ಚಿಕ್ಕಮಗಳೂರು: ತೇರಾಪಂಥ್ ಧರ್ಮ ಸಂಘದ ೯ ನೇ ಆಚಾರ್ಯರಾದ ಶ್ರೀ ತುಳಸಿ ಜೀ ಅವರ ೧೧೧ ನೇ ಜನ್ಮ ದಿನಾಚರಣೆ ಆಂಗವಾಗಿ ಅಣುವೃತ ಸಮಿತಿ ವತಿಯಿಂದ ಭಾನುವಾರ ನಗರದ ತೇರಾಪಂಥ್ ಭವನದಲ್ಲಿ ರಾಜ್ಯಮಟ್ಟದ ಅಣುವೃತ್ ಕ್ರಿಯೇಟಿವಿಟಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಶಾಲಾ ಕಾಲೇಜುಗಳಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳು, ಸಂಗೀತ, ಚಿತ್ರಕಲೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದವರು ಸೂರತ್ನಲ್ಲಿ ನಡೆಯುವ ಆಚಾರ್ಯ ಶ್ರೀ ಮಹಾಶ್ರಮಣ್ ಜೀ ಅವರ ಚಾತುರ್ಮಾಸ ಕಾರ್ಯಕ್ರಮದ ಅಂಗವಾಗಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತೇರಾಪಂತ್ ಮಹಾ ಸಭಾದ ಅಧ್ಯಕ್ಷ ಮಹೇಂದ್ರ ಡೋಸಿ ತಿಳಿಸಿದರು.
ಅಣುವೃತ್ ಸಮಿತಿ ಅಧ್ಯಕ್ಷರಾದ ಮಂಜುಳಾ ಬನ್ಸಾಲಿ ಮಾತನಾಡಿ, ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ೨೦ ಮಕ್ಕಳ ಪೈಕಿ ಚಿಕ್ಕಮಗಳೂರು ಜಿಲ್ಲೆಯ ೧೪ ಮಂದಿ ಇದ್ದಾರೆ ಅವರಿಗೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಚಿಕ್ಕಮಗಳೂರಿನಲ್ಲಿ ಎರಡು ವರ್ಷಗಳಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಸಂತಸದಿಂದ ಭಾಗವಹಿಸುತ್ತಿದ್ದಾರೆ. ಜಿಲ್ಲೆಯ ಮಕ್ಕಳಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಲಿ ಎಂದು ಹಾರೈಸುತೇವೆ ಎಂದರು.
ನಗರದ ಸೈಂಟ್ ಮೇರೀಸ್ ಶಾಲೆಯ ಗ್ರಂಥಪಾಲಕಿ ಭಾರತಿ ಮಾತನಾಡಿ, ಎಲ್ಲಾ ಮಕ್ಕಳು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ. ಅಣುವೃತ ಸಮಿತಿಯ ಉದ್ದೇಶವನ್ನು ಮಕ್ಕಳು ಅರ್ಥಮಾಡಿಕೊಂಡಿದ್ದಾರೆ. ಹಾಗೂ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತರಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರ್ಶ ಸಮಾಜವನ್ನು ನಿರ್ಮಾಣ ಮಾಡುವ ಸಮಿತಿ ಉದ್ದೇಶಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.
ಈ ಸಂದರ್ಭದಲ್ಲಿ ಗೌತಮ್ ಆಚಾ, ನಗರಸಭೆ ಸದಸ್ಯ ವಿಫುಲ್ ಕುಮಾರ್ ಜೈನ್ ಮಾತನಾಡಿದರು. ಆಚಾರ್ಯ ಶ್ರೀ ಮಹಾಶ್ರಮಣ್ ರವರ ಶಿಷ್ಯರಾದ ಮುನಿಶ್ರೀಗಳಾದ ಮೋಹಜಿತ್ ಕುಮಾರ್ಜಿ, ಭವ್ಯಕುಮಾರ್ಜಿ, ಜಹೇಶ್ಕುಮಾರ್ಜಿ ಗೌತಮ್ ಆಚಾ, ಲಾಲ್ಚಂದ್ ಬನ್ಸಾಲಿ, ಕಿಶೋರ್ ಆಚಾ ಸಜ್ಜನ್ರಾಜ್, ಮಹೇಂದ್ರ ಡೋಸಿ, ಪದಮ್ ನಹರ್, ಮನ್ಚಂದ್ ಗಾದಿಯಾ, ಸರೋಜಾಬಾಯಿ ಸಿಯಾಲ್, ಚಂದ್ರ ಗಾದಿಯಾ, ಗುಣವತಿ ನಹಾರ್, ಸುರೇಶ್ ಆಚಾ, ಶಾಂತಿಲಾಲ್ ಗಾದಿಯಾ, ಗೌತಮ್ ನಹರ್, ಅಶೋಕ್ ಡೋಸಿ, ಸುರೇಂದ್ರ, ಲಾಲ್ಚಂದ್ ಬರ್ಲೋಟ, ಭರತ್ ಬರ್ಲೋಟ, ಮದಮ್ ಚಡ್ ಗಾದಿಯಾ, ಫ್ಯಾನ್ಸಿ ಗಾದಿಂ ಉಪಸ್ಥಿತರಿದ್ದರು.
State level Aukumvrith creativity competition