ಚಿಕ್ಕಮಗಳೂರು: ಗ್ರಾಮೀಣ ಪ್ರದೇಶದಿಂದ ಬಂದ ತನ್ನನ್ನು ಗುರುತಿಸಿ ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಖುಷಿ ತಂದಿದೆ ಎಂದು ಸಮ್ಮೇಳನ ಸವಾಧ್ಯಕ್ಷ ಗೋಡೇದ ಹಳ್ಳಿ ರುದ್ರಪ್ಪ ಚನ್ನಬಸಪ್ಪ (ಗೊ.ರು.ಚ) ಹೇಳಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ತಿಂಗಳ ಅತಿಥಿ ಸಂವಾದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಜನರ ಬದುಕು, ಸಂಸ್ಕೃತಿ ಕಲೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ೧೯೬೭ರಲ್ಲಿ ಮೊಟ್ಟ ಮೊದಲ ಬಾರಿಗೆ ಜಾನ ಪದ ಸಾಹಿತ್ಯ ಸಮ್ಮೇಳನ ನಡೆಸಿದ್ದು, ರಾಜ್ಯಾದ್ಯಂತ ಇರುವ ಜಾನಪದ ತಜ್ಞರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ಹೊತ್ತಿನಲ್ಲಿ ಹೊರತಂದ ಹೊನ್ನ ಬಿತ್ತೇವು ಹೊಲಕ್ಕೆಲ್ಲ ಗ್ರಂಥಕ್ಕೆ ಜಾನಪದ ತಜ್ಞರು ಲೇಖನಗಳನ್ನು ನೀಡಿದ್ದಾರೆ. ಜಾನಪದ ಅಧ್ಯ ಯನ ಆಕಾರ ಗ್ರಂಥವಾಗಿದೆ ಎಂದು ಅಭಿಪ್ರಾಯಿಸಿದರು.
ವಾರ್ತಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಸಾಹಿತಿಗಳು, ಸಾಹಿತ್ಯ ಪರಿಚಾರಕರ ಸಂಪರ್ಕ ಬೆಳೆದು ಸಾಹಿತ್ಯ ಅಂಗಳದಲ್ಲಿ ಓಡಾಡಿದ್ದೇನೆ. ವಿದ್ವಾಂಸರು, ಶ್ರೇಷ್ಠರ ಸಂಪರ್ಕದಿಂದ ಜಾನಪದ ಕ್ಷೇತ್ರದಲ್ಲಿ ಒಂದಿಷ್ಟ್ರು ಸೇವೆಯನ್ನು ಸಲ್ಲಿಸಿದ್ದೇನೆ. ನನ್ನ ಸೇವೆಯನ್ನು ಗಮನಿಸಿ ಕನ್ನಡ ಸಾಹಿತ್ಯ ಪರಿಷತ್ ಸರ್ವಾನುಮತದಿಂದ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಗ್ರಾನೀಣ ಪ್ರದೇಶದಿಂದ ಬಂದ ನಾನು ನಿರಾಕರಿಸದೆ. ಒಪ್ಪಿಕೊಂಡಿದ್ದೇನೆ ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯವನಾದ ನಾನು ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತೋಷ ತಂದಿದೆ. ಮಂಡ್ಯ ಜಿಲ್ಲೆಯಲ್ಲಿ ಡಿ.೨೦ ರಿಂದ ಡಿ.೨೨ರ ವರೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು ಈ ಹಿಂದೆ ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಮಂಡ್ಯದಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಈಗ ಸಮ್ಮೇಳನದ ಸರ್ವಾಧ್ಯಕ್ಷನಾಗಿದ್ದು, ಅಂದು ನೀಡಿದ ಪ್ರೀತಿಯನ್ನೇ ಇಂದು ಕೂಡ ಮಂಡ್ಯ ಜಿಲ್ಲೆ ಜನರು ನೀಡುತ್ತಾರೆಂಬ ವಿಶ್ವಾಸವಿದೆ ಎಂದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನನ್ನ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಅವರಿಂದ ಪಡೆದಿದ್ದೇನೆ. ಈ ಹಿಂದೆ ಮಂಡ್ಯದಲ್ಲಿ ನಡೆದಿದ್ದ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯಲ್ಲಿದ್ದರು. ಅವರು ಮೃತ ರಾಗಿರುವ ಸುದ್ದಿ ಕೇಳಿ ಬೇಸರವಾಯಿತು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಅವರ ಅಗಲಿಕೆಯ ನೋವು ನಿವಾರಿಸಿಕೊಳ್ಳುವ ಶಕ್ತಿ ಆ ಕುಟುಂಬಕ್ಕೆ ದೇವರು ನೀಡಲಿ ಎಂದು ಹೇಳಿದರು.
ತಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಪರಿಷತ್ ಆರ್ಥಿಕ ಸ್ಥಿತಿ ಚಿಂತಾಜನಕವಾಗಿತ್ತು. ಪರಿಷತ್ತನ್ನು ಆರ್ಥಿಕವಾಗಿ ಸದೃಢವಾಗಿ ಬೆಳೆಸುವ ಹಾಗೂ ಪ್ರತಿಯೊಬ್ಬರಲ್ಲೂ ಕನ್ನಡಾಭಿಮಾನ ಬೆಳೆಸುವ ನಿಟ್ಟಿನಲ್ಲಿ ಪರಿಷತ್ತಿಗೆ ಒಂದು ರೂ. ದೇಣಿಗೆ ಯೋಜನೆ ರೂಪಿ ಸಿದ್ದೆ. ಸರ್ಕಾರ ಇಂದು ಉದಾರವಾದ ನೆರವು ನೀಡುತ್ತಿದೆ. ಪರಿಷತ್ತು ಶ್ರೀಮಂತ ಸಂಸ್ಥೆಯಾಗಿದೆ ಎಂದು ಅಭಿಪ್ರಾಯಿಸಿದ ಅವರು, ಪರಿಷತ್ತು ವಿಸ್ತಾರವಾಗಿದೆ. ಇದಕ್ಕೆ ಸಮ್ಮೇಳನಗಳು ಪ್ರಭಾವ ಬೀರಿವೆ ಎಂದರು.
ಸಮ್ಮೇಳನದಲ್ಲಿ ತಗೆದುಕೊಳ್ಳುವ ನಿರ್ಣಾಯಗಳನ್ನು ಸರ್ಕಾರ ಅನುಷ್ಠಾಣಕ್ಕೆ ತರುತ್ತಿಲ್ಲವೆಂದು ದೂರು ಇದೆ. ಸರ್ಕಾರ ನಿರ್ಣಾಯ ಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಆಧುನಿಕ ತಂತ್ರಜ್ಞಾನವನ್ನು ಒಳಸಿಕೊಂಡು ಇಂದಿನ ಯುವ ಪೀಳಿಗೆ ಸಾಹಿತ್ಯ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಸ್ಪಧಾತ್ಮಕ ಯುಗದಲ್ಲಿ ಓದುವುದರಲ್ಲಿ ಹಿಂದೆ ಬಿಳಬಾರದು ಎಂದು ಹೇಳಿದರು.
ಕನ್ನಡ ಶಾಲೆಗಳ ಅಳಿವಿನ ವಿಚಾರ ಕುರಿತು ಮಾತನಾಡಿ, ಪೋಷಕರಲ್ಲಿ ಭಯವಿದೆ. ಇಂಗ್ಲೀಷ್ ಭಾಷೆ ಕಲಿಯದಿದ್ದರೇ ಉದ್ಯೋ ಗ ಸಿಗುವುದಿಲ್ಲವೇನೋ ಎಂಬ ಭಾವನೆ ಇದೆ. ಇದನ್ನು ಹೋಗಲಾಡಿಸಿ, ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿ ನೀಡಿ ಪ್ರೌಢ ಶಿಕ್ಷಣದಲ್ಲಿ ಆಂಗ್ಲಭಾಷೆ ಜತೆಗೆ ಇತರೆ ಭಾಷೆಗೆ ಆದ್ಯತೆ ನೀಡುವುದರಿಂದ ಇಂಗ್ಲಿಷ್ ವ್ಯಾಮೋಹದಿಂದ ಹೊರ ಬರಬಹುದು ಎಂದರು.
ಪತ್ರಕರ್ತ ಬಿ.ತಿಪ್ಪೇರುದ್ರಪ್ಪ ಪ್ರಾಸ್ತಾವಿಸಿ, ಗೊ.ರು.ಚ ಅವರನ್ನು ಪರಿಚಯಿಸಿದರು. ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿದರು. ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಅಧ್ಯಕ್ಷತೆವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ರಾಜ್ಯಾಧ್ಯಕ್ಷ ಎನ್.ರಾಜು, ಪ್ರೆಸ್ಕ್ಲಬ್ ಕಾರ್ಯದರ್ಶಿ ತಾರಾನಾಥ, ಖಜಾಂಚಿ ಗೋಪಿ ಇದ್ದರು. ಪತ್ರಕರ್ತ ಉಮೇಶ್ಕುಮಾರ್ ವಂದಿಸಿದರು.
I am delighted to be elected as the President of the Sahitya Sammelana.