ಚಿಕ್ಕಮಗಳೂರು: ದೇವಾಂಗ ಸಂಘದ ಕಟ್ಟಡ ಕಾಮಗಾರಿಗೆ ೧೦ ಲಕ್ಷ ರೂ.ಅನುದಾನ ನೀಡುವುದಾಗಿ ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದರು.
ಅವರು ಭಾನುವಾರ ನಗರದ ಶ್ರೀ ಬನಶಂಕರಿ ಮಹಿಳಾ ಸಂಘದ ೨೫ ನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಭಾರತ ಅತಿ ಹೆಚ್ಚು ಸಂಸ್ಕೃತಿ, ಸಂಸ್ಕಾರವನ್ನ ಅನುಸರಿಸುವ ದೇಶ. ನಮ್ಮ ಬದುಕಿನ ಜಂಜಾಟದ ನಡುವೆ ಅರ್ಧಗಂಟೆಗಳ ಕಾಲ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಮಾಡುವುದರಿಂದ ನೆಮ್ಮದಿ ಸಿಗುತ್ತದೆ ಎಂದರು.
ಎಲ್ಲರೂ ಬಾದಾಮಿಯಲ್ಲಿರುವ ಶ್ರೀ ಬನಶಂಕರಿ ಅಮ್ಮನವರ ಕ್ಷೇತ್ರಕ್ಕೆ ಭೇಟಿ ನೀಡಬೇಕು. ಅಲ್ಲಿ ದೇವಾಂಗ ಸಮುದಾಯದ ಜಗದ್ಗರುಗಳಾದ ದಯಾನಂದ ಪುರಿ ಅವರ ಮಠವೂ ಇದೆ. ಅಲ್ಲಿಗೂ ಭೇಟಿ ಮಾಡಿ ಗುರುಗಳ ಆಶೀರ್ವಾದ ಪಡೆಯಬೇಕು ಎಂದರು. ಬನಶಂಕರಿ ಮಹಿಳಾ ಸಂಘದ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು. ಯುವ ಸದಸ್ಯರನ್ನು ಹೆಚ್ಚಾಗಿ ಸದಸ್ಯರನ್ನಾಗಿ ಮಾಡಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ತಂದೆ, ತಾಯಂದಿರನ್ನು ವೃದ್ಧಾಶ್ರಮಕ್ಕೆ ಬಿಡುವ ಸಂಸ್ಕೃತಿ ಸರಿಯಲ್ಲ. ಇದು ಶ್ರೀಮಂತ ಕುಟುಂಬಗಳಲ್ಲೇ ಹೆಚ್ಚಾಗಿದೆ ಇದು ವಿಷಾಧನೀಯ ಎಂದರು. ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ. ದೇವಾಂಗ ಸಮಾಜದ ಚಿತ್ರನಟಿ ಉಮಾಶ್ರೀ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಕೆಲಸ ಮಾಡಿದ್ದರು. ಮತ್ತೆ ಅವರನ್ನ ನಮ್ಮ ಸರ್ಕಾರ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದೆ. ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡಬೇಕು ಎಂದರು.
ಶ್ರೀ ಬನಶಂಕರಿ ಮಹಿಳಾ ಸಂಘದ ಅಧ್ಯಕ್ಷೆ ಸುವರ್ಣಾ ಕೇಶವ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಬನಶಂಕರಿ ಸಂಘವು ೨೦ ಮಹಿಳಾ ಸದಸ್ಯರ ಮುಖಾಂತರ ಪ್ರಾರಂಭವಾಗಿ ಇಂದು ೪೦೦ ಕ್ಕೂ ಸಂಘದ ಸದಸ್ಯರು ಇದ್ದಾರೆ, ಸಂಘದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ, ಕ್ರೀಡಾಕೂಟ, ಯೋಗಭ್ಯಾಸ ಕಾರ್ಯಕ್ರಮಗಳನ್ನು ನೆಡೆಸಲಾಗಿದೆ, ಸಂಘದ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಸಹಕರಿಸುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಸಂಘಕ್ಕೆ ಸ್ವಂತ ನಿವೇಶನ ಹೊಂದಲು ಆಲೋಚಿಸಲಾಗಿದೆ,
ಶಾಸಕರು ಇದಕ್ಕೆ ಸಹಕರಿಸುವಂತೆ ತಿಳಿಸಿದರು.ಸಂಸ್ಥಾಪಕ ಅಧ್ಯಕ್ಷೆ ಕಮಲಮ್ಮ ರಾಮಯ್ಯ ಸಮಾರಂಭವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದೇವಾಂಗ ಸಂಘದ ಜಿಲ್ಲಾಧ್ಯಕ್ಷ ಕೆ. ಶ್ರೀನಿವಾಸ್, ದೇವಾಂಗ ಸಂಘದ ಅಧ್ಯಕ್ಷ ಭಗವತಿ ಹರೀಶ್, ಪ್ರಧಾನ ಕಾರ್ಯದರ್ಶಿ ಟಿ. ತ್ಯಾಗರಾಜ್, ನಗರಸಭೆ ಸದಸ್ಯೆ ದೀಪಾರವಿಕುಮಾರ್, ಬನಶಂಕರಿ ಮಹಿಳಾ ಸಂಘದ ಉಪಾಧ್ಯಕ್ಷೆ ರಾಧಾ ರಾಜ್ಕುಮಾರ್, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀಗೋಕುಲ್, ಸಹ ಕಾರ್ಯದರ್ಶಿಗಳಾದ ಮಂಜುಳಾಪುಟ್ಟರಾಜು, ಭಾಗ್ಯಮೋಹನ್, ಖಜಾಂಚಿಗಳಾದ ಶ್ಯಾಮಲಾರಾಜು, ರತ್ನರವಿಕುಮಾರ್ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
25th Anniversary Celebration of Sri Banashankari Women’s Association