ಚಿಕ್ಕಮಗಳೂರು: ನಗರದ ಕಲ್ಕಟ್ಟೆ ಪುಸ್ತಕದ ಮನೆಯ ೨೧ ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಡಿ.೧ ರಂದು ಶ್ರೀ ದೇವೀರಮ್ಮ ನೃತ್ಯ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹರಿಓಂ ಬಿಲ್ಡರ್ಸ್ ಮುಖ್ಯಸ್ಥ ಜಿ.ರಮೇಶ್ ಹೇಳಿದರು.
ಕಲ್ಕಟ್ಟೆಪುಸ್ತಕದ ಮನೆ, ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್, ಹರಿಓಂ ಬಿಲ್ಡರ್ಸ್ ಸಹಯೋಗದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಸಂಜೆ ೬ ಗಂಟೆಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿದುಷಿ ಜ್ಯೋತಿಪ್ರಕಾಶ್ ನೇತೃತ್ವದ ನೂಪುರ ಅಕಾಡೆಮಿ ಫಾರ್ ಫರ್ಫಾರ್ಮಿಂಗ್ ಆರ್ಟ್ಸ್ ತಂಡದ ೪೦ ಕಲಾವಿದೆಯರು, ಶ್ರೀ ದೇವೀರಮ್ಮ ಕುರಿತಾಗಿ ಎಚ್.ಎಂ. ನಾಗರಾಜ್ರಾವ್ ಕಲ್ಕಟ್ಟೆ ರಚಿಸಿ ಸಂಗೀತ ನೀಡಿದ ಭಕ್ತಿಗೀತೆಗಳಿಗೆ ನೃತ್ಯ ಮಾಡಲಿದ್ದಾರೆ. ಮೈಸೂರಿನ ನೃತ್ಯ ವಿದುಷಿ ಕಾತ್ಯಾಯಿನಿ ಭರತನಾಟ್ಯ ನೆರವೇರಿಸಿಕೊಡಲಿದ್ದಾರೆ ಎಂದರು.
ಕಲ್ಕಟ್ಟೆ ಪುಸ್ತಕದ ಮನೆಯ ವಾರ್ಷಿಕ ಪುರಸ್ಕಾರ ಕಲ್ಕಟ್ಟೆ ಕನ್ನಡಿಗ ಪ್ರಶಸ್ತಿಯನ್ನು ಅಮೆರಿಕಾದಲ್ಲಿ ಕನ್ನಡದ ಸೇವೆ ಮಾಡುತ್ತಿರುವ ಚಿಕ್ಕಮಗಳೂರಿನ ರಘು ಹಾಲೂರು ಅವರಿಗೆ ಹಾಗೂ ಕಲ್ಕಟ್ಟೆ ಕನ್ನಡತಿ ಪ್ರಶಸ್ತಿಯನ್ನು ಜ್ಯೋತಿ ಪ್ರಕಾಶ್ ಅವರಿಗೆ ಪ್ರದಾನ ಮಾಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಆಧ್ಯಾತ್ಮ ಪಥಿಕ ಚಂದ್ರಶೇಖರ್ಭಟ್ ಗುರ್ಜರ್, ಡಾ.ಜೆ.ಪಿ.ಕೃಷ್ಣೇಗೌಡ, ಡಾ.ಪುಟ್ಟಾನಾಯ್ಕ, ಡಾ.ಸಿ.ಕೆ.ಸುಬ್ಬರಾಯ, ಗುರುಮೂರ್ತಿ, ನಟರಾಜ್, ಕುಲಶೇಖರ್, ನಾಗರಾಜ್, ಸುರೇಂದ್ರಶೆಟ್ಟಿ , ರೇಖಾನಾಗರಾಜ್ರಾವ್ ಭಾಗವಹಿಸಲಿದಾರೆ ಎಂದು ಹೇಳಿದರು.
Srideviramma Nrityanamana at Kuvempu Kalamandira on December 1st