ಚಿಕ್ಕಮಗಳೂರು: ಪ್ರಜಾಪ್ರಭುತ್ವದ ದೇಗುಲದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಈ ಬಗ್ಗೆ ಸದನ ಸಮಿತಿ ರಚಿಸಿ ಸತ್ಯಾಂಶ ಹೊರತರಬೇಕು ಎಂದು ವಿಧಾನಪರಿಷತ್ ನಲ್ಲಿ ನಡೆದಿರುವ ಸಚಿವೆ ಹೆಬ್ಬಾಳ್ಕಾರ್ ಬಗ್ಗೆ ಸಿ.ಟಿ.ರವಿ ನಿಂಧನೆ ಪ್ರಕರಣದ ಬಗ್ಗೆ ವಿಧಾನಪರಿಷತ್ ಉಪಸಭಾಪತಿ ಎಂ.ಕೆ. .ಪ್ರಾಣೇಶ್ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಪರಿಷತ್ತಿಗೆ ಅದರದ್ದೇ ಆದ ಇತಿಹಾಸವಿದೆ.ಚಿಂತಕರ ಚಾವಡಿ ಎಂಬ ಹೆಸರಿದೆ. ಆದರೆ, ಕಾಂಗ್ರೆಸ್ ಸರಕಾರ ಸಂವಿಧಾನಕ್ಕೆ ಅಪಮಾನ ಮಾಡುವಂತಹ ರೀತಿಯಲ್ಲಿ ಪರಿಷತ್ತಿನಲ್ಲಿ ನಡೆದುಕೊಂಡಿದೆ. ಪರಿಷತ್ಸಭಾಪತಿ ಅವರು ಇಂತಹ ಘಟನೆ ನಡೆದಿರುವ ಬಗ್ಗೆ ದಾಖಲಾಗಿಲ್ಲ ಎಂದು ಹೇಳಿದ್ದಾರೆ. ಇಷ್ಟಾದರೂ ಮುಖ್ಯಮಂತ್ರಿಯವರು ಇದೊಂದು ಅಪರಾದ ಪ್ರಕರಣ ಎಂದು ಬಿಂಬಿಸಿ ಇದನ್ನು ರಾಜಕೀಯಕರಣ ಗೊಳಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.
ವಿಧಾನಪರಿಷತ್ತಿನಲ್ಲಿ ಇಂತ ಘಟನೆ ನಡೆಯಬಾರದಿತ್ತು. ಮಾಜಿ ಸಚಿವ ಸಿ.ಟಿ.ರವಿ ಅವರನ್ನು ಬಂಧನ ಮಾಡಿದರೂ ಈ ಬಗ್ಗೆ ಸಭಾಪತಿಗೆ ಮಾಹಿತಿ ನೀಡಿಲ್ಲ. ಮಾಚಿ ಸಚಿವರೊಬ್ಬರನ್ನು ಕೊಲೆಗಾರನಂತೆ ಬಂಸಿದ್ದಾರೆ. ಎನ್ ಕೌಂಟರ್ ಮಾಡುವವರನ್ನು ಕರೆದುಕೊಂಡು ಹೋಗುವವರಂತೆ ವಾಹನದಲ್ಲಿ ಸುತ್ತಿಸಿದ್ದಾರೆ ಎಂದರು.
ವಿಧಾನಪರಿಷತ್ತಿನಲಿ ಏನು ನಡೆದಿದೆ ಎಂಬ ಬಗ್ಗೆ ಒಂದು ಸದನ ಸಮಿತಿ ರಚಿಸಿ ತನಿಖೆ ಮಾಡಬೇಕು. ಏನಾಗಿದೆ ಎಂಬ ಸತ್ಯಾಂಶ ಹೊರಬರಬೇಕು. ಅಕಾರ ಇದೆ ಎಂದು ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಸಿ.ಟಿ.ರವಿ ಅವರನ್ನು ಬಂಸಿರುವುದು ಖಂಡನೀಯ ಜತೆಗೆ ಪೊಲೀಸ್ ಠಾಣೆಯಲ್ಲಿ ಪರಸ್ಪರ ಇಬ್ಬರ ವಿರುದ್ಧವೂ ದೂರು ದಾಖಲಾಗಿದ್ದರೂ ಒಬ್ಬರ ಮೇಲೆ ಮಾತ್ರ ಕ್ರಮ ಆಗುತ್ತಿದೆ ಏಕೆ ಎಂದರು. ಪ್ರಜಾಪ್ರಭುತ್ವದ ದೇಗುಲದಲ್ಲಿ ಇಂತಹ ಘಟನೆ ಮತ್ತೆ ಮರುಕಳಿಸಬಾರದು.
ಮಾಜಿ ಸಚಿವ ಸಿ.ಟಿ.ರವಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.ಬಿಜೆಪಿ ಮುಕಂಡರಾದ ಪ್ರೇಂಕುಮಾರ್, ಪುಟ್ಟಸ್ವಾಮಿ, ರತನ್ ಇದ್ದರು.
House committee formed to uncover the truth behind CT Ravi defamation case