ಚಿಕ್ಕಮಗಳೂರು: ಇತ್ತೀಚೆಗೆ ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕ ಶ್ರೀನಾಥ್ ಅಪಘಾತದಲ್ಲಿ ನಿಧನರಾದ ವಿಚಾರಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪವೆಸಗಿರುವ ಡಿ.ಪೋ ವ್ಯವಸ್ಥಾಪಕರು ಮತ್ತು ಮ್ಯಕ್ಯಾನಿಕ್ರನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಡಿ .೪ರಂದುವಿಭಾಗೀಯ ನಿಯಂತ್ರಣ ಅಧಿಕಾರಿ ಕಛೇರಿ ಮುಂದೆ ಆಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಲು ತೀರ್ಮಾನಿಸಲಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮರ್ಲೆ ಅಣ್ಣಯ್ಯ ಹೇಳಿದರು.
ನಗರದಲ್ಲಿಂದು ಕರೆದಿದ್ದಸುದಿಗೋಷ್ಟಿಯಲ್ಲಿ ಮಾತನಾಡಿದ ಅವರು ಚಿಕ್ಕಮಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಕೆಎಸ್ ಆರ್ ಟಿ ಸಿಬಸ್ಸು ಮಾರ್ಗ ಮಧ್ಯೆ ಹೊಳೆನರಸೀಪುರ ಹತ್ತಿರ ಸುಮಾರು ಬೆಳಿಗ್ಗೆ ೮.೩೦ ರಲ್ಲಿ ಕೆಟ್ಟು ನಿಂತು ಚಿಕ್ಕಮಗಳೂರು ಡಿಪೋಕ್ಕೆ ದೂರು ನೀಡಿದರೂ ಸಂಜೆ ೫ ಗಂಟೆ ಯಾದರೂ ಮ್ಯಾಕನಿಕ್ರವರನ್ನು ಮ್ಯಾನೇಜರ್ ರವರು ಕಳಿಸದೆ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಆರೋಪಿಸಿದರು.
೫ ಗಂಟೆಯ ನಂತರ ಬಂದ ಮ್ಯಾಕನಿಕ್ ರಿಪೇರಿ ಮಾಡುತ್ತಿರುವಾಗ ಸಂಜೆ ೮ ಗಂಟೆ ಸಮಯದಲ್ಲಿ ಮ್ಯಾಕನಿಕ್ ಶ್ರೀನಾಥ್ರವರಿಗೆ ಟೂಲ್ಸ್ ತರಲು ಹೇಳಿದ್ದು ಬಸ್ಸಿನಿಂದ ಇಳಿಯುವಾಗ ಯಾವುದೋ ವಾಹನ ಅವರ ಮೇಲೆ ಹತ್ತಿಸಿಕೊಂಡು ಹೋಗಿದ್ದು ಶ್ರೀಕಾಂತ್ ಸ್ಥಳದಲ್ಲೆ ಮೃತ ಪಟ್ಟಿದ್ದಾರೆ ಈಸಂದರ್ಭದಲ್ಲಿ ಮ್ಯಕ್ಯಾನಿಕ ಸಹ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಡಿಪೋ ಹತ್ತಿರ ಕುಟುಂಬದವರೊಂದಿಗೆ ಎಲ್ಲಾ ದಲಿತ ಪ್ರಗತಿಪರ ಸಂಘಟನೆಗಳು ಸೇರಿ ಶ್ರೀನಾಥ್ ಕುಟುಂಬಕ್ಕೆ ನ್ಯಾಯ ಕೊಡಿಸಲು ಪ್ರತಿಭಟನೆ ಮಾಡಿದ್ದು ಕರ್ತವ್ಯ ಲೋಪ ಮಾಡಿರುವ ಡಿಪೋ ಮ್ಯಾನೇಜರ್ ಹಾಗೂ ಮ್ಯಾಕನಿಕ್ ಮುಖ್ಯಸ್ಥ ಪರಮೇಶ್ವರಪ್ಪ ಇವರ ಮೇಲೆ ಕ್ರಮ ಮಾಡಲು ಒತ್ತಾಯ ಮಾಡುವುದಾಗಿ ಸ್ಥಳಕ್ಕೆ ಬಂದ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಪ್ರತಿಭಟನೆ ನಡೆದಲಾಗುತ್ತಿದೆ ಎಂದು ಹೇಳಿದರು.
ದಲಿತಸಂಘರ್ಷಸಮಿತಿಯ ರಾಜ್ಯ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಮಾತನಾಡಿ ಅಪಘಾತ ಸ್ಥಳಕ್ಕೆ ಅಧಿಕಾರಿಗಳ್ಯಾರು ಬಾರದೆ ,ಸಾಕ್ಷನಾಶಗೊಳಿಸಲು ಏಕಾಏಕಿಯಾಗಿ ಬಸ್ಸನ್ನು ಕ್ರೈನ್ ತರಿಸಿ ತೆಗೆದು ಕೊಂಡು ಹೋಗಿರುತ್ತಾರೆ. ಅಪಘಾತವಾಗಿ ೨೪ ಗಂಟೆಯಾದರು ಮೃತದೇಹ ಸಂಬಂಧಿಕರಿಗೆ ಹಸ್ತಾಂತರಿಸದೆ ಅನಾಥವಾಗಿ ಆಸ್ಪತ್ರೆಯಲ್ಲಿಯೇ ಬಿಡಲಾಗಿತ್ತು ಎಂದು ದೂರಿದರು. ಮೇಲಾಧಿಕಾರಿಗಳು ನೀಡಿದ ಭರವಸೆಯಂತೆ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾದ ದಲಿತಸಂಘಟನೆಗಳಿಗೆ ರಾಜ್ಯ ನಾಯಕರುಗಳಿಂದ ಒತ್ತಡ ಹೇರಿ ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆಎಂದು ಆರೋಪಿಸಿದರು.
ದೌರ್ಜನ್ಯಸಮಿತಿ ಸದಸ್ಯ ಹುಣಿಸೆಮಕ್ಕಿ ಲಕ್ಷ್ಮಣ್ ಮಾತನಾಡಿ ನಗರದ ಬಸ್ ಡಿಪೋದಲ್ಲಿರುವ ಬಸ್ಗಳು ಸಂಪೂರ್ಣಶಿಥಿಲಾವಸ್ಥೆ ತಲುಪಿದ್ದು, ಕೂಡಲೆ ಹೊಸಬಸ್ ಗಳನ್ನು ಬಿಡಿಸಲು ಸ್ಥಳಿಯ ಜನಪ್ರತಿನಿಧಿಗಳು ಕ್ರಮವಹಿಸಬೇಕೆಂದು ಒತ್ತಾಯಿಸಿದರು. ಗೋಷ್ಟಿಯಲ್ಲಿ ಬೀಮ್ ಆರ್ಮಿಯ ಹೊನ್ನೇಶ್,ಸಂತೋಷ್,ಹರೀಶ್ ಇತರರಿದ್ದರು.
Day and night sit-in in front of the Divisional Control Officer’s office