ಚಿಕ್ಕಮಗಳೂರು: ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಕೀಯ ಲಾಭಕ್ಕಾಗಿ ದುರುಪಯೋಗ ಮಾಡಿಕೊಂಡಿರುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮುಖಂಡರುಗಳು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಬಳಿಕ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಬಿಳೇಕಲ್ಲು ಬಾಲಕೃಷ್ಣ ಇಡಿ, ಐಟಿ, ಸಿಬಿಐ ಹಾಗೂ ರಾಜಭವನ, ಚುನಾವಣಾ ಆಯೋಗ, ರಾಜ್ಯಪಾಲರ ಅಧಿಕಾರವನ್ನು ಕೇಂದ್ರ ಸರ್ಕಾರ ೧೦ ವರ್ಷಗಳಲ್ಲಿ ದೇಶದ ಅಖಂಡತೆಗೆ ಧಕ್ಕೆ ತಂದೊಡ್ಡಲು ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗುತ್ತಿದೆ ಎಂದು ಆರೋಪಿಸಿದರು.
ದೇಶದ ಅನೇಕ ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷದ ಸರ್ಕಾರಗಳು ಜನಾರ್ಶೀವಾದಿಂದ ಆಯ್ಕೆ ಹೊಂದಿ ರಚನೆಗೊಂಡಿದ್ದ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಮಾಡಿ ಬೇರೆ ಪಕ್ಷದಿಂದ ಆಯ್ಕೆ ಗೊಂಡಿರುವ ಶಾಸಕರನ್ನು ಪುಸಲಾಯಿಸಿ, ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದೆ ಎಂದು ಹೇಳಿದರು.
ಸಾಂವಿಧಾನಿಕ ಸಂಸ್ಥೆಗಳನ್ನು ರಾಜಕೀಯ ಲಾಭಕ್ಕಾಗಿ ಕೇಂದ್ರ ಸರ್ಕಾರ ಬಳಸಿಲು ಒತ್ತಡ ಹೇರುವುದು, ತನ್ನ ವ್ಯಾಪ್ತಿಯಲ್ಲಿ ಬರುವ ಅಪರಾಧಗಳ ತನಿಖಾ ಸಂಸ್ಥೆಗಳನ್ನು ರಾಜಕೀಯವಾಗಿ ಬಳಸಿಕೊಂಡು ಜನರಿ ಂದ ಆಯ್ಕೆಗೊಂಡ ಬಿಜೆಪಿಯೇತರ ಸರ್ಕಾರವನ್ನು ಪತನಗೊಳಿಸಲು ದೊಡ್ಡಮಟ್ಟಿನ ಸಂಚು ರೂಪಿಸಿ ಹಿಂ ಬಾಗಿನಿಂದ ಬಿಜೆಪಿ ಅಧಿಕಾರ ಹಿಡಿಯಲು ಹುನ್ನಾರ ನಡೆಸುತ್ತಿದೆ ಎಂದು ದೂರಿದರು.
ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿಸಿ ಮನುವಾದವನ್ನು ಪ್ರತಿಪಾದಿಸುವ ಕೇಂದ್ರ ಸಂವಿಧಾನಿಕ ಸಂಸ್ಥೆಗಳ ಮೂಲಕವೇ ಮೆಟ್ಟಿಹಾಕುವ, ಬಾಯಿಮುಚ್ಚಿಸುವ ರಾಜಕಾರಣದ ಮಾದರಿಯೊಂದು ದೇಶದಲ್ಲಿ ಚಾಲ್ತಿಯಲ್ಲಿದೆ. ಈ ಭಾಗವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಮುಡ ಪ್ರಕರಣವನ್ನು ಬಳಸಿಕೊಳ್ಳಲಾಗು ತ್ತಿದೆ ಎಂದರು.
ಇಂಥಹ ರಾಜಕಾರಣದ ಆಂತರ್ಯದಲ್ಲಿ ಕೋಮುವಾದ, ಮನುಸಿದ್ಧಾಂತ ತನ್ನ ಅಸ್ಥಿತ್ವ ಉಳಿಸಿಕೊ ಳ್ಳಲು ಮಿಸುಕಾಡುತ್ತಿದೆ. ಆದ್ದರಿಂದ ಸಿದ್ದರಾಮಯ್ಯ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿ, ಯಥಾಪ್ರಕಾರ ಮುಖ್ಯಮಂತ್ರಿಗಳನ್ನಾಗಿ ಮುಂದುವರೆಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿ ಸಿದರು.
ಇದೇ ವೇಳೆ ಸಾಂವಿಧಾನ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವ ತಡೆಗಟ್ಟಲು ಜಿಲ್ಲಾಡಳಿತ ಮುಖಾಂತರ ರಾಷ್ಟ್ರಪತಿಗಳಿಗೆ ದಸಂಸ ಮುಖಂಡರುಗಳು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಸಂಘಟನಾ ಸಂಚಾಲಕ ಪ್ರಸನ್ನಕುಮಾರ್, ವಸಂತ್, ಎಸ್.ಆನಂದ್, ಸತೀಶ್, ರವಿ, ಶ್ಯಾಂಭಾ, ಕೆ.ಕೆ.ಬಾಬು, ಸಿದ್ದಯ್ಯ, ಪುಟ್ಟಪ್ಪ, ಆರ್.ಶೇಖರ್, ಗಿರೀಶ್, ಮಂಜು ಮತ್ತಿತರರು ಹಾಜರಿದ್ದರು.
Protest against misuse of constitutional institutions