ಚಿಕ್ಕಮಗಳೂರು: ‘ಆಕಾಶಕ್ಕೆ ಉಗಿದರೆ ಅದು ಆಕಾಶಕ್ಕೆ ಮುಟ್ಟಲ್ಲ, ಸೂರ್ಯನಿಗೆ ತಟ್ಟಲ್ಲ, ಉಗಿದವರ ಮುಖಕ್ಕೆ ವಾಪಸ್ ಬೀಳುತ್ತದೆ.ನೀವು ಮೋದಿಯನ್ನ ಟೀಕೆ ಮಾಡೋದು ಸೂರ್ಯನಿಗೆ ಉಗಿದಂತಾಗುತ್ತದೆ.ಅದು ನಿಮ್ಮ ಮುಖಕ್ಕೆ ಮೆತ್ತಿಕೊಳ್ಳುತ್ತದೆ. ನೀವೇ ಮುಖ ತೊಳೆದುಕೊಳ್ಳಬೇಕು’ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು
ಅವರು ಸುದ್ದಿಗಾರೊಂದಿಗೆ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರಮೋದಿಯವರ ಬಗ್ಗೆ ಟೀಕಿಸಿದ್ದರ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮೋದಿಯನ್ನು ಬೈದು ದೊಡ್ಡವರಾಗಬಹುದು ಎಂದು ಭಾವಿಸಿದ್ದಾರೆ.ಸಿದ್ದರಾಮಯ್ಯ ಮೋದಿಗೆ ಚಾಲೆಂಜ್ ಕೂಡ ಮಾಡಲಾಗಿತ್ತು. ೨೦೧೪, ೨೦೧೯, ೨೦೨೪ ರಲ್ಲಿ ಚಾಲೆಂಜ್ ಮಾಡಿದ್ದರು. ನಿಮ್ಮ ನಾಯಕತ್ವಕ್ಕೆ ಜನ ಮತ ನೀಡಲಿಲ್ಲ, ಪ್ರಧಾನಿಯವರನ್ನು ನಿಂದಿಸಿ ದೊಡ್ಡವರಾಗಬಹುದು ಎಂದು ಭಾವಿಸಿದಂತೆ ಕಾಣುತ್ತಿದೆ ಎಂದರು.
ವಕ್ಫ್ ಸಚಿವ ಜಮೀರ್ಅಹಮದ್ ಅವರ ವೀಡಿಯೋ ತೋರಿಸಿ ಕಿಡಿಯಾದ ಸಿ.ಟಿ.ರವಿ ಹಳ್ಳಿಹಳ್ಳಿ, ತೆರಳಿ ವಕ್ಫ್ ಅದಾಲತ್ ನಡೆಸಿದ್ದು ಬಿಜೆಪಿಯವರೋ, ಸಚಿವ ಜಮೀರ್ ಅವರೋ ಎಂದು ಪ್ರಶ್ನಿಸಿ, ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಳ್ಳು ರಾಮಯ್ಯ ಆಗಿದ್ದಾರೆಂದು ಟೀಕಿಸಿದರು.
ಮುಖ್ಯಮಂತ್ರಿ ಸೂಚನೆ ಮೇರೆಗೆ ನಾನು ವಕ್ಫ್ ಅದಾಲತ್ ನಡೆಸುತ್ತಿದ್ದೇನೆಂದು ಹೇಳಿಕೆ ನೀಡಿದ್ದವರು ಸಚಿವ ಜಮೀರ್ ಅಹ್ಮದ್, ಬರುತ್ತಾರೆ ಹೋಗುತ್ತಾರೆ ಎಂದರು.
ನಾವಕಾವಸ್ತೆಗೆ ಅದಾಲತ್ ನಡೆಸಿದ್ದಾರೆಂದು ಭಾವಿಸಬೇಡಿ, ವಕ್ಫ್ ನೋಟಿಫಿಕೇಶನ್ನೇ ಕಾನೂನು ಬಾಹಿರ. ಬೇರೆಲ್ಲೂ ಬೇಡ ಚಿಕ್ಕಮಗಳೂರು ನಗರದ ಡಿ.ಆರ್.ಪೊಲೀಸ್ ಮೈದಾನ, ರತ್ನಗಿರಿ ಬೋರೆಯನ್ನು ವಕ್ಫ್ ಆಸ್ತಿ ಎಂದು ನೊಟೀಫಿಕೇಶನ್ ಹೊರಡಿಸಿ ದ್ದಾರೆಂದು ಆರೋಪಿಸಿದ ಅವರು, ಖಾತೆ ಇಡಿ ಅಂದರೆ ಕಣ್ಮುಚ್ಚಿ ಖಾತೆ ಇಟ್ಟರೆ ಅನ್ಯಾಯವಾಗುತ್ತದೆ ಎಂದು ಹೇಳಿದರು.
ಮುಜರಾಯಿ ದೇವಾಲಯದ ಹಣ ಬಳಸಿಕೊಂಡು ರಾಜ್ಯ ನಡೆಸಲಾಗುತ್ತಿದೆ.ಮಸೀದಿ-ಚರ್ಚ್ ಹಣವನ್ನು ಅವರಿಗೆ ಬಿಟ್ಟು, ಅವರು ಬಲವಾಗಿ ಬೇರೂರುವಂತೆ ಮಾಡಲಾಗುತ್ತಿದೆ.ಎಲ್ಲಿದೆ ನ್ಯಾಯ,ನೀತಿ, ಧರ್ಮ ಎಂದು ಪ್ರಶ್ನಿಸಿದ ಅವರು ನಿಮಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ಸವಾಲುಹಾಕಿದರು.
ವಕ್ಫ್ ಬೋರ್ಡ್ ವಿಷಯದಲ್ಲಿ ಈಗಾಗಲೇ ಕೊಟ್ಟಿರುವ ನೋಟೀಸ್ ವಾಪಸ್ ನಿರ್ಣಯವನ್ನು ಸ್ವಾಗತಿಸಿದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ,ಇದು ಸಿದ್ದರಾಮಯ್ಯ ಕೊಟ್ಟಿರುವ ಅರ್ಧ ನ್ಯಾಯ ಮಾತ್ರ. ಅಸಂವಿಧಾನಿಕ ವಕ್ಫ್ ಕಾಯ್ದೆ ರದ್ದಾಗಬೇಕು, ಆಗ ಪೂರ್ತಿ ನ್ಯಾಯ ಸಿಕ್ಕಿದಂತಾಗುತ್ತದೆ ಎಂದು ಹೇಳಿದರು.
ಸಮಾನ ನ್ಯಾಯದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ಅಪರಿಮಿತ ಅಧಿಕಾರವನ್ನ ಕಾಯ್ದೆ ಮೂಲಕ ವಕ್ಫ್ ಬೋರ್ಡ್ಗೆ ಕೊಟ್ಟಿರುವುದೇ ಪರಮಾಘಾತ.ಆ ಕಾಯ್ದೆ ರದ್ದಾಗಲು ಧ್ವನಿ ಎತ್ತಿದರೆ ಮಾತ್ರ ಪೂರ್ಣ ನ್ಯಾಯ ಸಿಕ್ಕಂತಾಗುತ್ತದೆ. ಜನಾಭಿಪ್ರಾಯಕ್ಕೆ ಹೆದರಿ ನೀವು ಒಂದು ಹೆಜ್ಜೆ ಮುಂದಿಟ್ಟಿದ್ದೀರಾ,ಆ ಕಾಯ್ದೆ ಬಲದಿಂದ ಅವರು ಈ ಕೆಲಸ ಮಾಡಿದ್ದಾರೆ.ಕಾಯ್ದೆ ರದ್ದಾಗದಿದ್ದರೆ ತೂಗುಗತ್ತಿ ರೀತಿಯಲ್ಲಿ ರೈತರು, ದಲಿತರ ನೆತ್ತಿ ಮೇಲೆ ತೂಗುತ್ತಲೇ ಇರುತ್ತದೆ. ಮೊದಲು ಆ ಕತ್ತಿ ಕೆಳಗಿಳಿಯಬೇಕೆಂದರು.
ಉಪ ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು ಎಂದು ತಿಳಿದು ವಾಪಸ್ ಪಡೆದಿದ್ದಾರೆ ಎಂದೆನಿಸುತ್ತದೆ.ಕಾಯ್ದೆ ರದ್ದಾಗುವ ಬಗ್ಗೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಅದರ ಬಗ್ಗೆ ಧ್ವನಿ ಎತ್ತಬೇಕೆಂದು ಒತ್ತಾಯಿಸಿದ ಅವರು, ಮೋದಿ ತಿದ್ದುಪಡಿಗೆ ಮುಂದಾಗಿದ್ದಾರೆ, ಅದರ ಪರ ಧ್ವನಿಎತ್ತರಬೇಕು. ನಿಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.
ಜನಾಕ್ರೋಶಕ್ಕೆ ತಾತ್ಕಾಲಿಕ ಉಪಶಮನ ಎಂಬಂತಹ ಪ್ರವೃತ್ತಿ ಬೇಡ. ನ್ಯಾಯಾಂಗ ವ್ಯವಸ್ಥೆ ಮೀರಿದ ವ್ಯವಸ್ಥೆ ಕೊಟ್ಟಿರುವುದು ಅದರ ಬಗ್ಗೆ ನಿಮ್ಮ ನಿಲುವು ಸ್ಪಷ್ಟಪಡಿಸಬೇಕು.ಜನಾಭಿಪ್ರಾಯಕ್ಕೆ ಬೆದರಿರುವುದು ಒಳ್ಳೆಯದು ಎಂದು ಹೇಳಿದ ಸಿ.ಟಿ.ರವಿ, ರಾಜ್ಯದ ಆರ್ಥಿಕತೆ ದೇಶಕ್ಕಿಂತ ಚೆನ್ನಾಗಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟುನೀಡಿದರು. ಉಪಮುಖ್ಯಮಂತ್ರಿಗಳೇ ನೀರಾವರಿ ಇಲಾಖೆಯಲ್ಲಿ ಸುಮಾರು ೨೦ ಸಾವಿರ ಕೋಟಿ ಬಿಲ್ ಪೆಂಡಿಂಗ್ ಇದೆ
ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಗುತ್ತಿಗೆದಾರರನ್ನು ಏಕೆ ಬೀದಿ ಪಾಲು ಮಾಡುತ್ತಿದ್ದೀರಿ,ಲೋಕೋಪಯೋಗಿಯಲ್ಲಿ ೫ಸಾವಿರ ಕೋಟಿ ಬೇರೆ-ಬೇರೆ ಇಲಾಖೆ ೩೦-೩೫ ಸಾವಿರ ಕೋಟಿ ಬಿಲ್ ಪೆಂಡಿಂಗ್ ಇದೆ.ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ, ಖಜಾನೆ ತುಂಬಿ ತುಳುಕುತ್ತಿದ್ದರೆ ಅವರಿಗೆ ಏಕೆ ಅನ್ಯಾಯ ಮಾಡುತ್ತೀರಿ ಎಂದು ಕೇಳಿದರು.
The steamed spit did not touch the sky nor did it touch the sun