ಚಿಕ್ಕಮಗಳೂರು: ನಗರದ ವಾರ್ಡ್ ಸಂಖ್ಯೆ ೨೩ ದಂಟರಮಕ್ಕಿ ಗ್ರಾಮದಲ್ಲಿ ಅಕ್ರಮವಾಗಿ ನಗರಸಭೆ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಹಾಗೂ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಾರಾಯಣ ಕನಕರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ದಂಟರಮಕ್ಕಿ ಗ್ರಾಮದ ವಾಸಿಗಳಾದ ಶ್ರೀಮತಿ ರೇವಮ್ಮ ಕೋಂ. ನಾಗರಾಜ್ ಮತ್ತು ಶ್ರೀಮತಿ ಗಂಗಮ್ಮ ಕೋಂ. ದೇವರಾಜ್ ಆದ ನಾವು ದಂಟರಮಕ್ಕಿ, ಕೆರೆಕೋಡಮ್ಮ ಬೀದಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಮತ್ತು ಚರಂಡಿಗೆ ನಗರಸಭೆಯಿಂದ ಜಾಗ ಬಿಟ್ಟು ಕೊಟ್ಟಿದ್ದು, ಅದನ್ನು ಅಕ್ರಮವಾಗಿ ಇದೇ ಗ್ರಾಮದ ವಾಸಿಗಳಾದ ಶಿವಕುಮಾರ್ ಬಿನ್ ದಾಸಯ್ಯ, ಸೋಮಮ್ಮ ಕೋಂ. ಜನಾರ್ಧನ, ಪರಮೇಶ ಬಿನ್ ಚಿಕ್ಕಯ್ಯ, ಪ್ರೇಮ ಕೋಂ. ಧರ್ಮೇಂದ್ರ, ಚೆನ್ನಮ್ಮ ಕೋಂ. ರಾಜಣ್ಣ, ದಾಸಪ್ಪ ರಂಗಪ್ಪ ರತ್ನಮ್ಮ ಕೋಂ. ಗಂಗಾಧರ ಇವರುಗಳು ಈ ಜಾಗ ನಮಗೆ ಸೇರಿದೆ ಎಂದು ಚರಂಡಿ ಮತ್ತು ರಸ್ತೆಗಾಗಿ ಮನೆ ನಿರ್ಮಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಚರಂಡಿಯ ಕೊಳಚೆ ಹರಿದು ಹೋಗಲು ಅಡ್ಡಿಯಾದ ಕಾರಣ ನಿಂತ ಕೊಳಚೆ ನೀರಿನಿಂದ ದುರ್ವಾಸನೆ ಬರುತ್ತದೆ. ಹಾಗೂ ಕೊಳಚೆ ಹರಿದು ಹೋಗಲು ಅಡ್ಡಿಯಾದ ಕಾರಣ ನಿಂತ ಕೊಳಚೆ ನೀರಿನಿಂದ ದುರ್ವಾಸನೆ ಬರುತ್ತದೆ. ಹಾಗೂ ಸೊಳ್ಳೆಗಳಿಂದ ಅಕ್ಕ ಪಕ್ಕದ ಸುಮಾರು ೨೫-೩೦ ಕುಟುಂಬಗಳು ತೊಂದರೆ ಅನುಭವಿಸುವಂತಾಗಿದೆ ಕೊಳಚೆ ನೀರಿನ ಅಸಹನೀಯ ದುರ್ವಾಸನೆಯಿಂದ ಮನೆಯಲ್ಲಿ ವಾಸ ಮಾಡಲು ಮತ್ತು ಆಹಾರ ಸೇವನೆ ಮಾಡಲು ಆಗದೆ ತುಂಬಾ ತೊಂದರೆಯಾಗಿದೆ ಎಂದು ತಿಳಿಸಿದರು.
ಕೊಳಚೆ ನೀರಿನಿಂದ ಅಕ್ಕ ಪಕ್ಕದಲ್ಲಿರುವ ಮನೆಗಳ ಗೋಡೆ ಶಿಥಿಲವಾಗಿ ಮಳೆಗಾಲದಲ್ಲಿ ಕುಸಿಯುವ ಬೀತಿ ಇರುತ್ತದೆ. ಈ ಹಿಂದೆ ನಗರಸಭೆಗೆ ಹಲವಾರು ಬಾರಿ ದೂರು ಸಲ್ಲಿಸಿದ್ದು, ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳದೆ ಸಬೂಬು ಹೇಳಿಕೊಂಡು ಬಂದಿದ್ದು, ಇದರಿಂದ ನಮ್ಮ ಕುಟುಂಬಗಳಿಗೆ ಕೊಳಚೆ ನೀರಿನಿಂದ ದುರ್ವಾಸನೆಯಲ್ಲಿ ಜೀವನ ನಡೆಸುವಂತಾಗಿ ನಾವುಗಳು ತುಂಬಾ ನೊಂದಿದ್ದೇವೆ ಎಂದಿದ್ದಾರೆ.
ತಾವುಗಳು ದಯವಿಟ್ಟು ನಗರ ಸಭೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿ ರಸ್ತೆ ಮತ್ತು ಚರಂಡಿ ನೀರು ಹೋಗದಂತೆ ಮಾಡಿರುವ ಇವರುಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಚರಂಡಿ ಮತ್ತು ಕೊಳಚೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿಕೊಡಲು ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಕ್ರಮಕೈಗೊಳ್ಳುವಂತೆ ಆದೇಶ ಮಾಡಿಕೊಡಬೇಕೆಂದು ಈ ಮೂಲಕ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಿಡಿಎ ಮಾಜಿ ಸದಸ್ಯ ರಾಜಕುಮಾರ್ ಗ್ರಾಮಸ್ಥರಾದ ಡಿ.ಇ ಹರೀಶ್, ಕುಮಾರ, ಗೌರಮ್ಮ, ಸೋಮಮ್ಮ, ಗಂಗಮ್ಮ, ರೇವಮ್ಮ, ಮಲ್ಲೇಶ್, ನಾಗರಾe, ಮುತ್ತಮ್ಮ ಮತ್ತಿತರಿದ್ದರು.
Appeal for appropriate action against illegal house construction