ಚಿಕ್ಕಮಗಳೂರು: ನಗರದ ಸ್ಪಂದನ ನರ್ಸಿಂಗ್ ಹೋಮ್ ನೆಲಮಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದ್ದು ಆಸ್ಪತ್ರೆ ವೈದ್ಯರು ಸಿಬ್ಬಂದಿಗಳ ಜಾಗೃತಿಯಿಂದ ಯಾವುದೇ ಅನಾಹುತ ನಡೆದಿಲ್ಲ ಆದ್ರೂ ಮುಂಜಾಗ್ರತ ಕ್ರಮವಾಗಿ ನರ್ಸಿಂಗ್ ಹೋಮ್ ರೋಗಿಗಳನ್ನು ಇತರ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದ್ದ ಸ್ಥಳವನ್ನು ಪರಿಶೀಲಿಸಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.
ವಿದ್ಯುತ್ ಕಡಿತಗೊಂಡಿರುವುದರಿಂದ ಆಸ್ಪತ್ರೆ ರೋಗಿಗಳನ್ನು ಸ್ಥಳಾಂತರಿಸುವುದು ಅನಿವಾರ್ಯಾಯಿತೆಂದು ಆಸ್ಪತ್ರೆಯ ವೈದ್ಯರಾದ ಡಾ. ಸಂತೋಷ್ ತಿಳಿಸಿದ್ದಾರೆ
ಅಗ್ನಿಶಾಮಕ ಠಾಣೆ ಅಧಿಕಾರಿ ಪ್ರವೀಣ್ ಮಾತನಾಡುತ್ತಾ. ಮುಂಜಾಗ್ರತಾ ಕ್ರಮವಾಗಿ ಕಟ್ಟಡದಲ್ಲಿ ಯಾವುದೇ ಅಗ್ನಿ ಅನಾಹುತ ನಡೆದರೆ ಕಟ್ಟಡದ ಮಾಲೀಕರು ಹಾಗೂ ಸಿಬ್ಬಂದಿಗಳಿಗೆ ತರಬೇತಿಗಳನ್ನು ನೀಡಲಾಗಿರುತ್ತದೆ ಅದನ್ನು ಸ್ಪಂದನ ಆಸ್ಪತ್ರೆಯವರು ಪಡೆದಿರುವುದರಿಂದ ತಕ್ಷಣ ವಿದ್ಯುತ್ ಕಡೆತಗೊಳಿಸಿದ್ದು ಅನಾಹುತ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನರ್ಸಿಂಗ್ ಹೋಮ್ ನಲ್ಲಿದ್ದ ರೋಗಿಗಳನ್ನು ಚಿಕ್ಕಮಗಳೂರು ನಗರದ ಇತರೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ನಗರದಲ್ಲಿ ಒಳ್ಳೆ ಆಸ್ಪತ್ರೆಯಿಂದ ಹೆಸರು ಪಡೆದಿದ್ದ ಸ್ಪಂದನ ಆಸ್ಪತ್ರೆ ಪ್ರಾರಂಭವಾಗಿ ಕೆಲವು ದಿನಗಳಲ್ಲಿ ಈ ರೀತಿ ಶಾರ್ಟ್ ಸರ್ಕ್ಯೂಟ್ ಆಗಿರೋ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತ ಪಡಿಸಿದರು.
ವಿದ್ಯುತ್ ಇಲಾಖೆಯಿಂದ ಸರಿಪಡಿಸಿದ ಒಂದೆರಡು ದಿವಸ ನಂತರ ನಂತರ ನರ್ಸಿಂಗ್ ಹೋಮ್ ಪುನ ಆರಂಭಗೊಳ್ಳಲಿದೆ. ಕೆಳ ಮಹಡಿಯಲ್ಲಿ ಮಾತ್ರ ಸ್ವಲ್ಪ ಹೊಗೆ ಬಂದಿದ್ದು. ವಿನಹ ನರ್ಸಿಂಗ್ ಹೋಮಗೆ ಯಾವುದೇ ಧಕ್ಕೆ ಆಗಿಲ್ಲ ಎಂದು ತಿಳಿದು ಬಂದಿದೆ ಸ್ಥಳಕ್ಕೆ ಕಡೂರು ಮಾಜಿ ಶಾಸಕರು ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್. ಡಿಸಿಸಿ ಬ್ಯಾಂಕ್ ಸದಸ್ಯ ನಿರಂಜನ್ ಮತ್ತಿತರು ಉಪಸ್ಥಿತರಿದ್ದರು.
Spandana Nursing Home accidental electrocution