ಚಿಕ್ಕಮಗಳೂರು: ರಾಜ್ಯಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸು ವ ಜೊತೆಗೆ ಕ್ಷೇತ್ರದ ಗ್ರಾಮೀಣಾಭಿವೃದ್ದಿ ರಸ್ತೆಗಳಿಗೆ ೧೫ ಕೋಟಿ ಅನುದಾನ ಮೀಸಲಿರಿಸಿ, ಪ್ರತಿ ಗ್ರಾಮ ಪಂಚಾಯಿತಿಗಳಿಗೆ ೪೦ ಲಕ್ಷ ರೂ.ಗಳ ಅನುದಾನವನ್ನು ಹಂಚಿಕೆ ಮಾಡಲಾಗಿದೆ ಎಂದು ಶಾಸಕ ಹೆಚ್.ಡಿ.ತಮ್ಮ ಯ್ಯ ಹೇಳಿದರು.
ತಾಲ್ಲೂಕಿನ ಕರ್ತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕನಕ ಸಮುದಾಯ ಭವನ ಉದ್ಘಾಟನೆ ಹಾಗೂ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಶನಿವಾರ ಅವರು ಮಾತನಾಡಿ ರಾಜ್ಯಸರ್ಕಾರ ಪ್ರತಿ ಕ್ಷೇತ್ರಕ್ಕೂ ೨೫ ಕೋಟಿ ರೂ.ಗಳ ಅನುದಾನವನ್ನು ಒದಗಿಸಿದೆ. ಹಂತ ಹಂತವಾಗಿ ಗ್ರಾಮಾಂತರ ಪ್ರದೇಶದ ನಿವಾಸಿಗಳ ಸವಲತ್ತಿಗೆ ಸಮರ್ಪಕವಾಗಿ ಬಳಸುತ್ತಿದ್ದು ಆ ನಿಟ್ಟಿನಲ್ಲಿ ಗ್ರಾಮದ ಬಹು ಬೇಡಿಕೆಯಾದ ಸಮುದಾಯ ಭವನದ ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಿ ಗ್ರಾಮಸ್ಥರಿಗೆ ಸಮರ್ಪಿಸಲಾಗಿದೆ ಎಂದರು.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನೇತೃತ್ವದ ರಾಜ್ಯಸರ್ಕಾರ ಗ್ರಾಮೀಣ ಹಾಗೂ ಪಟ್ಟಣದ ನಿವಾಸಿಗಳಿಗೆ ಗ್ಯಾರಂಟಿ ಯೋಜನೆಯನ್ನು ಸಮರ್ಪಕವಾಗಿ ತಲುಪಿಸಿ ನುಡಿದಂತೆ ನಡೆಯುತ್ತಿದೆ. ಅಲ್ಲದೇ ಕ್ಷೇತ್ರ ವ್ಯಾಪ್ತಿಯ ಅಭಿವೃದ್ದಿ ವಿಚಾರದಲ್ಲೂ ಹಿಂದೇಟು ಹಾಕದೇ ಪ್ರತಿ ಕ್ಷೇತ್ರಕ್ಕೂ ಕೋಟಿಗಟ್ಟಲೇ ಅನುದಾನ ಬಿಡುಗಡೆಗೊಳಿಸಿ ಸಹಕರಿಸುತ್ತಿದೆ ಎಂದರು.
ಈ ಹಿಂದಿನ ಶಾಸಕರು ಕೈಗೊಂಡಂತ ಹಲವಾರು ಅಭಿವೃದ್ದಿಗೆ ರಾಜ್ಯಸರ್ಕಾರ ತಾರತಮ್ಯವೆಸಗದೇ ಜನತೆಗೆ ಅನುಕೂಲಕ್ಕಾಗಿ ಅಭಿವೃದ್ದಿಪಡಿಸುತ್ತಿದೆ. ಮುಖ್ಯವಾಗಿ ಕ್ಷೇತ್ರದ ಜನತೆಗೆ ಅನಾರೋಗ್ಯದಿಂದ ಹೊರ ಜಿಲ್ಲೆಗಳಿಗೆ ತೆರಳುವ ಪರಿಸ್ಥಿತಿಯಿದ್ದು ಸೂಪರ್ ಸ್ಪೆಪಾಲಿಟಿ ಆಸ್ಪತ್ರೆ ಕಾಮಗಾರಿಯ ಇನ್ನೇರಡು ವರ್ಷಗಳಲ್ಲಿ ಪೂರ್ಣಗೊಳಿಸಿ ಸೂಕ್ತ ಚಿಕಿತ್ಸೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಈಗಾಗಲೇ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಮೂಲಭೂತ ಸೌಲಭ್ಯ ಹಾಗೂ ಕೆರೆ ಸ್ವಚ್ಚಗೊಳಿಸುವ ಸಂಬಂಧ ಮನವಿ ಸಲ್ಲಿಸಿದ್ದು ಹಂತ ಹಂತವಾಗಿ ಎಲ್ಲಾ ಬೇಡಿಕೆಗಳನ್ನು ಪೂರೈಸಲಾಗುವುದು. ರೈತರ ಏಳಿಗೆ ಗೆಯೇ ರಾಜ್ಯಸರ್ಕಾರದ ಅತಿದೊಡ್ಡ ಅಭಿವೃದ್ದಿ ಪಥದ ಗುರಿಯಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಮಾತನಾಡಿ ಕಳೆದೆರಡು ದಶಕಗಳಿಂದ ಅಭಿವೃದ್ದಿ ಶೂನ್ಯವಾಗಿದ್ಧ ಗ್ರಾಮಕ್ಕೆ ಕಾಂಗ್ರೆಸ್ ಸರ್ಕಾರ ಯೋಜನೆಗಳ ಮಹಾಪೂರವನ್ನೇ ಒದಗಿಸುತ್ತಿದೆ. ೧೦ ಲಕ್ಷ ರೂ.ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಹಾಗೂ ೨೦ ಲಕ್ಷ ರೂ.ಗಳ ವೆಚ್ಚದಲ್ಲಿ ಮರ್ಲೆಯಿ ಂದ ಚಿಕ್ಕನಹಳ್ಳಿ ಗ್ರಾಮಕ್ಕೆ ಗುಣಮಟ್ಟದ ರಸ್ತೆ ನಿರ್ಮಿಸಲು ಮುಂದಾಗಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳು ರೈತ ಮಹಿಳೆಯರು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಕೆಲವರು ಗ್ಯಾರಂಟಿ ಹಾಗೂ ಮುಖ್ಯಮಂತ್ರಿಗಳ ಬಗ್ಗೆ ಅಸಡ್ಡೆ ಮಾತುಗಳು ಆಡುತ್ತಿದ್ದು, ಎಲ್ಲದಕ್ಕೂ ಪ್ರಶ್ನಿಸುವ ಗುಣಗ ಳನ್ನು ಬೆಳೆಸಿಕೊಂಡರೆ ಮಾತ್ರ ತಾನಾಗಿಯೇ ವಿರೋಧಿ ಪಡೆಗಳು ಸುಮ್ಮನಾಗುತ್ತಾರೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿಗಳು ಆಡಳಿತವು ಗ್ರಾಮಸ್ಥರ ಕುಂದು-ಕೊರತೆಗಳ ಬಗ್ಗೆ ಸಮಗ್ರವಾಗಿ ಆಲಿಸಬೇಕು. ಪ್ರತಿ ಗ್ರಾಮಗಳಲ್ಲಿ ಸಭೆ ಕರೆದು ನ್ಯೂನ್ಯತೆಗಳ ಬಗ್ಗೆ ಪರಿಶೀಲಿಸಿದರೆ ಯಾವುದೇ ಸಮಸ್ಯೆಗಳು ತಲೆದೋ ರುವುದಿಲ್ಲ. ಹೀಗಾಗಿ ಪಂಚಾಯಿತಿ ಪಿಡಿಓ ಹಾಗೂ ಆಡಳಿತ ಮಂಡಳಿ ಸಮಗ್ರವಾಗಿ ಕಾರ್ಯನಿರ್ವಹಿಸ ಬೇಕು ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಸಿ.ಎಲ್.ಸಿದ್ದರಾಮೇಗೌಡ ಮಾತನಾಡಿ ಅಭಿವೃದ್ದಿ ಕಾಮಗಾರಿಯಿಂದ ಕುಂಠಿತಗೊಂಡಿದ್ಧ ಗ್ರಾಮಕ್ಕೆ ತಮ್ಮಯ್ಯನವರು ಶಾಸಕರಾದ ಬಳಿಕ ಹಲವಾರು ಅನುದಾನವನ್ನು ಒದಗಿಸಿ ಶ್ರಮಿಸುತ್ತಿದ್ದು ಮುಂಬರುವ ದಿನಗಳಲ್ಲಿ ಇನ್ನಷ್ಟು ಮೂಲಸೌಕರ್ಯಕ್ಕೆ ಸಹಕರಿಸುವುದಾಗಿ ಭರವಸೆ ನೀಡಿ ದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರಾಟ ಸಂಸ್ಕರಣಾ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಹೆಚ್. ಹರೀಶ್, ಓಬಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಜ್ಅರಸ್, ಕರ್ತಿಕೆರೆ ಗ್ರಾ.ಪಂ. ಅಧ್ಯಕ್ಷೆ ಆಶಾರಾಣಿ, ಉಪಾಧ್ಯಕ್ಷ ಲೋಕಣ್ಣ, ಗಾರೆ ಕಂಟ್ರಾಕ್ಟರ್ ಲಕ್ಷ್ಮಣ್, ಗ್ರಾಮಸ್ಥರಾದ ಸಿದ್ದೇಗೌಡ, ನಿಂಗಣ್ಣ, ರಾಮೇಗೌಡ, ರಾಜೇಗೌಡ, ಮಂಜೇಗೌಡ, ಶೇಖರ್, ರಂಗಸ್ವಾಮಿ, ತೀರ್ಥ ಮತ್ತಿತರರಿದ್ದರು.
Guddali Puja for road work in Chikkanahalli village