ಚಿಕ್ಕಮಗಳೂರು: ವೀರವನಿತೆ ಒನಕೆ ಓಬವ್ವ ೨೮೫ ನೇ ಜಯಂತಿಯನ್ನು ನ.೧೧ ರಂದು ಸೋಮವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಜಿಲ್ಲಾ ಛಲವಾದಿ ಮಹಾಸಭಾ ಬೆಂಬಲಿಸುತ್ತದೆ ಎಂದು ಸಂಘದ ಅಧ್ಯಕ್ಷ ಬಿ.ಎಂ ರಘು ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಚಿತ್ರದುರ್ಗದ ಇತಿಹಾಸದಲ್ಲಿ ಓಬವ್ವನ ವೀರವನಿತೆಯಾಗಿದ್ದು, ಕೋಟೆಯ ಒಳಭಾಗದಲ್ಲಿ ಹೈದರಾಲಿಯ ಸೈನಿಕರನ್ನು ಸದೆ ಬಡಿದ ಒನಕೆ ಓಬವ್ವನ ಕಿಂಡಿ ಎಂದು ಕರೆಯಲಾಗುತ್ತಿದ್ದು, ಛಲವಾದಿ ವೀರವನಿತೆ ಒಬವ್ವ ಜಯಂತಿಯನ್ನು ಸರ್ಕಾರ ಆಚರಿಸುತ್ತಿರುವುದರಿಂದ ಇದಕ್ಕೆ ಛಲವಾದಿ ಜಿಲ್ಲಾ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದರು.
ತರೀಕೆರೆ ತಾಲ್ಲೂಕಿನ ಉಡೇವಾ ಪಟೇಲ್ಮೂಡ್ಲೇಗೌಡ ಸರ್ಕಾರಿ ಪ್ರೌಢಶಾಲೆಯ ಅಧ್ಯಾಪಕ ಎಂ.ಇ ರಮೇಶ್ ಪ್ರಧಾನ ಉಪನ್ಯಾಸ ನೀಡಲಿದ್ದಾರೆ. ಎಂದ ಅವರು ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಛಲವಾದಿ ಬಂಧುಗಳು, ಸಾರ್ವಜನಿಕರು, ಒನಕೆ ಓಬವ್ವನ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಜಯಂತಿಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವ ಅಧ್ಯಕ್ಷ ಎಂ.ಮಲ್ಲೇಶ್, ಉಪಾಧ್ಯಕ್ಷ ಬಿ.ಆರ್ ನಂಜುಡಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ಎಂ ರಾಜ್ಕುಮಾರ್, ನಗರ ಅಧ್ಯಕ್ಷ ಹೆಚ್.ಟಿ ವೆಂಕಟೇಶ್ ಮೂರ್ತಿ, ಹುಣಸೆಮಕ್ಕಿ ಲಕ್ಷ್ಮಣ, ಹಿರೇಮಗಳೂರು ರಾಮಚಂದ್ರ, ನಾಗೇಶ್, ಶಿವಾಜಿ ಮತ್ತಿತರರು ಇದ್ದರು.
On November 11 Veeravanitha Onake Obavva Jayanti is celebrated in the city