ಚಿಕ್ಕಮಗಳೂರು: ಸೀಳು ತುಟಿ, ಸೀಳು ಅಂಗುಳ ಮತ್ತು ಸುಟ್ಟ ಗಾಯಗಳಿಂದ ಉಂಟಾದ ವಿರೂಪಗಳಿಗೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಬಿ.ಜಿ ನಗರದಲ್ಲಿರುವ ಆದಿ ಚುಂಚನಗಿರಿ ಆಸ್ಪತ್ರೆಯಲ್ಲಿ ಡಿ. ೧ ರಿಂದ ಡಿ. ೧೩ರ ವರೆಗೆ ಉಚಿತ ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಆದಿ ಚುಂಚನಗಿರಿ ಸಮೂಹ ವಿದ್ಯಾಸಂಸ್ಥೆಗಳ ರಿಜಿಸ್ಟ್ರಾರ್ ಡಾ. ಸಿ.ಕೆ.ಸುಬ್ರಾಯ ತಿಳಿಸಿದರು.
ಅವರು ಇಂದು ಪತ್ರಿಕಾಗೊಷ್ಠಿಯಲ್ಲಿ ಈ ವಿಷಯ ತಿಳಿಸಿ ರೋಟರಿ ಬೆಂಗಳೂರು ಉತ್ತರ ಆರ್.ಐ.ಡಿ ೩೧೯೨ ಹಾಗೂ ರೋಟೋಪ್ಲಾಸ್ಟ್ ಇಂಟರ್ನ್ಯಾಷನಲ್ ಯು.ಎಸ್.ಎ ಇವರುಗಳು ಸಂಯುಕ್ತಾಶ್ರಯಲ್ಲಿ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಅಮೇರಿಕಾದ ನುರಿತ ೩೦ ತಜ್ಞವೈದ್ಯರ ತಂಡದಿಂದ ಶಸ್ತ್ರ ಚಿಕಿತ್ಸೆ ನೆಡೆಸಲಾಗುತ್ತಿದೆ ಈ ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ, ಔಷಧೋಪಚಾರ ಮತ್ತು ವಾರ್ಡ್ಗಳ ಸೌಲಭ್ಯ ಜೊತೆಗೆ ರೋಗಿಗಳ ಸಹಾಯಕ್ಕಾಗಿ ವಸತಿ, ಊಟದ ವ್ಯವಸ್ಥೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತಿದ್ದು ಕಳೆದ ೧೦ ವರ್ಷಗಳಿಂದ ಈ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಯಶಸ್ವಿಯಾಗಿ ನೆಡೆಸಿಕೊಂಡು ಬರಲಾಗುತ್ತಿದೆ ಎಂದರು.
ಈಗಾಗಲೇ ನೂರು ಜನರು ನೊಂದಾಯಿಸಿಕೊಂಡಿದ್ದು ಇನ್ನೂ ನೊಂದಾಯಿಸಿಕೊಳ್ಳಲು ಅವಕಾಶವಿದ್ದು ಇಲ್ಲಿಂದ ವಾಹನದ ವ್ಯವಸ್ಥೆ ಮಾಡಲಾಗುವುದು, ಹೆಚ್ಚಿನ ಮಾಹಿತಿಗೆ ೯೯೪೫೫೫೮೫೭೯, ೯೯೦೦೭೫೮೯೪೬, ೭೯೭೫೧೦೨೯೮೨, ೦೮೨೩೪-೨೮೭೫೭೫, ೨೮೭೦೧೧ ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಐಟಿ ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ, ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್ ಉಪಸ್ಥಿತರಿದ್ದರು.
Free cleft lip surgery camp from December 1 to 13