ಚಿಕ್ಕಮಗಳೂರು: ನಗರದ ಟೌನ್ ಮಹಿಳಾ ಸಮಾಜ ವತಿಯಿಂದ ಸಂಸ್ಥಾಪನಾ ದಿನಾಚರಣೆ ೨೦೨೪ ರ ಉದ್ಘಾಟನಾ ಸಮಾರಂಭ ನ.೧೯ ರಂದು ಮಂಗಳವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಮಧ್ಯಾಹ್ನ ೩ ಗಂಟೆಗೆ ನಡೆಯಲಿದೆ ಎಂದು ಟಿಎಂಎಸ್ ಅಧ್ಯಕ್ಷೆ ಗೀತಾ ಎಂ.ಎಲ್ ಮೂರ್ತಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ವಿಶೇಷ ಆಹ್ವಾನಿತರಾಗಿ ಸಂಗೀತ ನಿರ್ದೇಶಕರು ಹಾಗೂ ಚಲನಚಿತ್ರ ನಿರ್ಮಾಪಕರಾದ ಅರ್ಜುನ್ ಜನ್ಯ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಹೆಚ್.ಡಿ ತಮ್ಮಯ್ಯ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ, ಎಸ್.ಎಲ್ ಭೋಜೇಗೌಡ, ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್, ಉಪಾಧ್ಯಕ್ಷೆ ಅನುಮಧುಕರ್, ಮಾಜಿ ಶಾಸಕಿ ಗಾಯತ್ರಿ ಶಾಂತೇಗೌಡ, ಅರ್ಪಿತ ಎ.ಎನ್, ಯಮುನಾ ಚನ್ನಬಸಪ್ಪಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಂತಬಾಯಿ ಸವೂರ್, ಸಾವಿತ್ರಮ್ಮ ಅಣ್ಣೇಗೌಡ, ಟಿ.ಕೆ ಶಕುಂತಲ, ರಂಗನಾಯಕಮ್ಮ, ಶ್ರೀಮತಿ ಗೌರಮ್ಮ ಬಸವೇಗೌಡ, ಅಂಬುಜ ನಟರಾಜ್ ಇವರುಗಳ ಕುಟುಂಬದವರನ್ನು ಸನ್ಮಾನಿಸುವ ಜೊತೆಗೆ ಸತ್ಯವತಿ ಚಂದ್ರೇಗೌಡ, ಡಾ. ಶಾಂತಿ ಶ್ರೀನಿವಾಸ್, ಕಾತ್ಯಾಯಿನಿ ಚಂದ್ರಶೇಖರ್, ಸುಲೋಚನಾ ಶ್ರೀನಿವಾಸ ಶೆಟ್ಟಿ, ಕೃಷ್ಣವೇಣಿ ಗೋಪಾಲ್, ಸತ್ಯಪ್ರೇಮ ಮಂಜುನಾಥ್, ಲೇಖಾ ಚಂದ್ರಶೇಖರ್, ರಾಗಿಣಿ ರಾಮೇಗೌಡ, ವಿಮಲ ರಾಜಶೇಖರ್, ಸುಮಿತ್ರಮ್ಮ ನಂಜುಂಡಯ್ಯ ಹಾಗೂ ಜಯ ಚಂದ್ರೇಗೌಡ ಇವರುಗಳನ್ನು ಗೌರವಿಸಲು ನಿರ್ಧರಿಸಲಾಗಿದೆ ಎಂದರು.
ಈ ಕಾರ್ಯಕ್ರಮವನ್ನು ಮಹಿಳೆಯರ ಸಶಕ್ತೀಕರಣ, ಸಾಮಾಜಿಕ ಚಟುವಟಿಕೆಗಳಲ್ಲಿ ಮಹಿಳೆಯರ ಪಾತ್ರದ ಮೂಲಕ ಮಹಿಳಾ ಸಬಲೀಕರಣದ ಹೆಮ್ಮೆಯ ಸಂಸ್ಥೆ ಟೌನ್ ಮಹಿಳಾ ಸಮಾಜವನ್ನು ಕಟ್ಟಿದವರನ್ನು ಸ್ಮರಿಸಲು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಟಿ.ಎಂ.ಎಸ್ ಸ್ಥಾಪಿಸುವಲ್ಲಿ ಪ್ರಮುಖರಾದ ಹೆಚ್.ಕೆ. ರಾಮಸ್ವಾಮಿ, ಸೀತಮ್ಮ, ಚಂದ್ರೇಗೌಡ, ಶ್ರೀನಿವಾಸ್ ಪ್ರಭು, ಎಂ.ಲಚ್ಚಯ್ಯ ಶೆಟ್ಟಿ, ಕೆ.ತಿಮ್ಮೇಗೌಡ, ಟಿ.ಬಿ ಮಲ್ಲೇಗೌಡ, ಗೌರಮ್ಮ ಬಸವೇಗೌಡ ಇವರುಗಳು ಹಾಕಿಕೊಟ್ಟ ದಾರಿದೀಪದಂತೆ ಟೌನ್ ಮಹಿಳಾ ಸಮಾಜವನ್ನು ನಡೆಸಿಕೊಂಡು ಬಂದಿದ್ದು, ಈಗಾಗಲೇ ೯೯ ವರ್ಷ ತುಂಬಿದೆ ಎಂದು ಹೇಳಿದರು.
ಕಳೆದ ೯೯ ವರ್ಷಗಳ ಕಾಲ ಟೌನ್ ಮಹಿಳಾ ಸಮಾಜಕ್ಕೆ ಬೆನ್ನೆಲುಬಾಗಿ ಎಲ್ಲಾ ರಂಗಗಳಲ್ಲೂ ಕಾರ್ಯ ನಿರ್ವಹಿಸುತ್ತಿರುವ ಹಲವಾರು ಮಹಿಳೆಯರನ್ನು ಗುರ್ತಿಸಿ, ಗೌರವಿಸಿ ಅವರು ಸಮಾಜಕ್ಕೆ ಮತ್ತಷ್ಟು ಕೊಡುಗೆ ನೀಡುವಂತೆ ಗೌರವಿಸುವ ಮೂಲಕ ಬೆನ್ನು ತಟ್ಟುವ ಕೆಲಸವನ್ನು ಮಾಡಿರುವುದಾಗಿ ಹೇಳಿದರು.
ಟಿಎಂಎಸ್ಗೆ ನಾಡಿನ ಜನತೆ, ಸ್ಥಳೀಯ ಸಂಸ್ಥೆಗಳು, ಸರ್ಕಾರಗಳು, ಜನಪ್ರತಿನಿಧಿಗಳು, ಸರ್ವ ಸದಸ್ಯರುಗಳು ಶ್ರಮಿಸಿರುವುದನ್ನು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡು ಕೃತಜ್ಞತೆಗಳನ್ನು ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟಿಎಂಎಸ್ ನಿರ್ದೇಶಕರುಗಳಾದ ಭಾರತಿ ಶಿವರುದ್ರಪ್ಪ, ಆಶಾ ಹೇಮಂತ್, ಸುಧಾ ನಾಗೇಶ್, ಯಶೋಧ ಲಕ್ಷ್ಮಣ್ ಗೌಡ, ನೇತ್ರ ಅಣ್ಣಪ್ಪ ಉಪಸ್ಥಿತರಿದ್ದರು.
TMS foundation day celebration at Kalamandir