ಚಿಕ್ಕಮಗಳೂರು,: ಭಗವಂತನು ನೆಲೆಸಿರುವ ದೇವಾಲಯಗಳು ಮನುಷ್ಯನ ಮಾನ ಸಿಕ ಒತ್ತಡ ನಿವಾರಿಸುವ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿ ಹಾಗೂ ಸಾತ್ವಿಕ ಜೀವನದತ್ತ ಕೊಂಡೊ ಯ್ಯುವ ಅತ್ಯಂತ ಪುಣ್ಯಕ್ಷೇತ್ರಗಳು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ತಾಲ್ಲೂಕಿನ ಉಂಡೇದಾಸರಹಳ್ಳಿಯಲ್ಲಿ ಶ್ರೀ ಲೋಕದಮ್ಮ, ಶ್ರೀ ಮುದಿಯಮ್ಮದೇವಿ ಹಾಗೂ ಶ್ರೀ ಒಂಟಿ ಕಲ್ ಭೂತಪ್ಪ ದೇವರುಗಳ ನೂತನ ವಿಗ್ರಹಗಳ ಅಷ್ಟಬಂಧ, ಪ್ರಾಣಪ್ರತಿಷ್ಟಾಪನೆ, ಕುಂಭಾಭಿಷೇಕ, ಶಿಖರ ಕಲಶೋಹಣ ಮಹೋತ್ಸವದಲ್ಲಿ ಶುಕ್ರವಾರ ಪಾಲ್ಗೊಂಡು ಅವರು ಮಾತನಾಡಿದರು.
ಭಗವಂತನ ಗರ್ಭಗುಡಿಗೆ ಅರ್ಪಿಸುವ ಪೂಜಾಸಾಮಾಗ್ರಿಗಳು ಅಭಿಷೇಕದ ಬಳಿಕ ಪ್ರಸಾದವಾದಂತೆ, ಮಾನವ ಬದುಕಿನ ಜಂಜಾಟವನ್ನು ಬದಿಗಿರಿಸಿ ಮುಕ್ತ ಮನಸ್ಸಿನಿಂದ ದೇಗುಲಕ್ಕೆ ತೆರಳಿ ಹಿಂತಿರುಗಿದರೆ ಸಂಸ್ಕಾರವಂತ, ಮಾನವತಾವಧಿ ಹಾಗೂ ಮನುಷ್ಯತ್ವ ಹೊಂದುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ದೇವಾಲಯಗಳನ್ನು ಜೀರ್ಣೋದ್ದಾರ ಅಥವಾ ನೂತನ ವಾಗಿ ನಿರ್ಮಿಸಿದರೆ ಸಾಲದು, ನಿರಂತರ ಪೂಜಾಕೈಂಕಾರ್ಯಗಳನ್ನು ಕೈಗೊಳ್ಳುವುದು ಅತಿಮುಖ್ಯ. ಹೀಗಾ ಗಿ ಭಕ್ತಾಧಿಗಳು ದೇವಾಲಯಕ್ಕೆ ತೆರಳಿ ಕೆಲಕಾಲ ಪ್ರಾರ್ಥನೆ ಸಲ್ಲಿಸಿದರೆ ಹಿಂತಿರುಗಿದರೆ ಮನಸ್ಸಿನಲ್ಲಿ ಶಾಂತಿ ಲಭಿಸಲು ಸಾಧ್ಯ ಎಂಬುದು ಅರಿಯಬೇಕು ಎಂದರು.
ಜಗತ್ತಿನಲ್ಲಿ ಮಾನವ ಜನ್ಮಕ್ಕೆ ಜಯವಾಗಲಿ ಎಂಬ ಸಂದೇಶ ನೀಡುವ ಸಂತಶ್ರೇಷ್ಟರು, ದಾರ್ಶನಿಕರ ಆಶಯದಂತೆ ಬದುಕುವುದೇ ನೈಜ ಸತ್ಯ ಎಂದ ಅವರು ಹಿರಿಯರು, ಕಿರಿಯರಾಗಲೀ ದೇವಾಲಯದಿಂದ ಹಿಂತಿರುಗಿದ ನಂತರ ಸನ್ನಡತೆ, ಸದ್ಬಾವನೆ ಹಾಗೂ ಸಹೋದರತೆಯ ಸಂಕೇತವನ್ನು ಅನುಸರಿಸಬೇಕು ಎಂದು ಕಿವಿಮಾತು ಹೇಳಿದರು.
ಶ್ರೀ ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆರ್ಶೀಚನ ನೀಡಿ ಆಧುನಿಕ ಭರದಲ್ಲಿ ಭಾರತೀಯ ಪರಂಪರೆ, ಪೂಜಾ ಸಂಸ್ಕೃತಿ ಹಾಗೂ ಜೀವನ ಪದ್ಧತಿ ಬದಲಾಗಿ ಸನಾತನ ಧರ್ಮ ಕ್ಷೀಣಿಸುತ್ತಿದೆ. ವರ್ತಮಾನದಲ್ಲಿ ಬದುಕಲು ಸನಾತನ ಸಂಸ್ಕೃತಿ ಬಹಳಮುಖ್ಯ. ಧರ್ಮವನ್ನು ಬೆಳೆಸಿ ಉಳಿ ಸುವುದು ಯುವಸಮೂಹದ ಮೇಲಿದೆ ಎಂದು ಹೇಳಿದರು.
ಭಾರತೀಯ ಸನಾತನ ಸಂಸ್ಕೃತಿ ಪ್ರಪಂಚದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಕೆಲವರು ಆಸೆ, ಆಕಾಂಕ್ಷೆಗಳನ್ನು ಧರ್ಮವನ್ನು ಮತಾಂತರಿಸಲು ಪ್ರೇರೇಪಿಸುತ್ತಾರೆ. ಈ ಬಗ್ಗೆ ಸನಾತನಿಗಳು ಎಚ್ಚೆತ್ತು ಕೊಳ್ಳಬೇಕು. ಸೃಷ್ಟಿಕರ್ತನ ವಿರುದ್ಧವಾಗಿ ನಡೆಯದೇ ಇಡೀ ಮನುಕುಲಕ್ಕೆ ಜ್ಞಾನವನ್ನು ನೀಡುವ ಸನಾತನ ಸಂಸ್ಕೃತಿ ಚಿರಋಣಿಯಾಗಬೇಕು ಎಂದು ತಿಳಿಸಿದರು.
ದೇವಾಲಯ ಸಮಿತಿ ಅಧ್ಯಕ್ಷ ಚಂದ್ರಣ್ಣ ಮಾತನಾಡಿ ಮುಂಜಾನೆ ನೂತನ ವಿಗ್ರಹಗಳ ಅಷ್ಠಬಂಧ, ಪ್ರಾಣ ಪ್ರತಿಷ್ಟಾಪನೆಯೊಂದಿಗೆ, ಕಲಾ ಆಕರ್ಷಣೆ, ಹೋಮ, ದುರ್ಗಾಹೋಮ, ಸಪ್ತಮಾತೃ ದೇವತಾ ಹೋ ಮಗಳ ನಂತರ ಗ್ರಾಮದ ಶ್ರೀ ಕಲ್ಲೇಶ್ವರಸ್ವಾಮಿ ದೇವಸ್ಥಾನದ ಗಂಗೆಭಾವಿಯಿಂದ ಪೂರ್ಣಕುಂಭಾ ಪೂಜೆ ಯೊಂದಿಗೆ ಗ್ರಾಮದ ಬೀದಿಗಳಲ್ಲಿ ಸಾಗಿ ದೇವಾಲಯ ಪ್ರವೇಶಿಸಿ ಅಭಿಷೇಕ ನಡೆಸಲಾಯಿತು ಎಂದರು.
ನಂತರ ಮಹಾಸ್ವಾಮೀಯ ನೇತೃತ್ವದಲ್ಲಿ ಕಲಶೋಹಣ, ವಿಶೇಷ ಪೂಜೆ, ಕುಂಭಾಭಿಷೇಕ, ಪ್ರಾಣ ಪ್ರತಿ ಷ್ಟೆ ದೇವತೆಗಳಿಗೆ ನೇತ್ರೋನ್ಮಿಲನ, ಪೂರ್ಣಾಹುತಿ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ಜರುಗಿತು. ತದನಂತರ ಭಕ್ತಾಧಿಗಳಿಗೆ ಸಾರ್ವಜನಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಯಿತು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಸದಸ್ಯೆ ರೂಪ ಕುಮಾರ್, ಕಾಂಗ್ರೆಸ್ ನಗರ ಉಪಾಧ್ಯಕ್ಷ ವರದರಾಜ್, ಮುಖಂಡರುಗಳಾದ ತನೋಜ್ನಾಯ್ಡು, ಸೋಮಶೇಖರ್, ದೇವಾಲಯ ಸಮಿತಿ ಖಜಾಂಚಿ ಪುಟ್ಟಸ್ವಾಮಿ, ಸದಸ್ಯರಾದ ಬಸವರಾಜಪ್ಪ, ನಾಗರಾಜ್, ಈರಪ್ಪ ಹಾಗೂ ಗ್ರಾಮಸ್ಥರು ಹಾಜರಿದ್ದರು.
Ashtabandha of new idols of Sri Lokadamma Gods at Undedasarahalli