮಾಹಿತಿ ಒದಗಿಸಲಿದ್ದು, ಈ ಮೇಳ ಕೇವಲ ವ್ಯಾಪಾರಕಷ್ಟೇ ಸೀಮಿತವಾಗದೆ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನವನ್ನು ಒದಗಿಸಲಿದೆ. ರಾಜ್ಯದ ಕಲ್ಯಾಣಕ್ಕಾಗಿ ವಿವಿಧ ಕ್ಷೇತ್ರಗಳ ಮೂಲಕ ಕೊಡುಗೆ ನೀಡಿರುವ ಮಹಾ ಪುರುಷರ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತರಾದ ಬಸವರಾಜ್ ಸೈಮನ್ ಎಕ್ಸಿಬಿಟರ್ಸ್ನ ಮುಖ್ಯಸ್ಥರುಗಳಾದ ಎ.ಭದ್ರಪ್ಪ, ವೀರೇಶಾಚಾರ್, ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.
Karnataka Celebration-50 Exhibition