ಚಿಕ್ಕಮಗಳೂರು : ತಾಲ್ಲೂಕಿನ ಗೌಡನಹಳ್ಳಿ ಇಂಡಸ್ಟ್ರೀಯಲ್ ಏರಿಯಾ, ಅಂಬಿಕಾ ಪ್ಲೇವುಡ್ ಫ್ಯಾಕ್ಟರಿ ಪಕ್ಕದ ಬೀರೇಗೌಡರ ಮಾಲೀಕತ್ವದ ಮನೆಯಲ್ಲಿ ಬಾಡಿಗೆಗೆ ಇರುವ ಅಸ್ಸಾಂ ಮೂಲದ ವ್ಯಕ್ತಿ ಮಹಮ್ಮದ್ ರಬೂಲ್ ಇಸ್ಲಾಂ ತನ್ನ ಬಾಡಿಗೆ ಮನೆಯಲ್ಲಿ ಅಕ್ರಮವಾಗಿ ಗಾಂಜಾವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಹಾಗೂ ಕಾರ್ಮಿಕರಿಗೆ ಮಾರಾಟ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಮಾಡುತ್ತಿರುತ್ತಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆ ಪಿಎಸ್ಐ ರಘುನಾಥ್ ಎಸ್.ವಿ. ತಮ್ಮ ಸಿಬ್ಬಂದಿಗಳಾದ ಇಮ್ರಾನ್ ಖಾನ್ ಅನ್ವರ್ ಪಾಷಾ, ಮುಕ್ರೀಂ ಬೇಗ್, ಮಲ್ಲೇಗೌಡ ಹರಿಪ್ರಸಾದ್ ದಾಳಿ ನಡೆಸಿದ್ದು ಆರೋಪಿ ಮಹಮ್ಮದ್ ರಬೂಲ್ ಇಸ್ಲಾಂ ಬಿನ್ ಮಹಮ್ಮದ್ ಅಬ್ದುಲ್ ರಶೀದ್ ಎಂದು ಗುರುತಿಸಲಾಗಿದೆ.
ಅಂಬಿಕಾ ಪ್ಲೇವುಡ್ ಫ್ಯಾಕ್ಟರಿಯಲ್ಲಿ ಮರ ಕತ್ತರಿಸುವ ಕೂಲಿ ಕೆಲಸ, ಪ್ರಸ್ತುತ ವಿಳಾಸ ಗೌಡನಹಳ್ಳಿ ಇಂಡಸ್ಟ್ರೀಯಲ್ ಏರಿಯಾ, ಚಿಕ್ಕಮಗಳೂರು ತಾ: ಸ್ವಂತ ಊರು- ಜಾರಮಾರಿ ಹಳ್ಳಿ, ಬಲಿಸತ್ರ ಪೋಸ್ಟ್, ದಿಂಗ್ ಪಿಎಸ್, ನಗ್ಗಾಂವ್ ಜಿಲ್ಲೆ, ಅಸ್ಸಾಂ ರಾಜ್ಯ ಆಗಿದ್ದು ಆತನ ಬಳಿ ಸಿಕ್ಕ 05 ಕೆಜಿ 134 ಗ್ರಾಂ ಒಣ ಗಾಂಜಾ ಹಾಗೂ ಒಂದು ಮೊಬೈಲನ್ನು ವಶಕ್ಕೆ ಪಡೆದುಕೊಂಡು ಸಿಇಎನ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಮೊಕದ್ದಮೆ ಸಂಖ್ಯೆ:131/24 u/s 20(b)(ii)(b) NDPS ಆಕ್ಟ್ ರಂತೆ ಪ್ರಕರಣ ದಾಖಲಿಸಿರುತ್ತೆ.
Man arrested for selling ganja in Gowdanahalli