ಚಿಕ್ಕಮಗಳೂರು: ಬಾಲಗಂಗಾಧರನಾಥ ಶ್ರೀಗಳ ಮುಂದಾಲೋಚನೆಯಿಂದ ವಿದ್ಯಾ ರ್ಥಿಗಳು ದೇಶದ ಪ್ರತಿಷ್ಟಿತ ಕಂಪನಿ, ಸರ್ಕಾರಿ ಕೆಲಸ ಸೇರಿದಂತೆ ವಿವಿಧ ಕ್ಷೇತ್ರದ ಉದ್ಯೋಗದಲ್ಲಿ ತೊಡಗಿಸಿ ಕೊಂಡು ಗಣನೀಯ ಸೇವೆ ಸಲ್ಲಿಸುತ್ತಿದೆ ಎಂದು ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣ ನಾಥ ಸ್ವಾಮೀಜಿ ಹೇಳಿದರು.
ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ಧ ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ಘಾಟಿಸಿ ಭಾನುವಾರ ಅವರು ಆರ್ಶೀವಚನ ನೀಡಿ ಸಮಾಜದಲ್ಲಿ ಕೆಲವು ಮಕ್ಕಳ ನ್ಯೂನ್ಯತೆ ಹಾಗೂ ಅಸಹಾಯತೆ ಮನಗಂಡ ಶ್ರಿಗಳು ಅಂಧಮಕ್ಕಳ ಶಾ ಲೆಯನ್ನು ಸ್ಥಾಪಿಸಿದರು. ಕಾಲ ಉರುಳಿದಂತೆ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಪ್ರಪ್ರಥಮವಾಗಿ ಇಂಜಿನಿಯರ್ ಕಾಲೇಜು ಸ್ಥಾಪಿಸಿ ಆರಂಭದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ಅವಕಾಶ ಕಲ್ಪಿ ಸಿಕೊಟ್ಟರು ಎಂದರು.
ರಾಜ್ಯದ ಮಕ್ಕಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಸಲುವಾಗಿ ವಿದ್ಯಾಕ್ಷೇತ್ರದಲ್ಲಿ ತಮ್ಮ ದೇ ಕೊಡುಗೆ ನೀಡಿರುವ ಆದಿಚುಂಚನಗಿರಿ ಟ್ರಸ್ಟ್ ಇಡೀ ದೇಶದಲ್ಲೇ ಗುಣಮಟ್ಟದ ಕಾಲೇಜು ಎಂಬುದಾಗಿ ಪ್ರತೀತಿ ಪಡೆದುಕೊಂಡಿದೆ ಎಂದ ಅವರು ಇಲ್ಲಿನ ವಿದ್ಯಾರ್ಥಿಗಳು ಅಬ್ದುಲ್ಕಲಾಂ ಹಾಗೂ ಪ್ರತಿಷ್ಟಿತ ಕಂಪ ನಿಗಳ ಜೊತೆಗೂಡಿ ಕಾರ್ಯನಿರ್ವಹಿಸಿ ಛಾಪು ಮೂಡಿಸಿದ್ದಾರೆ ಎಂದು ಹೇಳಿದರು.
೮೦ರ ಕಾಲಘಟ್ಟದಲ್ಲಿ ವಿದ್ಯಾರ್ಹತೆ ಪೂರೈಸಿ ಇದೀಗ ಸಮಾವೇಶಕ್ಕೆ ಆಗಮಿಸಿರುವ ಹಿರಿಯ ವಿದ್ಯಾರ್ಥಿ ಗಳ ಶರೀರಕ್ಕೆ ವಯಸ್ಸಾಗಿದೆ ಹೊರತು, ಮನಸ್ಸು ಸಂತೋಷದಿಂದ ಕೂಡಿದೆ. ಅಂದಿನ ನೆನಪುಗಳನ್ನು ಪರ ಸ್ಪರ ಹಂಚಿಕೊಂಡು ಮೆಲುಕು ಹಾಕುತ್ತಿರುವುದು ಅವಿಸ್ಮರಣೀಯ ಎಂದು ತಿಳಿಸಿದರು.
ಹಳೇ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವ ನಿಟ್ಟಿನಲ್ಲಿ ಶ್ರೀಗಳ ಕನಸಾಗಿದ್ಧ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ಜರುಗಿದೆ. ಮುಂಬರುವ ದಿನಗಳಲ್ಲಿ ಭವನ ಪೂರ್ಣಗೊಳಿಸಿ ಆಯಾ ಸಾಲಿನಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಒಟ್ಟಾಗಿಸಿ ಸ್ನೇಹ ಮಿಲನದಂಥ ಕಾರ್ಯಕ್ರಮ ಆಯೋಜಿಸಲು ಸಹಕಾರಿಯಾಗಲಿದೆ ಎಂ ದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಜನೆ ಪೂರೈಸಿ, ವೈಯಕ್ತಿಕ ಜೀವನ ನಿರ್ವಹಿಸಿದರೆ ಸಾಲದು. ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಮನುಷ್ಯರ ನಡುವೆ ಉದ್ಬವಿಸಿರುವ ಭಿನ್ನಾಭಿಪ್ರಾಯದ ಗೋಡೆಗಳನ್ನು ಕೆಡವಿ, ಸಾಮರಸ್ಯದಿಂದ ಕೂಡಿ ಬಾಳುವ ಸಂಸ್ಕೃತಿ ಅಳವಡಿಸಿಕೊಂಡು ಮುನ್ನೆಡೆದರೆ ಮಾನವರಾಗಿ ಹುಟ್ಟಿ ದ್ದಕ್ಕೂ ಸಾರ್ಥಕ ಎಂದು ಹೇಳಿದರು.
ಎಐಟಿ ಕಾಲೇಜಿನ ರಿಜಿಸ್ಟರ್ ಡಾ|| ಸಿ.ಕೆ.ಸುಬ್ಬರಾಯ ಮಾತನಾಡಿ ಕಾಲೇಜು ೮೦ರ ದಶಕದಲ್ಲಿ ನಗರದ ವಿಜಯಪುರ ಬಡಾವಣೆಯಲ್ಲಿ ಪ್ರಥಮವಾಗಿ ಆರಂಭಗೊಂಡಿತು. ಒಂದೇ ಕೊಠಡಿಯಲ್ಲಿ ಶಿಕ್ಷಕರು, ವಿದ್ಯಾ ರ್ಥಿಗಳು ತಂಗುವುದು, ಪಾಠಪ್ರವಚನ ನಡೆಯತ್ತಿತ್ತು. ಇದೀಗ ಬೃಹದಾಕಾರವಾಗಿ ಬೆಳೆದು ರಾಜ್ಯಾದ್ಯಂತ ಲಕ್ಷಗಟ್ಟಲೇ ಮಕ್ಕಳಿಗೆ ವಿದ್ಯಾದಾನ ಒದಗಿಸಲು ಮುಂದಾಗಿದೆ ಎಂದು ಹೇಳಿದರು.
ಜಿ.ಪಂ. ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ಬೆಳ್ಳೂರಿನಲ್ಲಿ ಮಹಾಸಂಸ್ಥಾನ ಮಠವನ್ನು ಶ್ರೀ ಗಳು ಹೊಂದಿದ ಬಳಿಕವು ಚಿಕ್ಕಮಗಳೂರಿನಲ್ಲಿ ತಾಂತ್ರಿಕ ಕಾಲೇಜು ಸ್ಥಾಪಿಸಿದ ಪರಿಣಾಮ ಅಂದು ೧೨೦ಕ್ಕೂ ವಿದ್ಯಾರ್ಥಿಗಳು ದಾಖಲಾಗುವ ಜೊತೆಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಗೊಂಡು ಜಿಲ್ಲಾ ಮಟ್ಟ ದಲ್ಲಿ ಮನ್ನಣೆ ಗಳಿಸಿರುವುದು ಸುಲಭದ ಮಾತಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಟಿ ಪ್ರಾಂಶುಪಾಲ ಡಾ|| ಸಿ.ಟಿ.ಜಯದೇವ್ ದೇಶ ವಿದೇಶಗಳಲ್ಲಿ ಉದ್ಯೋಗದಲ್ಲಿ ತೊಡಗಿರುವ ಹಳೇ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಪರಸ್ಪರ ಸಮಾ ಲೋಚನೆ, ಹಳೆಯ ನೆನಪು ಮೆಲುಕು ಹಾಗೂ ಕಾಲೇಜಿನಲ್ಲಿ ಕಳೆದ ತುಂಟಾಟಗಳನ್ನು ಸ್ಮರಿಸಲು ಪ್ರತಿವರ್ಷ ವು ಸಂಸ್ಥೆ ಸ್ನೇಹ ಮಿಲನ ಹಮ್ಮಿಕೊಳ್ಳುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಎಐಟಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ|| ಜಿ.ಎಂ.ಸತ್ಯನಾರಾಯಣ್, ೮೦ರ ದಶಕದ ಹಿರಿಯ ವಿದ್ಯಾರ್ಥಿಗಳಾದ ನರಸಿಂಹ ಬಾಲಿಗ, ಜರ್ಡೀನ್ ಡೀಸೋ ಜಾ, ಸಹನಗೌಡ, ಗುರುದೇವ್, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.
Senior students’ conference held at Adichunchanagiri Technical College