ಚಿಕ್ಕಮಗಳೂರು: ಕಣ್ಣಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ವೃದ್ದರು ಹಾಗೂ ಯುವ ಪೀಳಿಗೆ ಅತ್ಯಂತ ಕಾಳಜಿ ವಹಿಸುವುದು ಸೂಕ್ತ. ಸಮಯಕ್ಕೆ ತಪಾಸಣೆ ನಡೆಸಿ ಸುರಕ್ಷಿತವಾಗಿ ದೃಷ್ಟಿದೋಷ ದಿಂದ ಮುಕ್ತರಾಗಬೇಕು ಎಂದು ನೇಚರ್ ಕನ್ಸರ್ವೇಷನ್ ಟ್ರಸ್ಟ್ ಅಧ್ಯಕ್ಷ ಡಾ|| ಕೆ.ಸುಂದರಗೌಡ ಹೇಳಿದರು.
ನಗರದ ಅಂಡೆಛತ್ರ ಸಮೀಪ ಪ್ರಸಾದ್ ನೇತ್ರಾಲಯ, ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇಚರ್ ಕನ್ಸರ್ವೇಷನ್ ಟ್ರಸ್ಟ್ ಸಹಯೋಗದಲ್ಲಿ ಸಾಯಿ ಡೆಂಟಲ್ ಕೇರ್ನಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ನೇತ್ರ, ದಂತಕ್ಷಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಗರೀಕರ ನೇತ್ರ ಹಾಗೂ ದಂತ ಬಗ್ಗೆ ನಿಗಾವಹಿಸುವ ಸಂಬಂಧ ಜಿಲ್ಲೆಯಾದ್ಯಂತ ಸುಮಾರು ೬೦ಕ್ಕೂ ಹೆಚ್ಚು ತಪಾಸಣಾ ಶಿಬಿರ ಆಯೋಜಿಸಿದೆ. ವಯೋಸಹಜದಲ್ಲಿ ಕಣ್ಣಿನ ಪೊರೆಯಿಂದ ಬಳಲುತ್ತಿರುವ ವೃದ್ದ ರು ಅಸಡ್ಡೆ ಮಾಡದೇ ತಪಾಸಣೆ ನಡೆಸಿದರೆ ಪ್ರಾರಂಭದಲ್ಲೇ ಗುಣಮುಖರಾಗಬಹುದು ಎಂದರು.
ಕಣ್ಣು ಹಾಗೂ ದಂತ ಮನುಷ್ಯನ ದೇಹದ ಅವಿಭಾಜ್ಯ ಅಂಗಗಳು. ಕಣ್ಣು ಚಲನವಲನದ ಬಗ್ಗೆ ಕ್ಷಣಾ ರ್ಧದಲ್ಲಿ ಮಾಹಿತಿ ನೀಡಿದರೆ, ದಂತಗಳು ಆಹಾರ ಚೆನ್ನಾಗಿ ಅಗಿದು ಜೀರ್ಣಕ್ರಿಯೆಗೆ ಸಹಕರಿಯಾಗಿದೆ. ಪ್ರತಿ ಯೊಬ್ಬರು ಕೂಡಾ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಮಾನವಧರ್ಮ ಪಾಲಿಸಬೇಕು ಎಂದು ಹೇಳಿದರು.
ಸಮಾಜದಲ್ಲಿ ಕೆಲವರು ವೈಯಕ್ತಿಕ ಜೀವನ ಹಾಗೂ ಕುಟುಂಬವೆಂದೇ ಬದುಕಿ ಸ್ವಾರ್ಥದಿಂದ ಜೀವಿಸು ತ್ತಿದ್ದಾರೆ. ಉತ್ತಮ ಸಮಾಜ ನಿರ್ಮಿಸುವವರು ಅಪ್ಪಿ ಮುನ್ನೆಡೆದರೆ ಸಾತ್ವಿಕ ಬದುಕು ಹಾಗೂ ಅವಿಸ್ಮರಣೀಯ ವಾಗಿ ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಸ್ವಾರ್ಥ ಬದುಕಿಗೆ ಜೋತುಬೀಳದೇ, ಸಮಾಜಮು ಖಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸುನೀಲ್ ಮಾತನಾಡಿ ಪಂಚೇದ್ರಿಯಗಳಲ್ಲಿ ಕಣ್ಣು ಅಮೂಲ್ಯ ಅಂಗ. ಕಣ್ಣಿನ ಪೊರೆ, ನರದೌರ್ಬಲ್ಯ ಹಾಗೂ ದೂಳಿನಿಂದ ಕಣ್ಣನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗ ಬೇಕು. ನಿರ್ಲಕ್ಷ್ಯವಹಿಸಿದರೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಶಾಶ್ವತವಾಗಿ ಅಂಧತ್ವ ಆವರಿಸಬಹುದು ಎಂ ದು ಎಚ್ಚರಿಸಿದರು.
ಕಣ್ಣಿನಂತೆ ದಂತಗಳಿಗೆ ಪ್ರಮುಖ ಆದ್ಯತೆ ನೀಡಬೇಕು. ಪ್ರತಿನಿತ್ಯವು ಹಲ್ಲು ಉಜ್ಜಬೇಕು. ಮಧ್ಯಾಹ್ನ ಹಾ ಗೂ ರಾತ್ರಿಯ ಊಟದ ಬಳಿಕ ಬಾಯಿ ಮುಕ್ಕಣಿಸುವುದನ್ನು ರೂಢಿಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಸರ್ಕಾರ ಆರೋಗ್ಯದ ಬಗ್ಗೆ ಕೈಗೊಳ್ಳದ ಕಾರ್ಯವನ್ನು ಅನೇಕ ಸಂಸ್ಥೆಗಳು ಹೆಚ್ಚಿನ ಶ್ರಮವಹಿಸಿ ನಿರ್ವಹಿಸು ತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ವೈದ್ಯ ಡಾ|| ಸ್ನೇಹ ಮಾತನಾಡಿ ಆಧುನಿಕತೆ ಜೀವನದಲ್ಲಿ ಎಳೆವಯಸ್ಸಿನಲ್ಲೇ ರಕ್ತದೊತ್ತಡ, ಮಧು ಮೇಹದಂಥಹ ಕಾಯಿಲೆಗಳನ್ನು ಮನುಷ್ಯನನ್ನು ತುತ್ತಾಗಿದ್ದಾನೆ. ಮಧುಮೇಹ ಹೆಚ್ಚಳಗೊಂಡರೂ ಕೂಡಾ ಕಣ್ಣಿನ ಸಮಸ್ಯೆ ಉಲ್ಬಣಿಸಲಿದೆ. ಹೀಗಾಗಿ ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ನಿಗಧಿತ ಸಮಯಕ್ಕೆ ತಪಾಸಣೆ ಕೈಗೊಳ್ಳುವುದು ಮುಖ್ಯ ಎಂದರು.
ಇದೇ ವೇಳೆ ಶಿಬಿರದಲ್ಲಿ ಸುಮಾರು ೨೫ಕ್ಕೂ ಮಂದಿ ಭಾಗವಹಿಸಿ ತಪಾಸಣೆ ನಡೆಸಿದರು. ಈ ಪೈಕಿ ಮೂವರಿಗೆ ಕಣ್ಣಿನ ಸಮಸ್ಯೆ ಉಂಟಾಗಿರುವ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲು ತೀರ್ಮಾನಿಸಲಾಗಿದೆ.
ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಕೃಷ್ಣೇಗೌಡ, ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಆಮ್ಆದ್ಮಿ ಜಿಲ್ಲಾಧ್ಯಕ್ಷ ಲಿಂಗಾರಾಧ್ಯ, ಕಾರ್ಯದರ್ಶಿ ಈರೇಗೌಡ ಮತ್ತಿತರರಿದ್ದರು.
Free Ophthalmology-Dental Checkup Camp