ಚಿಕ್ಕಮಗಳೂರು: ಬರಡು ಅಥವಾ ನಿರುಪಯುಕ್ತ ಪ್ರದೇಶದಲ್ಲಿ ಸೋಲಾರ್ ಸಿಸ್ಟಂ ಅಳವಡಿಸಿ ಇಂಧನ ಶಕ್ತಿ ಉತ್ಪಾದಿಸಲು ರಾಜ್ಯಸರ್ಕಾರ ಶೇ.೮೦ ಸಬ್ಸಿಡಿ ಒದಗಿಸಿ ಸ್ವ ಉದ್ಯೋಗ ಕೈಗೊಳ್ಳಲು ಯುವಸಮೂಹಕ್ಕೆ ಸಹಾಯಧನ ಕಲ್ಪಿಸುತ್ತಿದೆ ಎಂದು ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಗ ಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.
ನಗರದ ಆದಿಚುಂಚನಗಿರಿ ತಾಂತ್ರಿಕ ವಿದ್ಯಾಲಯದಲ್ಲಿ ಏರ್ಪಡಿಸಿದ್ಧ ಭವಿಷ್ಯದಲ್ಲಿ ನವೀಕರಿಸಬಹುದಾ ದ ಇಂಧನ ಸಂಪನ್ಮೂಲಗಳ ಕುರಿತ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ದೇಶ-ವಿದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಸಿರು ಇಂಧನ ಉತ್ಪಾದಿಸುವುದು ಸಮಾರೋಪದಿಯಲ್ಲಿ ನಡೆಯುತ್ತಿದೆ. ಪ್ರಕೃತಿಯಲ್ಲಿ ದೊರೆಯುವ ಗಾಳಿ, ನೀರು, ಸೂರ್ಯನ ಕಿರಣ ಬಳಸಿ ಕೊಂಡು ಪರಿಸರಕ್ಕೆ ಹಾನಿಯಾಗದೇ ಜೈವಿಕ ವಿಧಾನದಡಿ ವಿದ್ಯುತ್ಶಕ್ತಿ ಉತ್ಪಾದನೆಯಲ್ಲಿ ಸರ್ಕಾರಗಳು ತೊ ಡಗಿಸಿಕೊಂಡಿದೆ ಎಂದು ಹೇಳಿದರು.
ಗುಣಮಟ್ಟದ ಇಂಧನ ಉತ್ಪ್ಪತ್ತಿ ಸಂಬಂಧ ವಿದೇಶಿ ಕಂಪನಿಯೊಂದಕ್ಕೆ ಸಂಸ್ಥೆ ಒಪ್ಪಂದ ಮಾಡಿಕೊಂ ಡು ಹೆಚ್ಚಿನ ಮಟ್ಟದಲ್ಲಿ ಶುದ್ಧ ಇಂಧನಕ್ಕೆ ಮುಂದಾಗಿದೆ ಎಂದ ಅವರು ಸೋಲಾರ್ಗೆ ಹೆಚ್ಚು ಪ್ರಾಮುಖ್ಯತೆ ಯನ್ನು ಸರ್ಕಾರ ನೀಡಿರುವ ಪರಿಣಾಮ ರಾಜ್ಯವು ಇಂಧನ ಉತ್ಪಾದನೆಯಲ್ಲಿ ಮೂರನೇ ಸ್ಥಾನ ಪಡೆದು ಕೊಂಡಿದೆ ಎಂದು ತಿಳಿಸಿದರು.
ಜನಸಾಮಾನ್ಯರಿಗೆ ಸಂಪೂರ್ಣ ವಿದ್ಯುತ್ ಪೂರೈಸುವ ಸಂಬಂಧ ಸೋಲಾರ್ ಪವಾರ್ ಅಳವಡಿ ಸಿಕೊಂಡು ಮುನ್ನೆಡೆದರೆ ಮುಂದಿನ ಹತ್ತು ವರ್ಷಗಳಲ್ಲಿ ದೇಶಕ್ಕೆ ಹಾಗೂ ರಾಜ್ಯಕ್ಕೆ ಹೆಚ್ಚಿನ ಮಟ್ಟದಲ್ಲಿ ಇಂ ಧನ ಉತ್ಪಾತ್ತಿಯಾಗಿ ಯಶಸ್ವಿಗೊಂಡರೆ ಪ್ರತಿ ಕುಟುಂಬಕ್ಕೂ ೨೪ ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈ ಸಬಹುದು ಎಂದರು.
ನಿರುಪಯುಕ್ತ ಪ್ರದೇಶ ಪಾವಗಡದಲ್ಲಿ ರೈತರು ಜಮೀನನ್ನು ಗುತ್ತಿಗೆ ಪಡೆದುಕೊಂಡು ಸೋಲಾರ್ ಸಿಸ್ಟಂ ಅಳವಡಿಸಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುತ್ತಿದೆ. ಅಲ್ಲದೇ ಗುತ್ತಿಗೆ ಪಡೆದ ರೈತರ ಪ್ರತಿ ಎಕರೆಗೆ ವರ್ಷಕ್ಕೆ ೨೫ ಸಾವಿರ ರೂ.ಗಳನ್ನು ಒದಗಿಸುತ್ತಿದೆ. ಅಲ್ಲದೇ ಆಸಕ್ತಿ ಹೊಂದಿರುವ ಸ್ವಉದ್ಯೋಗಿಗಳು ಕಡಿಮೆ ದರದಲ್ಲಿ ಹೆಚ್ಚಿನ ಆಧಾಯವನ್ನು ಗಳಿಸಬಹುದು ಎಂದರು.
ಪ್ರಸ್ತುತ ಇಂಜಿನಿಯರ್ ವಿದ್ಯಾರ್ಥಿಗಳು ಇಂಧನ ಕ್ಷೇತ್ರದಲ್ಲಿ ಸ್ವಉದ್ಯೋಗ ಕೈಗೊಳ್ಳಲು ಇದೊಂದು ಸುವರ್ಣಾವಕಾಶವಿದೆ. ಶೇ.೨೦ ರಷ್ಟು ಬಂಡವಾಳ ಹೂಡಿಸಿದರೆ ಶೇ.೮೦ರಷ್ಟು ಸಹಾಯಧನದ ಸಬ್ಸಿಡಿ ಯನ್ನು ಸರ್ಕಾರವು ಒದಗಿಸುವ ಮುಖಾಂತರ ಉದ್ಯೋಗಿಗಳು ಸಮಾಜಕ್ಕೆ ದೊಡ್ಡ ಆಸ್ತಿಯನ್ನಾಗಿ ಹೊರ ಹೊಮ್ಮಬಹುದು ಎಂದು ಹೇಳಿದರು.
ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ರಾಜ್ಯದಲ್ಲಿನ ವಿವಿಧ ಅಸಾಂಪ್ರದಾಯಿಕ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಅನ್ವಯಗಳನ್ನು ಜನಪ್ರಿಯಗೊ ಳಿಸಲು ಅಗತ್ಯವಾದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಜವಾಬ್ದಾರಿಯನ್ನು ನವೀಕರಿಸಬ ಹುದಾದ ಇಂಧನ ಇಲಾಖೆ ಹೊಂದಿದೆ ಎಂದರು.
ಜಲವಿದ್ಯುತ್ ಎತ್ತರದಿಂದ ಕಡಿಮೆ ಎತ್ತರಕ್ಕೆ ಚಲಿಸುವ ನೀರಿನ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಇದನ್ನು ಜಲಾಶಯಗಳು ಮತ್ತು ನದಿಗಳಿಂದ ಉತ್ಪಾದಿಸಬಹುದು. ಜಲಾಶಯದ ಜಲವಿದ್ಯುತ್ ಸ್ಥಾವರಗಳು ಜಲಾ ಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಅವಲಂಬಿಸಿವೆ, ಆದರೆ ನದಿಯ ಹರಿಯುವ ಜಲವಿದ್ಯುತ್ ಸ್ಥಾವ ರಗಳು ನದಿಯ ಲಭ್ಯವಿರುವ ಹರಿವಿನಿಂದ ಶಕ್ತಿಯನ್ನು ಬಳಸಿಕೊಳ್ಳುತ್ತವೆ ಎಂದರು.
ಈ ಸಂದರ್ಭದಲ್ಲಿ ಎಐಟಿ ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಸಿ.ಕೆ.ಸುಬ್ಬರಾಯ, ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ್, ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ಮೆಕ್ಯಾನಿಕಲ್ ಇಂಜನಿಯರ್ ವಿಭಾಗದ ಮುಖ್ಯಸ್ಥ ಡಾ.ಜೆ.ಎಂ.ನಾರಾಯಣ್, ಹೆಚ್ಓಡಿ ಸತ್ಯನಾರಾಯಣ್, ಜಿಲ್ಲಾ ಒಕ್ಕಲಿಗರ ಸಂಘದ ಗೌರವ ಕಾರ್ಯದರ್ಶಿ ಮಾಡ್ಲಾ ಪ್ರಕಾಶ್ ಮತ್ತಿತರರಿದ್ದರು.
More fuel generation through the use of solar energy