ಚಿಕ್ಕಮಗಳೂರು: ಪೂರ್ವಿಯದ ದಶಮಾನೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪೂರ್ವಿ ಗಾನಯನ-೧೦೧ ರ ಸಂಚಿಕೆಯಡಿ ನಾಡಿನ ಖ್ಯಾತ ಕವಿಗಳ ಕಾವ್ಯ ಗಾಯನದ ನಮ್ಮ ನಾಡು ನಮ್ಮ ಹಾಡು ಕಾರ್ಯಕ್ರಮವನ್ನು ಇದೆ ನ.೧೭ ರಂದು ಭಾನುವಾರ ಸಂಜೆ ೬ ಗಂಟೆಗೆ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಪೂರ್ವ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಇವರುಗಳು ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಅಂದು ಗಾಯನ ಕಾರ್ಯಕ್ರಮದ ಉದ್ಘಾಟನೆಯನ್ನು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಕುಲ ಸಚಿವ ಡಾಕ್ಟರ್ ಸಿ.ಕೆ.ಸುಬ್ಬರಾಯ ನೆರವೇರಿಸಲಿದ್ದು, ಯುರೇಕಾ ಅಕಾಡೆಮಿಯ ಸಂಸ್ಥಾಪಕರಾದ ದೀಪಕ್ ದೊಡ್ಡಯ್ಯರವರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸುಗಮ ಸಂಗೀತ ಪರಿ?ತ್ ಚಿಕ್ಕಮಗಳೂರು ಘಟಕದ ಅಧ್ಯಕ್ಷರಾದ ಎಸ್.ಎಸ್ ವೆಂಕಟೇಶ್ ತಾಯಿ ಭುವನೇಶ್ವರಿಗೆ ನುಡಿ ನಮನವನ್ನು ಸಲ್ಲಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾಕ್ಟರ್. ಸಿ.ರಮೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಪೂರ್ವಿಯ ಗಾಯಕರಾದ ಸಾರಥಿ ವೆಂಕಟೇಶ್, ರಾಯನಾಯಕ್, ಸುರೇಂದ್ರ ನಾಯ್ಕ್, ಹಾಸನದ ಚೇತನ್ ರಾಮ್, ಅನುಷ, ರುಕ್ಸಾನ, ಕಾಚೂರು, ಸುಂದರ ಲಕ್ಷ್ಮಿ, ಲಾಲಿತ್ಯ, ಪ್ರಣಮ್ಯ ಇವರೆಲ್ಲರ ಜೊತೆ ಅಮೃತವರ್ಷಿಣಿ ಸಂಗೀತ ಶಾಲೆ ಶ್ರೀಮರಥಕಲಾ ಕ್ಷೇತ್ರ ಆರಾಧನಾ ಕಲ್ಚರಲ್ ರಂಜಿನಿ ಸಂಗೀತ ಶಾಲೆ ಶ್ರೀ ಮಾತಾ ಸಂಗೀತ ಶಾಲೆ, ಪಾವನಿ ವೀಣಾ ಶಾಲೆ, ವಾಗ್ದೇವಿ ಸಂಗೀತ ಶಾಲೆ, ಶ್ರೀರಾಮಪ್ರಿಯ ಸಂಗೀತ ಶಾಲೆ, ಸಪ್ತಸ್ವರ ಸಂಗೀತ ಶಾಲೆ, ಶ್ರೀ ರಾಗ ಪ್ರಿಯ ಸಂಗೀತ ಶಾಲೆ, ನಾದಂ ಸಂಗೀತ ಶಾಲೆ ಹಾಗು ಆಶಾ ಕಿರಣ ವಸತಿಯುತ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಸುಧೀರ್ ಎಂ.ಎಸ್ ರವರ ಗಾಯನ ಸಾರಥ್ಯ ಹಾಗೂ ಸಂಗೀತ ಸಮನ್ವಯದಲ್ಲಿ ಹಾಡಲಿದ್ದು ಕವಿತೆಗಳ ವಿಶೇ?ತೆಯೊಂದಿಗೆ ಪರಿಣಾಮಕಾರಿಯಾಗಿ ಸುಮಾಪ್ರಸಾದ್ ಮತ್ತು ರೂಪನಾಯ್ಕ್ ನಿರೂಪಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕರ್ನಾಟಕ ಸುಗಮ ಸಂಗೀತ ಪರಿ?ತ್ತು ಚಿಕ್ಕಮಗಳೂರು ಘಟಕ, ಮಲೆನಾಡು ವಿದ್ಯಾಸಂಸ್ಥೆ ಹಾಗೂ ಶೃತಿ ಆಟೋ ವರ್ಕ್ಸ್ ಚಿಕ್ಕಮಗಳೂರು ಸಹಕಾರವನ್ನು ನೀಡಲಿದ್ದಾರೆ.
ಈ ಬಾರಿ ಸುವರ್ಣ ಕರ್ನಾಟಕ ಸಂಭ್ರಮದಡಿಯಲ್ಲಿ ನಮ್ಮ ಚಿಕ್ಕಮಗಳೂರಿನ ಖ್ಯಾತ ಮಕ್ಕಳ ವೈದ್ಯರಾದ ಡಾ.ಜೆ.ಪಿ.ಕೃ?ಗೌಡರವರಿಗೆ ಪೂರ್ವಿ ಕನ್ನಡ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ನಾಡಿನ ಖ್ಯಾತ ಕೀಬೋರ್ಡ್ ವಾದಕ ಮೈಸೂರಿನ ಗಣೇಶ್ ಭಟ್, ತುಮಕೂರಿನ ಮ್ಯಾಂಡಲಿನ್ ವಾದಕ ಹರೀಶ್, ಬೆಂಗಳೂರಿನ ತಬಲವಾದಕ ವೇಣುಗೋಪಾಲ್, ಮೈಸೂರಿನ ರಿದಂ ಪ್ಯಾಡ್ ವಾದಕ ಅರುಣ್ ಕುಮಾರ್ ವಾದ್ಯ ನೀಡಲಿದ್ದಾರೆ. ಸಂಗೀತಾಸಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಂ.ಎಸ್ ಸುಧೀರ್, ಸುಮಾಪ್ರಸಾದ್, ಜ್ಯೋತಿ ಸಂತೋ? ಇದ್ದರು.
Nama Nadu – Nama Song program on November 17