ಚಿಕ್ಕಮಗಳೂರು: ಗ್ರಾಮೀಣ ಮಟ್ಟದಿಂದ ಒಂದು ಸಂಸ್ಥೆಯನ್ನು ಬೆಳೆಸಿ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯುವ ಮಟ್ಟಿಗೆ ಬೆಳೆದಿರುವುದು ನಿಜಕ್ಕೂ ಪ್ರಶಂಸನೀಯ ಎಂದು ಅಂತರಾಷ್ಟ್ರೀಯ ಹೇರ್ಕೇರ್ ಪ್ರಾಡಕ್ಟ್ನ ರೂಟ್ಸ್ ಕಂಪನಿ ಮಾಲಿಕ ಜಬ್ಬರ್ಸಿಂಗ್ ತಿಳಿಸಿದರು.
ಅವರು ದುಬೈನಲ್ಲಿ ನಡೆದ ವರ್ಲ್ಡ್ ಬ್ಯೂಟಿ ಎಕ್ಸ್ಪೋದಲ್ಲಿ ಗ್ಲಾಮರ್ ಕೇರ್ನ ಲೋಗೋವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸ್ಥಳೀಯ ಸಂಸ್ಥೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುವ ನಿಟ್ಟಿನಲ್ಲಿ ಈ ಲೋಗೋವನ್ನು ಬಿಡುಗಡೆಗೊಳಿಸಿ ಪ್ರಶಂಸೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿರುವುದಾಗಿ ತಿಳಿಸಿದರು.
ಗ್ಲಾಮರ್ ಕೇರ್ನ ಮುಖ್ಯಸ್ಥ ರವಿಕುಮಾರ್ ಮಾತನಾಡಿ, ನಿಜಕ್ಕೂ ಇದೊಂದು ಸಂತೋಷದ ಕ್ಷಣ, ಈ ಲೋಗೋ ಬಿಡುಗಡೆಯಿಂದಾಗಿ ನಮಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಬಂದಿದೆ, ಅಂತರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಸಲಕರಣೆಗಳೊಂದಿಗೆ ಗ್ರಾಹಕರಿಗೆ ಇನ್ನೂ ಉನ್ನತ ಮಟ್ಟದ ಸೌಂದರ್ಯ ಸೇವೆಯನ್ನು ನೀಡಲು ಪ್ರಯತ್ನಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕಡೂರು ಸವಿತ ಸಮಾಜದ ಮುಖಂಡ ರವಿ, ಮಕಾಕುಸ ಹಾಗೂ ವರ್ಲ್ಡ್ ಬ್ಯೂಟಿ ಎಕ್ಸ್ಪೋದ ವ್ಯವಸ್ಥಾಪಕ ಮಜೀದ್ ಮತ್ತಿತರರು ಉಪಸ್ಥಿತರಿದ್ದರು.
Logo launch of World Beauty Expo