ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ರಸ್ತೆಗಳಲ್ಲಿ ಅಪರೂಪದ ದೇಶಿ -ವಿದೇಶಿ ವಿಂಟೇಜ್ ಕಾರುಗಳು ಆಕರ್ಷಿಸುವ ಮೂಲಕ ನೋಡುಗರರ ಹಳೆಯ ನೆನಪುಗಳನ್ನು ಮೆಲುಕು ಹಾಕಿದರೆ, ಯುವಸಮೂಹಕ್ಕೆ ವಿಂಟೇಜ್ ಕಾರುಗಳು ವಿಭಿನ್ನ ರೀತಿಯ ಅನುಭವಗಳನ್ನು ನೀಡಿದವು.
ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಬೆಲ್ಜಿಯಂ, ಇಟಲಿ, ಜರ್ಮನಿ ದೇಶಗಳಿಂದ ಪೋರ್ಚೆ, ಬೆಂಜ್, ಫೆರಾರಿ, ಲ್ಯಾಂಬೋರ್ಗಿನಿ, ರೋಲ್ಸ್ ರಾಯ್ಸ್ ಸೇರಿದಂತೆ ೫೦ ರಿಂದ ೯೦ ವರ್ಷ ಹಳೆಯ ೨೦ಕ್ಕೂ ಹೆಚ್ಚು ವೆಂಟೇಜ್ ಕಾರುಗಳು ದಕ್ಷಿಣ ಭಾರತದ ಪ್ರವಾಸಕ್ಕೆ ಆಗಮಿಸಿದ್ದವು.
ರಾಜಧಾನಿ ಬೆಂಗಳೂರಿನಲ್ಲಿ ಪ್ರವಾಸವನ್ನು ಕೈಗೊಂಡ ವಿಂಟೇಜ್ ಕಾರುಗಳು ಹುಬ್ಬಳ್ಳಿ, ಹಂಪಿಯ ಪ್ರವಾಸವನ್ನು ಮುಗಿಸಿ ಕಾಫಿನಾಡಿನ ಸ್ವಿಲ್ವರ್ ಸೈ ರೆಸಾರ್ಟ್ನಲ್ಲಿ ತಂಗಿದ ಬಳಿಕ ಸೋಮವಾರ ಮಡಿಕೇರಿ ಜಿಲ್ಲೆಗೆ ಪ್ರವಾಸ ಮುಂದುವರೆಸಿದವು.
ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯಕ್ಕೆ ವಿದೇಶಿಗರು ಮಾರುಹೋಗಿದ್ದು ತುಂಬಾ ಅದ್ಭುತವಾದ ಂತಹ ಸ್ಥಳ ಎಂದು ಬಣ್ಣಿಸಿದ್ದಾರೆ. ಚಿಕ್ಕಮಗಳೂರು ಪ್ರವಾಸ ಮುಗಿಸಿ ಮಡಿಕೇರಿ, ಮೈಸೂರಿನ ಮೂಲಕ ವಾಪಸ್ ಬೆಂಗಳೂರಿಗೆ ತೆರಳಲಿದ್ದಾರೆ.
ರೆಸಾರ್ಟ್ ಮಾಲೀಕ ಚೇತನ್ ಮಾತನಾಡಿ ವಿಂಟೇಜ್ ಕಾರುಗಳ ತಂಡಗಳು ಪ್ರತಿ ವರ್ಷವು ಭಾರತಾ ದ್ಯಂತ ಪ್ರವಾಸ ಕೈಗೊಳ್ಳುತ್ತಾರೆ. ಅದರಂತೆ ಈ ಬಾರಿಯು ದಕ್ಷಿಣ ಪ್ರವಾಸ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆರಂಭಿಸಿದ್ದು ಸಚಿವ ಹೆಚ್ಕೆ.ಪಾಟೀಲ್ ಚಾಲನೆ ನೀಡಿದ ಬಳಿಕ ಅನೇಕ ಜಿಲ್ಲೆಗಳನ್ನು ಮುಗಿಸಿ ಕಾಫಿನಾಡಿಗೆ ಬಂದಿರುವುದು ಖುಷಿಯ ಸಂಗತಿ ಎಂದರು.
ನೂರಾರು ವರ್ಷಗಳ ವಿಂಟೇಜ್ ಕಾರುಗಳನ್ನು ಅಲ್ಲಲ್ಲಿ ಪ್ರದರ್ಶನದಲ್ಲಿ ಜಾಗದಲ್ಲಿ ಗಮನಿಸಿದ್ದೇವೆ. ಆದರೆ ಸಂಚರಿಸುವುದನ್ನು ಇದೇ ಮೊದಲು ಕಂಡಿದ್ದೇವೆ. ತಂತ್ರಜ್ಞಾನ ವೃದ್ದಿಕೊಂಡಂತೆ ಹೊಸ ಕಾರುಗಳು ಮಾರುಕಟ್ಟೆಯಲ್ಲಿವೆ. ಅಲ್ಲದೇ ೯೦ ವರ್ಷಗಳ ಇತಿಹಾಸವುಳ್ಳ ಪುರಾತನ ಕಾರುಗಳನ್ನು ನಗರದೆಲ್ಲೆಡೆ ಸಂಚರಿ ಸುತ್ತಿರುವುದು ಇನ್ನಷ್ಟು ಸಂತೋಷ ತಂದಿದೆ ಎಂದರು.
ಈ ವೇಳೆ ವಿಂಟೇಜ್ ಕಾರುಗಳ ವಿದೇಶಿ ಪ್ರವಾಸಿಗರು ಮಾತನಾಡಿ ಭಾರತದ ರಸ್ತೆಗಳು ವಿಭಿನ್ನ ಅನುಭವವನ್ನು ನೀಡುತ್ತಿವೆ ಎತ್ತರ, ಇಳಿಜಾರಿನಿಂದ ಕೂಡಿದ್ದು ನಮಗೆ ವಿಶೇ?ವಾಗಿವೆ ಎಂದಿದ್ದಾರೆ. ಈ ಊರಿನ ಹೆಸರು ಚಿಕ್ಕಮಗಳೂರು ಎಂದು ಹೇಳಿ ಸಂತಸಪಟ್ಟಿದ್ದಾರೆ.
Foreign Vintage Cars Collection in Kafinada