ಚಿಕ್ಕಮಗಳೂರು: ನಗರದ ಕಲೊಡ್ಡಿ , ಇಂದಿರಾಗಾಂ ಬಡಾವಣೆ, ಶಾಂತಿನಗರದಲ್ಲಿ ನಿವೇಶನ ರಹಿತರು ಯಾರಿದ್ದಾರೆ ಅವರಿಗೆ ನಿವೇಶನ ಒದಗಿಸಬೇಕು. ಹಕ್ಕುಪತ್ರ ಇಲ್ಲದವರಿಗೆ ಹಕ್ಕುಪತ್ರ ಕೊಡಿಸುವ ಬಗ್ಗೆ ಆಶ್ರಯ ಸಮಿತಿ ಸಭೆಯಲ್ಲಿ ತೀರ್ಮಾನ ತಗೆದುಕೊಂಡಿರುವುದಾಗಿ ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರಸಭೆಯಲ್ಲಿ ನಡೆದ ಆಶ್ರಯ ಸಮಿತಿ ಸಭೆಯ ಮಾತನಾಡಿ,ಮೊದಲು ಬಡವರಿಗೆ ನಿವೇಶನ ನೀಡಬೇಕು, ಮನೆ ಕಟ್ಟಿಕೊಂಡು ಹಕ್ಕುಪತ್ರ ಇಲ್ಲದವರು ಯಾರಿದ್ದಾರೆ ಅವರಿಗೆ ಹಕ್ಕುಪತ್ರ ಕೊಡಿಸುವ ಬಗ್ಗೆ ಹಾಗೂ ನಿವೇಶನ ಇಲ್ಲದವರಿಗೆ ಶೀಘ್ರದಲ್ಲಿ ನಿವೇಶನ ಒದಗಿಸಬೇಕು. ಹಕ್ಕುಪತ್ರ ಕೊಡಿಸಲು ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂಬ ತೀರ್ಮಾನ ಮಾಡಿದ್ದೇವೆ ಎಂದರು.
೧೫೧೧ ಜಿ-ಪ್ಲಸ್ ೨ ಮನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಕೊಡುವ ಬಗ್ಗೆ ನಿರ್ಣಯಿಸಿದ್ದೇವೆ. ೨೯೪ ಜನ ೯೪ ಸಿಸಿ ಅಡಿ ಅರ್ಜಿ ಕೊಟ್ಟಿದ್ದಾರೆ. ಸ್ಥಳಪರಶೀಲಿಸಿ ಜಿಲ್ಲಾಕಾರಿಗಳ ಮೂಲಕ ಅವರಿಗೂ ಹಕ್ಕುಪತ್ರ ಕೊಡಿಸುವ ಕೆಲಸ ಮಾಡಲಿದ್ದೇವೆ ಎಂದರು.
ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಆಯುಕ್ತ ಬಸವರಾಜು, ಆಶ್ರಯ ಸಮಿತಿ ಸದಸ್ಯರಾದ ಫಯಾಜ್, ಯಶೋಧಮ್ಮ, ಪ್ರಸಾದ್ ಅಮೀನ್, ಮಧು ಮತ್ತಿತರೆ ಅಕಾರಿಗಳು ಉಪಸ್ಥಿತರಿದ್ದರು.
Shelter Committee meeting held at the Municipal Council