ಚಿಕ್ಕಮಗಳೂರು: ಡಿಸೆಂಬರ್ ೧೪ ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಜಿಲ್ಲೆಯಲ್ಲಿ ೬೬೪೮ ಪ್ರಕರಣಗಳನ್ನು ರಾಜಿ ಸಂದಾನಕ್ಕಾಗಿ ಕೈಗೆತ್ತಿಕೊಳ್ಳಲಾಗಿದ್ದು, ಇವುಗಳಲ್ಲಿ ಒಟ್ಟು ೩೦೩೪ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ತಿಳಿಸಿದ್ದಾರೆ.
ಸರ್ವರಿಗೂ ನ್ಯಾಯ ಇದು ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯೋದ್ದೇಶರಾಗಿದ್ದು, ಲೋಕ ಅದಾಲತ್ ಮೂಲಕ ಜನರಿಗೆ ತ್ವರಿತ ಮತ್ತು ಸಕ್ಷಮ ನ್ಯಾಯ ಒದಗಿಸುವಲ್ಲಿ ಮುಖ್ಯ ಪಾತ್ರವಹಿಸುತ್ತಿದೆ.
ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಇತ್ಯರ್ಥಗೊಂಡ ಪ್ರಕರಣಗಳ ಪೈಕಿ ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು ೧೨, ಚೆಕ್ ಅಮಾನ್ಯ ಪ್ರಕರಣಗಳು ೧೪೩, ಬ್ಯಾಂಕ್ ಪ್ರಕರಣಗಳು ೧೪, ಹಣ ವಸೂಲಾತಿ ಪ್ರಕರಣಗಳು ೧೬, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು ೧೭, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು ಸೇರಿದಂತೆ ಕಾರ್ಮಿಕ ವಿವಾದಗಳು ೦೧, ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ) ಪ್ರಕರಣಗಳು ೦೨, ವೈವಾಹಿಕ ಮತ್ತು ಕುಟುಂಬ ನ್ಯಾಯಾಲಯದ ಪ್ರಕರಣಗಳು ೦೪, ಭೂಸ್ವಾಧೀನಾ ಪ್ರಕರಣಗಳು ೦೬, ಸಿವಿಲ್ ಪ್ರಕರಣಗಳು (ಬಾಡಿಗೆ, ಅನುಭೋಗದ ಹಕ್ಕುಗಳು ನಿರ್ಬಂಧಕಾಜ್ಞೆ ಮೊಕದ್ದಮೆಗಳು) ೧೭೨, ಇತರೆ ಕ್ರಿಮಿನಲ್ (ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ವೈವಾಹಿಕ ಪ್ರಕರಣಗಳು) ೨೬೪೭ ಪ್ರಕರಣಗಳು ಸೇರಿವೆ.
ನ್ಯಾಯಾಲಯದಲ್ಲಿ ಬಾಕಿ ಇದ್ದ ಕೌಟುಂಬಿಕ ಪ್ರಕರಣಗಳ ಪೈಕಿ ೦೩ ಪ್ರಕರಣಗಳಲ್ಲಿ ಪತಿಪತ್ನಿಯರು ಸಹಬಾಳ್ವೆಯಿಂದ ಒಪ್ಪಿಗೆ ಜೀವನ ನಡೆಸುವುದಾಗಿ ಒಪ್ಪಿ ಪ್ರಕರಣ ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
National Lok Adalat Disposed of 3034 Cases